ಮಾಳ ಸರ್ಕಾರಿ ಶಾಲಾ ಆವರಣದಲ್ಲಿ ನಡೆದ ಕರು ಪ್ರದರ್ಶನ. ಮುಖ್ಯ ಪಶುವೈದ್ಯಾಧಿಕಾರಿ ಡಾ.ಸುನೀಲ್ ಕುವಾರ್ ಕೆ.ಬಿ., ಮುಖ್ಯ ಪಶುವೈದ್ಯಾಧಿಕಾರಿಗಳಾದ ಡಾ.ಉದಯ ಕುವಾರ್ ಶೆಟ್ಟಿ, ಡಾ.ಪ್ರದೀಪ್ ಎನ್.ಕೊಂಡೀಜಿ ಮತ್ತಿತರರು ಉಪಸ್ಥಿತರಿದ್ದರು. 
ಉಡುಪಿ

ಮಾಳ ಸರ್ಕಾರಿ ಶಾಲೆಯಂಗಳದಲ್ಲಿ ಕರುಗಳ ಕಲರವ

ಹರಿಪ್ರಸಾದ್ ನಂದಳಿಕೆ ಕಾರ್ಕಳ
ಆಧುನಿಕ ಯುಗದಲ್ಲಿ ಕೃಷಿ ಮತ್ತು ಪಶುಸಂಗೋಪನೆಯಿಂದ ದೂರವಾಗುತ್ತಿರುವ ಯುವ ಪೀಳಿಗೆ, ಸಾರ್ವಜನಿಕರಲ್ಲಿ ಈ ಬಗ್ಗೆ ಅರಿವು ಮೂಡಿಸುವ ಸಲುವಾಗಿ ವಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಆಯೋಜಿಸಲಾಗಿದ್ದ ಕರುಗಳ ಪ್ರದರ್ಶನ ಸಾರ್ವಜನಿಕರ ಕಣ್ಮನ ಸೆಳೆಯಿತು.
ಕೇವಲ ಪಠ್ಯ ಪುಸ್ತಕಕ್ಕೆ ಸೀಮಿತವಾಗದೆ, ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನ ನೀಡುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮಕ್ಕೆ ಗ್ರಾಮಸ್ಥರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಜಿಪಂ ಪಶುಪಾಲನಾ ಇಲಾಖೆ, ಸುತ್ತಮುತ್ತಲಿನ ಹಾಲು ಉತ್ಪಾದಕರ ಸಹಕಾರ ಸಂ, ದ.ಕ. ಹಾಲು ಒಕ್ಕೂಟ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕರು ಪ್ರದರ್ಶನ ಕಾರ್ಯಕ್ರಮದಲ್ಲಿ ರೈತರು ತಮ್ಮ ಮನೆಯ ಹಟ್ಟಿಗಳಲ್ಲಿ ಅಕ್ಕರೆಯಿಂದ ಸಾಕಿದ ವಿವಿಧ ತಳಿಯ ಸುಂದರ ಕರುಗಳನ್ನು ಪ್ರದರ್ಶಿಸಿದರು.
ಗಟ್ಟಿಮುಟ್ಟಾದ ಮಲೆನಾಡು ಗಿಡ್ಡ, ಹೈಬ್ರಿಡ್ ತಳಿ, ಕಪಿಲ ತಳಿಯ ಕರುಗಳು ಗಮನ ಸೆಳೆದವು. ವಿವಿಧ ಕಡೆಯಿಂದ ರೈತರು ಕರೆ ತಂದಿದ್ದ ಸುವಾರು 98 ಮುದ್ದಾದ ಕರುಗಳು ವಿಶೇಷವಾಗಿ ಗಮನ ಸೆಳೆದವು. ತಿಂಗಳ ಪ್ರಾಯದಿಂದ ವರ್ಷದವರೆಗಿನ ಪುಟಾಣಿ ಕರುಗಳನ್ನು ಪ್ರದರ್ಶಿಸಲಾಯಿತು. ಅವುಗಳ ಆರೈಕೆ, ಪೋಷಣೆ, ವೈಜ್ಞಾನಿಕ ಹೈನುಗಾರಿಕೆ ಕುರಿತು ರೈತರು, ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಆಶಯವಾಗಿತ್ತು.
ಗಣ್ಯರ ಮೆಚ್ಚುಗೆ: ದ.ಕ. ಹಾಲು ಒಕ್ಕೂಟದ ನಿರ್ದೇಶಕ ಸುಧಾಕರ ಶೆಟ್ಟಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ, ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ರೆಡ್ಡಪ್ಪ ಎಂ.ಸಿ., ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ವಾಧವ ಐತಾಳ್, ವಾಳ ಗ್ರಾಪಂ ಉಪಾಧ್ಯಕ್ಷೆ ವಿಮಲಾ ಪೂಜಾರಿ, ಹಾಲು ಉತ್ಪಾದಕರ ಸಹಕಾರ ಸಂಗಳ ಅಧ್ಯಕ್ಷ ಸುಕೇಶ್ ಶೆಟ್ಟಿ, ಚಂದ್ರರಾಜ್ ಶೆಟ್ಟಿ, ಪ್ರಫುಲ್ಲ ಎಂ.ಬಲ್ಲಾಳ್, ಸಿ.ಎಂ.ಟೋಮಿ, ರಾವೇಂದ್ರ ಶೆಟ್ಟಿ, ಭೋಜ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯ ಪಶುವೈದ್ಯಾಧಿಕಾರಿಗಳಾದ ಡಾ.ಉದಯ ಕುವಾರ್ ಶೆಟ್ಟಿ, ಡಾ.ಪ್ರದೀಪ್ ಎನ್.ಕೊಂಡೀಜಿ ನಿರ್ಣಾಯಕರಾಗಿ ಭಾಗವಹಿಸಿದ್ದರು. ಮುಖ್ಯ ಪಶುವೈದ್ಯಾಧಿಕಾರಿ ಡಾ.ಸುನೀಲ್ ಕುವಾರ್ ಕೆ.ಬಿ. ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಲ್ಲಿ ಕುತೂಹಲ

ಶಾಲಾ ಮಕ್ಕಳು ಕರುಗಳ ಹತ್ತಿರ ಹೋಗಿ ಅವುಗಳ ತಳಿ, ಆಹಾರ ಕ್ರಮ, ಆರೈಕೆ ಬಗ್ಗೆ ವಾಹಿತಿ ಪಡೆದರು. ದೇಸಿ ತಳಿಗಳು, ಜೆರ್ಸಿ, ಎಚ್.ಎಫ್ ತಳಿಗಳ ನಡುವಿನ ವ್ಯತ್ಯಾಸ ತಿಳಿದುಕೊಂಡರು. ಕೃಷಿ ಪ್ರೇಮ ಬೆಳೆಸುವಲ್ಲಿ ಈ ಪ್ರದರ್ಶನ ಯಶಸ್ವಿಯಾಯಿತು. ಸುತ್ತಮುತ್ತಲ ಗ್ರಾಮಗಳ ನೂರಾರು ಕೃಷಿಕರು ಆಗಮಿಸಿ, ಪಶುಸಂಗೋಪನೆಯಲ್ಲಿ ಆಧುನಿಕ ತಂತ್ರಜ್ಞಾನ, ರೋಗ ನಿಯಂತ್ರಣದ ಬಗ್ಗೆ ತಜ್ಞರೊಂದಿಗೆ ಚರ್ಚಿಸಿದರು.

ಕರುಗಳಿಗೆ ಬಹುಮಾನ

ದೇಸಿ ಹಸುಗಳ ಸಂರಕ್ಷಣೆಗೆ ಒತ್ತು ನೀಡಲು ಪ್ರತ್ಯೇಕ ವಿಭಾಗವಿತ್ತು. ಜೆರ್ಸಿ, ಎಚ್.ಎಫ್ ತಳಿಗೆ ಸಂಬಂಧಿಸಿ ಹೈಬ್ರಿಡ್ ತಳಿಗಳ ವೈಜ್ಞ್ಞಾನಿಕ ಸಾಕಾಣಿಕೆ ಬಗ್ಗೆ ವಾಹಿತಿ ನೀಡಲಾಯಿತು. ಪ್ರತಿ ವಿಭಾಗದಲ್ಲೂ ಅತ್ಯುತ್ತಮ ಲಕ್ಷಣ ಹೊಂದಿದ್ದ ಕರುಗಳಿಗೆ ಬಹುವಾನ ವಿತರಿಸಿ ಪ್ರೋತ್ಸಾಹಿಸಲಾಯಿತು. ಕಾರ್ಕಳ ಮುಖ್ಯ ಪಶುವೈದ್ಯಾಧಿಕಾರಿ ಡಾ.ವಾಸುದೇವ ಪೈ ಬಹುವಾನ ವಿತರಿಸಿದರು.

ರೈತರು, ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ವಿದ್ಯಾರ್ಥಿಗಳು ಕೂಡ ಹೈನುಗಾರಿಕೆ ಬಗ್ಗೆ ತಿಳಿದುಕೊಳ್ಳಲು ಅವಕಾಶವಾಯಿತು. ಕರುಗಳ ಆರೈಕೆ, ಪೋಷಣೆ, ವೈಜ್ಞ್ಞಾನಿಕ ಹೈನುಗಾರಿಕೆಯ ಜತೆಗೆ ವಿವಿಧ ವಾಹಿತಿಯನ್ನು ಗ್ರಾಮಸ್ಥರು ಪಡೆದುಕೊಂಡರು.

ನಮ್ಮ ಮಕ್ಕಳಿಗೆ ಕಷಿ ಮತ್ತು ಹೈನುಗಾರಿಕೆಯ ಮಹತ್ವ ತಿಳಿಸುವುದು ಇಂದಿನ ಅಗತ್ಯವಾಗಿದೆ. ಶಾಲಾ ಆವರಣದಲ್ಲಿ ಇಂತಹ ಕಾರ್ಯಕ್ರಮ ನಡೆಯುತ್ತಿರುವುದು ಸಂತಸ ತಂದಿದೆ.

--ೆಟೋ---
ಬೆಳ್ಮಣ್14.ಜನವರಿ.01.
ಮಾಳ ಸರ್ಕಾರಿ ಶಾಲಾ ಆವರಣದಲ್ಲಿ ನಡೆದ ಕರು ಪ್ರದರ್ಶನ. ಮುಖ್ಯ ಪಶುವೈದ್ಯಾಧಿಕಾರಿ ಡಾ.ಸುನೀಲ್ ಕುವಾರ್ ಕೆ.ಬಿ., ಮುಖ್ಯ ಪಶುವೈದ್ಯಾಧಿಕಾರಿಗಳಾದ ಡಾ.ಉದಯ ಕುವಾರ್ ಶೆಟ್ಟಿ, ಡಾ.ಪ್ರದೀಪ್ ಎನ್.ಕೊಂಡೀಜಿ ಮತ್ತಿತರರು ಉಪಸ್ಥಿತರಿದ್ದರು.