ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನದಲ್ಲಿ ಮೂಗುತಿ ಧಾರಣೆ ಕಾರ್ಯಕ್ರಮವನ್ನು ಸಾಯಿ ಈಶ್ವರ ಗುರೂಜಿ ಉದ್ಘಾಟಿಸಿದರು. ಗೀತಾಂಜಲಿ ಸುವರ್ಣ, ಸತೀಶ ದೇವಾಡಿಗ, ಪ್ರಕಾಶ ಆಚಾರ್ಯ, ರಾಜೇಶ ಆಚಾರ್ಯ, ಲಾವಣ್ಯಾ, ವಿನೋದಕುಮಾರ, ರಾಘವೇಂದ್ರ ಪ್ರಭು ಇತರರಿದ್ದರು. 
ಉಡುಪಿ

ಸನಾತನ ಸಂಸ್ಕೃತಿಯ ಪ್ರತೀಕ ಮೂಗುತಿ

* ಸಮಾಜ ಸೇವಕಿ ಗೀತಾಂಜಲಿ ಸುವರ್ಣ ಅನಿಸಿಕೆ

* ಶ್ರೀ ಕ್ಷೇತ್ರ ಶಂಕರಪುರದಲ್ಲಿ 108 ಹೆಣ್ಣು ಮಕ್ಕಳಿಗೆ ಧಾರಣೆ

ಉಡುಪಿ: ಶರನ್ನವರಾತ್ರಿಯು ದೇವಿಯರ ಶಕ್ತಿ, ಪರಾಕ್ರಮ ಅರಿತು ಭಕ್ತಿಯಿಂದ ಆರಾಧಿಸುವ ಹಬ್ಬವಾಗಿದೆ. ಶ್ರೀ ಕ್ಷೇತ್ರ ಶಂಕರಪುರದಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾಮಾಜಿಕ ಚಟುವಟಿಕೆ ನಿರಂತರ ನಡೆಯುತ್ತಿವೆ. 'ಸ್ತ್ರೀ ಸೌಭಾಗ್ಯ' ಅಭಿಯಾನದಡಿ ಈಗಾಗಲೇ 1,354 ಹೆಣ್ಣು ಮಕ್ಕಳಿಗೆ ಮೂಗುತಿ ಧಾರಣೆ ಮಾಡಲಾಗಿದೆ. ದುರ್ಗಾಷ್ಟಮಿ ನಿಮಿತ್ತ ಮತ್ತೆ 108 ಹೆಣ್ಣುಮಕ್ಕಳಿಗೆ ಧಾರಣೆ ಮಾಡಲಾಗಿದೆ. ಮೂಗುತಿಯು ಸನಾತನ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಸಮಾಜ ಸೇವಕಿ ಕ್ಷೇತ್ರದ ಟ್ರಸ್ಟಿ ಗೀತಾಂಜಲಿ ಸುವರ್ಣ ತಿಳಿಸಿದರು.

ಉಡುಪಿ ಕಟಪಾಡಿ ಸಮೀಪದ ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನದಲ್ಲಿ ನವರಾತ್ರಿಯ ದುರ್ಗಾಷ್ಟಮಿ ನಿಮಿತ್ತ ಆಶ್ರಮದ ವತಿಯಿಂದ ಸೋಮವಾರ (ಅ.19) ಆಯೋಜಿಸಿದ್ದ 'ಸ್ತ್ರೀ ಸೌಭಾಗ್ಯ' ಅಭಿಯಾನದಡಿ 108 ಹೆಣ್ಣು ಮಕ್ಕಳಿಗೆ ಮೂಗುತಿ ಧಾರಣೆ ಕಾರ್ಯಕ್ರಮದಲ್ಲಿ ಮಾತನಾಡಿರು.

ಶ್ರೀ ಕ್ಷೇತ್ರ ಶಂಕರಪುರ ಏಕ ಜಾತಿ ಧರ್ಮ ಪೀಠದ ಸಾಯಿ ಈಶ್ವರ ಗುರೂಜಿ ಕಾರ್ಯಕ್ರಮ ಉದ್ಘಾಟಿಸಿದರು.

ಟ್ರಸ್ಟಿ ಸತೀಶ ದೇವಾಡಿಗ, ಪ್ರಕಾಶ ಆಚಾರ್ಯ, ರಾಜೇಶ ಆಚಾರ್ಯ, ಆಡಳಿತ ಮಂಡಳಿಯ ಲಾವಣ್ಯಾ, ವಿನೋದಕುಮಾರ, ರಾಜೇಶ ಇನ್ನಂಜೆ, ಶ್ವೇತಾ, ಜಯರಾಮ ಶೆಟ್ಟಿಗಾರ, ಪ್ರತಿಮಾ ಪ್ರಭಾಕರ, ಜ್ಯೋತಿ ಶೆಟ್ಟಿ, ಚೇತನಾ ಶೆಟ್ಟಿ, ವಿಘ್ನೇಶ ನೀಲಾವರ, ನಾಗರಾಜ ಬೈಂದೂರು, ವಿಜಯ ಕುಂದರ್​ ಇತರರಿದ್ದರು. ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರ್ವಹಿಸಿದರು.