ಮೂಡುಬಿದಿರೆಯಲ್ಲಿ ಪದ್ಮಾವತಿ ಪಂಡಿತ್, ಶ್ರೀಕೃಷ್ಣ ಆಹಿತಾನಲ ಅವರ ಕೃತಿಗಳ ಲೋಕಾರ್ಪಣೆಗೊಳಿಸಲಾಯಿತು. ಮಂಗಳೂರಿನ ಆಕೃತಿ ಆಶಯ ಪ್ರಕಾಶನದ ಪ್ರಕಾಶಕ ಕಲ್ಲೂರು ನಾಗೇಶ್, ವಕೀಲ ಕೆ.ಆರ್.ಪಂಡಿತ್, ಮೂಡುಬಿದಿರೆ ಮಹಾವೀರ ಕಾಲೇಜು ಕನ್ನಡ ಉಪನ್ಯಾಸಕಿ ಡಾ.ಚಂದನಾ ಕೆ.ಎಸ್. ಮೊದಲಾದವರಿದ್ದರು.
ಮೂಡುಬಿದಿರೆ: ಪುಸ್ತಕಗಳು ಸತ್ಯ, ವಿವೇಕ ಬೆಳೆಸುವ ಶಕ್ತಿ ಹೊಂದಿವೆ. ಈ ಎರಡು ಕೃತಿಗಳು ಲೇಖಕರ ಜೀವನಾನುಭವದ ಪ್ರತಿಫಲವಾಗಿದ್ದು, ಜೀವನಾನುಭವ ಹಂಚಿಕೊಳ್ಳುವ ಉದ್ದೇಶದಿಂದ ರಚನೆಯಾಗಿವೆ ಎಂದು ಮಂಗಳೂರಿನ ಆಕೃತಿ ಆಶಯ ಪ್ರಕಾಶನದ ಪ್ರಕಾಶಕ ಕಲ್ಲೂರು ನಾಗೇಶ್ ಹೇಳಿದರು.
ಸಮಾಜ ಮಂದಿರದಲ್ಲಿ ಭಾನುವಾರ ನಿವೃತ್ತ ಮುಖ್ಯ ಶಿಕ್ಷಕಿ ಪದ್ಮಾವತಿ ಪಂಡಿತ್ ಮೂಡುಬಿದಿರೆ ಅವರ ‘ಕಿಟಕಿಯಲ್ಲಿ ಕಂಡ ಕಥೆಗಳು’ ಕಥಾ ಸಂಕಲನ, ಕೋಟ ಶ್ರೀಕೃಷ್ಣ ಆಹಿತಾನಲ ಅವರ ಹರಿದಾಸ ಸಾಹಿತ್ಯ, ಇತರ ಧಾರ್ಮಿಕ ವಿಚಾರಗಳು ಗದ್ಯ ಬರಹಗಳ ಸಂಕಲನದ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಕೀಲ ಕೆ.ಆರ್.ಪಂಡಿತ್ ಕಥಾ ಸಂಕಲನ ಬಿಡುಗಡೆ ಮಾಡಿದರು. ಮಹಾವೀರ ಕಾಲೇಜು ಕನ್ನಡ ಉಪನ್ಯಾಸಕಿ ಡಾ.ಚಂದನಾ ಕೆ.ಎಸ್. ಎರಡು ಕೃತಿಗಳ ಕುರಿತು ಮಾತನಾಡಿದರು. ಗದ್ಯ ಬರಹಗಳ ಸಂಕಲನ ಬಿಡುಗಡೆ ಮಾಡಿದ ಹಿರಿಯ ಶಿಕ್ಷಕ ರಾಮಚಂದ್ರ ಭಟ್ ನಾಟೇಕರ್, ಕೋಟ ವಿವೇಕ ಆಂಗ್ಲ ಮಾಧ್ಯಮ ಪ್ರೌಢಶಾಲೆ ನಿವೃತ್ತ ಮುಖ್ಯಶಿಕ್ಷಕ ಶ್ರೀಪತಿ ಹೇರ್ಳೆ, ಕನ್ನಡ ಉಪನ್ಯಾಸಕಿ ಶ್ರೀ ಮುದ್ರಾಡಿ, ಗಣೇಶ್ ಕಾಮತ್ ಮತ್ತಿತರರು ಮಾತನಾಡಿದರು.
ಚಾಣಕ್ಯ ಯೂನಿವರ್ಸಿಟಿ ಕುಲಪತಿ ಪ್ರೊ.ಯಶವಂತ ಡೋಂಗ್ರೆ ಉಪಸ್ಥಿತರಿದ್ದರು. ಸಮಾಜ ಮಂದಿರ ಸಭಾ ಕಾರ್ಯದರ್ಶಿ ಸುರೇಶ್ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಪ್ರೌಢಶಾಲಾ ಶಿಕ್ಷಕರಾದ ಚಿತ್ರಾಶ್ರೀ ಕೆ.ಎಸ್., ಮಹೇಶ್ ಕರ್ಕೇರ ನಿರೂಪಿಸಿದರು. ಧೃತಿ ಪಂಡಿತ್ ವಂದಿಸಿದರು.