Punishment 
ಉಡುಪಿ

ಅಪರಾಧಿಗೆ ಜೀವಾವಧಿ ಶಿಕ್ಷೆ ಸಹಿತ ದಂಡ

ಕುಂದಾಪುರ: ಗಂಗೊಳ್ಳಿ ಠಾಣಾ ವ್ಯಾಪ್ತಿಯ ಹರ್ಕೂರಿನಲ್ಲಿ 2023ರಲ್ಲಿ ಮಲಗಿದ್ದ ವ್ಯಕ್ತಿಯ ತಲೆಯ ಮೇಲೆ ಕಲ್ಲು ಹಾಕಿ ಕೊಲೆ ಮಾಡಿದ ಪ್ರಕರಣದಲ್ಲಿ ಅಪರಾಧಿ ರಾಜು ಅವರಿಗೆ ಜೀವಾವಧಿ ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿ ಕುಂದಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅಬ್ದುಲ್ ರಹೀಂ ಹುಸೇನ ಶೇಖ್ ಅಂತಿಮ ತೀರ್ಪು ನೀಡಿದ್ದಾರೆ.
ಹರ್ಕೂರು ಗ್ರಾಮದ ಮೇಸ್ತ್ರಿ ನಾಗರಾಜ ಆಚಾರಿ ಎಂಬುವರ ಬಳಿ ಸಂಗೋದಪ್ಪ ಹಾಗೂ ರಾಜು ಎಂಬುವರು ಗಾರೆ ಕೆಲಸ ಮಾಡುತ್ತಿದ್ದರು. ಸಂಬಳದ ವಿಚಾರವಾಗಿ ಕೆಲಸಗಾರರಿಬ್ಬರ ನಡುವೆ ಗಲಾಟೆ ತಾರಕಕ್ಕೇರಿ ರಾಜು ಕೆಂಪು ಕಲ್ಲನ್ನು ಸಂಗೋದಪ್ಪನ ತಲೆ ಮೇಲೆ ಎತ್ತಿ ಹಾಕಿ ಕೊಲೆ ಮಾಡಿದ್ದರು. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ 2023ರ ಮೇ 15ರಂದು ಪ್ರಕರಣ ದಾಖಲಾಗಿತ್ತು.