ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಶಾಸಕ ಹರೀಶ್ ಪೂಂಜ ಉದ್ಘಾಟಿಸಿದರು. ಮಹಮ್ಮದ್ ರಿಯಾಜ್, ವೆಂಕಟೇಶ್ ತುಳುಪುಳೆ, ಹೇಮಲತಾ, ರಾಜೇಂದ್ರ ಕೃಷ್ಣ, ಜಯರಾಜ ಜೈನ್ ಮತ್ತಿತರರಿದ್ದರು. 
ಉಡುಪಿ

ಶೈಕ್ಷಣಿಕ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಅಭಿನಂದಾರ್ಹ

ಬೆಳ್ತಂಗಡಿ: ಶಿಕ್ಷಕರ ಸಂಘಗಳು ಶೈಕ್ಷಣಿಕ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವುದು ಅಭಿನಂದಾರ್ಹ. ಶಾಲೆ, ಮಕ್ಕಳ ಮತ್ತು ವ್ಯವಸ್ಥೆಯ ಸಮಸ್ಯೆಗಳನ್ನು ಸಂಘಟನಾತ್ಮವಾಗಿ ಸರಿಪಡಿಸಲು ಸಂಘಟನೆಗಳು ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ಪ್ರೌಢಶಾಲಾ ಸಹಶಿಕ್ಷಕರ ಸಂಘ ಮುಂಚೂಣಿಯಲ್ಲಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ, ಬೆಳ್ತಂಗಡಿ ತಾಲೂಕು ಘಟಕ ವಾರ್ಷಿಕ ಸಭೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಬೆಳ್ತಂಗಡಿ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಉದ್ಘಾಟಿಸಿ ಮಾತನಾಡಿದರು.
ಪ್ರೌಢಶಾಲಾ ಸಹಶಿಕ್ಷಕರ ಸಂಘ ಬೆಳ್ತಂಗಡಿ ತಾಲೂಕು ಘಟಕ ಅಧ್ಯಕ್ಷ ರಾಧಾಕೃಷ್ಣ ತಚ್ಚಮೆ ಅಧ್ಯಕ್ಷತೆ ವಹಿಸಿದ್ದರು. ಬಡ್ತಿ ಹೊಂದಿದ ಶಿಕ್ಷಕರನ್ನು ಸನ್ಮಾನಿಸಲಾಯಿತು. ತಾಲೂಕಿನಿಂದ ವರ್ಗಾವಣೆಗೊಂಡ ಶಿಕ್ಷಕರನ್ನು ಬೀಳ್ಕೊಡಲಾಯಿತು. ಎಸ್ಸೆಸ್ಸೆಲ್ಸಿ ಸಾಧಕ ವಿದ್ಯಾರ್ಥಿಗಳನ್ನು, ನಿವೃತ್ತ ಲಿಪಿಕ ನೌಕರರನ್ನು ಗೌರವಿಸಲಾಯಿತು.
ಆಡಳಿತ ಶಾಲಾ ಶಿಕ್ಷಣ ಇಲಾಖೆ ಮಂಗಳೂರು ಉಪನಿರ್ದೇಶಕ ಶಶಿಧರ ಜಿ.ಎಸ್., ಜಿಲ್ಲಾಧ್ಯಕ್ಷ ಮಹಮ್ಮದ್ ರಿಯಾಜ್, ಮುಖ್ಯಶಿಕ್ಷಕರ ಸಂಘ ಅಧ್ಯಕ್ಷ ವೆಂಕಟೇಶ್ ತುಳುಪುಳೆ, ಮುಖ್ಯಶಿಕ್ಷಕಿ ಹೇಮಲತಾ, ಅಕ್ಷರದಾಸೋಹ ಸಹಾಯಕ ನಿರ್ದೇಶಕ ರಾಜೇಂದ್ರ ಕೃಷ್ಣ, ಸರ್ಕಾರಿ ನೌಕರ ಸಂಘ ಬೆಳ್ತಂಗಡಿ ಘಟಕ ಅಧ್ಯಕ್ಷ ಜಯರಾಜ ಜೈನ್, ಗ್ರೇಡ್ 1 ದೈಹಿಕ ಶಿಕ್ಷಕರ ಸಂಘ ಅಧ್ಯಕ್ಷ ಸುಭಾಶ್ಚಂದ್ರ ಪೂಜಾರಿ, ಪ್ರಾಥಮಿಕ ಮುಖ್ಯಶಿಕ್ಷಕ ಸಂಘ ಕಾರ್ಯದರ್ಶಿ ಸುರೇಶ್, ಜಿಪಿಟಿ ಸಂಘ ಅಧ್ಯಕ್ಷ ಯೋಗೇಶ್, ಲಿಪಿಕ ನೌಕರರ ಸಂಘ ಅಧ್ಯಕ್ಷ ಶಿವಶಂಕರ್ ಉಪಸ್ಥಿತರಿದ್ದರು.
ಕಾರ್ಯದರ್ಶಿ ಶಿವಪುತ್ರ ಸುಣಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಗೋಪಾಲಕೃಷ್ಣ ತುಳುಪುಳೆ ಸ್ವಾಗತಿಸಿದರು, ನಿರಂಜನ್ ಜೈನ್ ನಿರೂಪಿಸಿದರು.