ಆನೆಕೆರೆ ರಸ್ತೆ ಅಯೋಮಯವಾಗಿರುವುದು 
ಉಡುಪಿ

ಕಾರ್ಕಳ ಪೇಟೆಯಲ್ಲಿ ರಸ್ತೆ ತುಂಬ ಹೊಂಡಗಳು!

ಹರಿಪ್ರಸಾದ್ ನಂದಳಿಕೆ ಕಾರ್ಕಳ

ಮಳೆಗಾಲದ ಆರಂಭಕ್ಕೂ ಮುನ್ನವೇ ಕಾರ್ಕಳ ಪುರಸಭೆ ವ್ಯಾಪ್ತಿಯ ಬಹುತೇಕ ವಾರ್ಡ್‌ಗಳ ರಸ್ತೆಗಳಲ್ಲಿ ಹೊಂಡಗುಂಡಿಗಳು ಬಿದ್ದಿದ್ದು, ಸಾರ್ವಜನಿಕರು ಸಾಕಷ್ಟು ತೊಂದರೆಯನ್ನು ಅನುಭವಿಸಿದ್ದರು. ಜತೆಗೆ ನಗರ ಪ್ರಮುಖ ರಸ್ತೆಗಳಲ್ಲಿಯೂ ಬೃಹದಾಕಾರದ ಹೊಂಡಗಳು ನಿರ್ವಾಣವಾಗಿದ್ದು, ಸಾರ್ವಜನಿಕರು ಸಂಕಷ್ಟ ಎದುರಿಸುವಂತಾಗಿದೆ.
ಮಲೆನಾಡು ಹಾಗೂ ಕರಾವಳಿ ಭಾಗವನ್ನು ಸಂಪರ್ಕಿಸುವ ಹೆಬ್ಬಾಗಿಲಿನಂತಿರುವ ಕಾರ್ಕಳ ನಗರದ ಪುರಸಭಾ ವ್ಯಾಪ್ತಿಯ ರಸ್ತೆಗಳು ಪ್ರತಿವರ್ಷ ಹದಗೆಟ್ಟು ಜನರು ನರಕಯಾತನೆ ಅನುಭವಿಸುವುದು ಮಾಮೂಲಿಯಾಗಿದೆ. ಗೊಮ್ಮಟಬೆಟ್ಟ , ಚತುರ್ಮುಖ ಬಸದಿ , ಬಂಡಿಮಠ, ಸಾಲ್ಮರ , ರಥಬೀದಿ, ಮೂರು ವಾರ್ಗ, ಆನೆಕೆರೆ ಮಸೀದಿ ರಸ್ತೆ, ಕಾಬೆಟ್ಟು ರಸ್ತೆ, ಅನಂತಶಯನ ವೃತ್ತ ಹೀಗೆ ಅನೇಕ ರಸ್ತೆಗಳು ಹೊಂಡಮಯವಾಗಿವೆ. ನಿತ್ಯ ಜನಸಾವಾನ್ಯರಿಂದ ಹಿಡಿದು ವಾಹನ ಸವಾರರು ಹಾಗೂ ಸಾರ್ವಜನಿಕರು ತೊಂದರೆಯನ್ನು ಅನುಭವಿಸುತ್ತಿದ್ದು, ಈ ಬಗ್ಗೆ ‘ವಿಜಯವಾಣಿ’ ರಿಯಾಲಿಟಿ ಚೆಕ್ ನಡೆಸಿದೆ.

ಆನೆಕೆರೆ ರಸ್ತೆಯಲ್ಲಿ ಅಪಾಯ

ಮಾ

ದಾನಶಾಲೆ ಮಾರ್ಗದಲ್ಲಿ ಹೊಂಡ

ರ್ಮಾ

ಬಂಡೀಮಠ ಸಂಪರ್ಕ ದುಸ್ತರ

ಮಾ

ಪೆರ್ವಾಜೆ ಸಂಚಾರ ಅಯೋಮಯ

ಮಾ

ರುಕಟ್ಟೆಯಿಂದ ಪೆರ್ವಾಜೆ ಪರಿಸರವನ್ನು ಸಂಪರ್ಕ ಸಾಧಿಸುವ ಪೆರ್ವಾಜೆ ರಸ್ತೆಯೂ ಹೊಂಡಮಯವಾಗಿದೆ.

ಮಾ

ಮಾ

ತೆಳ್ಳಾರು ಪ್ರಯಾಣ ಸಂಚಕಾರ

ಕಾರ್ಕಳದಿಂದ ಮುಂಡ್ಲಿ, ತೆಳ್ಳಾರು, ಶಿರ್ಲಾಲು ಭಾಗದ ಜನರ ಓಡಾಟದ ಪ್ರಮುಖ ರಸ್ತೆಗಳಲ್ಲಿ ಒಂದಾದ ತೆಳ್ಳಾರು ರಸ್ತೆ ಹಲವು ಸಮಯದಿಂದ ಹೊಂಡವಾಗಿದ್ದು, ಈ ಭಾಗದ ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗಿದೆ. ಈ ಭಾಗದಲ್ಲಿ ಆಸ್ಪತ್ರೆಯೂ ಇದ್ದು, ತುರ್ತು ಸಂದರ್ಭದಲ್ಲಿ ವಾಹನ ಸವಾರರು ಸಂಕಟಪಡುವಂತಾಗಿದೆ.

ಬಸ್ ನಿಲ್ದಾಣ ರೋಡ್‌ನಲ್ಲಿ ಗುಂಡಿ

ಮಾ

ರ್ಮಾ

ಕಾರ್ಕಳ ಪುರಸಭೆ ವ್ಯಾಪ್ತಿಯ ಬಹುತೇಕ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ನಿತ್ಯ ಹೊಂಡ ತುಂಬಿದ ರಸ್ತೆಯಲ್ಲೇ ಸಾರ್ವಜನಿಕರು ಓಡಾಡುವ ದುಃಸ್ಥಿತಿ ಒದಗಿ ಬಂದಿದೆ. ರಸ್ತೆಗಳು ಹೊಂಡಬಿದ್ದು ಹಲವು ಸಮಯ ಕಳೆದರೂ ಇನ್ನೂ ರಸ್ತೆಯ ಹೊಂಡ ಮುಚ್ಚುವಲ್ಲಿ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ.

— ರಮೇಶ್ ಪೂಜಾರಿ ಸ್ಥಳೀಯ

ರಸ್ತೆಗಳ ಪರಿಸ್ಥಿತಿ ಶೋಚನೀಯವಾಗಿದೆ. ಯಾವ ರಸ್ತೆಯಲ್ಲಿ ಹೋದರೂ ಬೃಹದಾಕಾರದ ಹೊಂಡಗಳು ಸಿಗುತ್ತವೆ. ಉಡುಪಿ ಬಸ್‌ಗಳು ಓಡಾಡುತ್ತಿದ್ದ ಹಿಂದಿನ ನಿಲ್ದಾಣದಲ್ಲಿ ಹೊಂಡಗಳೇ ತುಂಬಿವೆ. ಈ ಭಾಗದಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ಅಡ್ಡಾದಿಡ್ಡಿ ಪಾರ್ಕ್ ವಾಡಲಾಗುತ್ತಿದ್ದು, ಬಸ್‌ಗಳ ಓಡಾಟಕ್ಕೂ ತೊಂದರೆಯಾಗುತ್ತಿದೆ. ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳುವ ಅಗತ್ಯವಿದೆ.

— ರಮಿತಾ ಸೂರ್ಯವಂಶಿ ಸಾಮಾಜಿಕ ಕಾರ್ಯಕರ್ತೆ