ಜಮ್ಮದಮನೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ರಾಯರ ಆರಾಧನಾ ಮಹೋತ್ಸದಲ್ಲಿ ಶ್ರೀಕೃಷ್ಣ ಕುಂಜತ್ತೂರು ಮಾತನಾಡಿದರು. ಶಶಿಧರ ಶೆಟ್ಟಿ ಜಮ್ಮದ ಮನೆ, ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್. ಮೊದಲಾದವರು ಇದ್ದರು.
ಮಂಜೇಶ್ವರ: ರಾಯರ ತತ್ವಗಳು ಮತ್ತು ಅವರು ತೋರಿದ ಧರ್ಮದ ಹಾದಿ ಇಂದಿನ ಸಮಾಜಕ್ಕೆ ಅತ್ಯಂತ ಪ್ರಸ್ತುತ ಎಂದು ಧಾರ್ಮಿಕ ಸಾಮಾಜಿಕ ಮುಂದಾಳು ಶ್ರೀಕೃಷ್ಣ ಕುಂಜತ್ತೂರು ಹೇಳಿದರು.
ಮಂಜೇಶ್ವರ ಹೊಸಬೆಟ್ಟು ಜಮ್ಮದಮನೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಭಾನುವಾರ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದಲ್ಲಿ ಮಾತನಾಡಿದರು.
ರಾಘವೇಂದ್ರ ಸ್ವಾಮಿಗಳು ಜಾತಿ, ಮತ ಭೇದವಿಲ್ಲದೆ ಇಡೀ ಮಾನವಕುಲವನ್ನು ಹರಸುವ ಜಗದ್ಗುರುಗಳಾಗಿದ್ದಾರೆ. ಅವರ ಆದರ್ಶಗಳು ಮತ್ತು ಕೃತಿಗಳು ಸಮಾಜಕ್ಕೆ ಸದಾ ದಾರಿದೀಪವಾಗಿವೆ ಎಂದರು.
ಯಾದವ ಶರ್ಮ ನೀರ್ಚಾಲು ಪೌರೋಹಿತ್ಯದಲ್ಲಿ ಶ್ರೀ ಗುರುರಾಯರ ವಿಶೇಷ ಪಾದಪೂಜೆ, ಮಹಾ ಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಶಶಿಧರ ಶೆಟ್ಟಿ ಜಮ್ಮದ ಮನೆ, ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್., ಮೀಂಜ ಗ್ರಾಪಂ ಮಾಜಿ ಅಧ್ಯಕ್ಷೆ ಸುಂದರಿ ಆರ್.ಶೆಟ್ಟಿ, ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷೆ ಕಮಲಾಕ್ಷಿ ಕೆ.ಪಾವೂರು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಹೈಮೇಶ್ ಬಿ.ಎಂ., ಯಾದವ ಬಡಾಜೆ, ವಕೀಲ ನವೀನ್‌ರಾಜ್ ಕೆ.ಜೆ., ಗುರುಸ್ವಾಮಿ ಉದಯ ಪಾವಳ, ಸುದರ್ಶನ ಕುಮಾರ್ ಜೈನ್, ತುಳಸಿದಾಸ್ ಮಂಜೇಶ್ವರ ಮೊದಲಾದವರು ಉಪಸ್ಥಿತರಿದ್ದರು.
ಪತ್ರಕರ್ತ ರತನ್ ಕುಮಾರ್ ಹೊಸಂಗಡಿ ಸ್ವಾಗತಿಸಿದರು. ರಾಜೇಶ್ ಕಡಂಬಾರು ವಂದಿಸಿದರು. ಜಯ ಮಣಿಯಂಪಾರೆ ನಿರೂಪಿಸಿದರು.
ಲೇಖನ ಯಜ್ಞದ ಪುಸ್ತಕ ವಿತರಣೆ
ನಟಿ ರೂಪಶ್ರೀ ವರ್ಕಾಡಿ ಮತ್ತು ನಟ, ನಿರ್ದೇಶಕ ಜೆ.ಪಿ.ತೂಮಿನಾಡ್ ಅವರನ್ನು ಸನ್ಮಾನಿಸಲಾಯಿತು. ಅನಂತ ಕೋಟಿ ಅಷ್ಟಾಕ್ಷರ ಲೇಖನ ಯಜ್ಞದ ಪುಸ್ತಕವನ್ನು ಉಚಿತವಾಗಿ ವಿತರಿಸಲಾಯಿತು. ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಲತೀಫ್ ಮೀಯಪದವು ಕೊಡಮಾಡಿದ ದೇರಳಕಟ್ಟೆ ಖಾಸಗಿ ಆಸ್ಪತ್ರೆಯ ಉಚಿತ ಹೆಲ್ತ್ ಕಾರ್ಡ್ ವಿತರಣೆ ನಡೆಯಿತು.