ಪಡುಬಿದ್ರಿ: ಜನರ ಪ್ರೀತಿ ಮತ್ತು ವಿಶ್ವಾಸದಿಂದ ಶಾಸಕನಾಗಿ ಕಾರ್ಯನಿರ್ವಹಿಸುವ ಅವಕಾಶ ದೊರಕಿದ್ದು, ಪ್ರಾವಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ತೃಪ್ತಿ ಇದೆ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಬೆಳ್ಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2.30 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಯನ್ನು ಸೋಮವಾರ ಉದ್ಘಾಟಿಸಿ ಹಾಗೂ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಗೋಳಿದಡಿ ಕಲ್ಲೊಟ್ಟೆ ಸಂಪರ್ಕ ರಸ್ತೆ, ಬೆಳ್ಳೆ ರಾಜನ್ ಬೆಟ್ಟು ರಸ್ತೆ ಹಾಗೂ ಪಡುಬೆಳ್ಳೆ ಹೊಸವೊಕ್ಕಲು ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು. ಕಟ್ಟಿಂಗೇರಿ ರಸ್ತೆ, ಕಲ್ಲೊಟ್ಟೆ ರಸ್ತೆ, ಕಿನ್ಯಡ್ಕ ರಸ್ತೆ, ಗುಡ್ಡಬೆಟ್ಟು, ಅಂಕುದ್ರು, ಪಡುಬೆಳ್ಳೆ ಜೋಗಿ ಮುಗೇರ ಮನೆವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಲಾಯಿತು.
ಬೆಳ್ಳೆ ಗ್ರಾಪಂ ವಾಜಿ ಅಧ್ಯಕ್ಷರಾದ ದಿವ್ಯಾ ವಿ.ಆಚಾರ್ಯ, ರಾಜೇಂದ್ರ ಶೆಟ್ಟಿ, ಸುಧಾಕರ ಪೂಜಾರಿ, ಕಟ್ಟಿಂಗೇರಿ ದೇವಸ್ಥಾನ ಧರ್ಮದರ್ಶಿ ದೇವದಾಸ ಹೆಬ್ಬಾರ್, ಗ್ರಾಮ ಪಂಚಾಯಿತಿ ವಾಜಿ ಉಪಾಧ್ಯಕ್ಷ ಕಕ್ರಮನೆ ಹರೀಶ್ ಶೆಟ್ಟಿ ಬೆಳ್ಳೆ, ಸಾವಾಜಿಕ ನ್ಯಾಯ ಸಮಿತಿ ವಾಜಿ ಅಧ್ಯಕ್ಷ ಅಶೋಕ್ ತಿರ್ಲಪಲ್ಕೆ, ಗ್ರಾಪಂ ವಾಜಿ ಸದಸ್ಯರಾದ ಗುರುರಾಜ ಭಟ್ ಎಡ್ಮೇರು, ಶಂಕರ್ ದೇವಾಡಿಗ, ಗೋವಿಂದ ಸಪಲಿಗ, ವಿಶ್ವನಾಥ ಶೆಟ್ಟಿ, ಸತೀಶ್ ಶೆಟ್ಟಿ, ಗಣೇಶ್ ಕುಲಾಲ್, ಚಿಕ್ಕಲ್ಬೆಟ್ಟು ಭಾಸ್ಕರ ಶೆಟ್ಟಿ, ಶಂಕರ್ ಶೆಟ್ಟಿ, ಜಯ ಶೆಟ್ಟಿ ಉಪಸ್ಥಿತರಿದ್ದರು. ಆಶಾಲತಾ, ರಕ್ಷಿತಾ ನಿರೂಪಿಸಿದರು.