ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಅಭಿಪ್ರಾಯ ಸಂಗ್ರಹ ಮಾಡಲು ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಸಮಿತಿಯನ್ನು ಭೇಟಿ ಮಾಡಿ ಕಾರ್ಯಕರ್ತ ಸಭೆಯನ್ನುದ್ದೇಶಿಸಿ ಎಐಸಿಸಿ ವೀಕ್ಷಕ, ಕೇರಳ ರಾಜ್ಯದ ಶಾಸಕ ಜಯಂತ್ ಮಾತನಾಡಿದರು. ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಜಯಪ್ರಕಾಶ್ ಹೆಗ್ಡೆ ಮೊದಲಾದವರಿದ್ದರು.
ಹಳೆಯಂಗಡಿ: ರಾಹುಲ್ ಗಾಂಧಿಯವರ ದೂರ ದೃಷ್ಟಿಯುಳ್ಳ ಚಿಂತನೆಯಿಂದ ಕಾರ್ಯಕರ್ತರ, ಸ್ಥಳೀಯ ನಾಯಕರ ಅಭಿಪ್ರಾಯದ ಅನುಗುಣವಾಗಿಯೇ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿ ಆಗುತ್ತಿದ್ದು, ಎಐಸಿಸಿ ನಿಗದಿಪಡಿಸಿದ ಮಾನದಂಡದ ಪ್ರಕಾರ ಪಕ್ಷದ ನಾಯಕರ ಅಭಿಪ್ರಾಯ ಪಡೆಯಲಿದೆ ಎಂದು ಎಐಸಿಸಿ ವೀಕ್ಷಕ, ಕೇರಳ ರಾಜ್ಯದ ಶಾಸಕ ಜಯಂತ್ ಹೇಳಿದರು.
ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಅಭಿಪ್ರಾಯ ಸಂಗ್ರಹ ಮಾಡಲು ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಸಮಿತಿಯನ್ನು ಭೇಟಿ ಮಾಡಿ ಕಾರ್ಯಕರ್ತ ಸಭೆಯನ್ನುದ್ದೇಶಿಸಿ ಮಾತನಾಡಿದರು.
ದ.ಕ. ಜಿಲ್ಲೆಗೆ ಯೋಗ್ಯ, ಕ್ರಿಯಾಶೀಲ, ಜಾತ್ಯತೀತ ನಿಲುವಿನ ಬದ್ಧತೆಗೆ ಪೂರಕವುಳ್ಳ ಅಧ್ಯಕ್ಷರ ಅಗತ್ಯ ಇದ್ದು, ಕಾರ್ಯಕರ್ತರೆಲ್ಲರೂ ಈ ಬಗ್ಗೆ ಚಿಂತನೆ ನಡೆಸಿ ಯೋಗ್ಯ ನಾಯಕನ ಹೆಸರನ್ನೇ ಶಿಾರಸು ಮಾಡಿ ಎಂದರು.
ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಮೂಲ್ಕಿ ಮೂಡುಬಿದಿರೆ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ವಸಂತ ಬರ್ನಾಡ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನವಾಜ್ ಮೊದಲಾದವರು ಉಪಸ್ಥಿತರಿದ್ದರು. ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಕಂಬಾರ ವಂದಿಸಿದರು.