ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಪುರಸಭೆ ಸಾಮಾನ್ಯ ಸಭೆಗಳಲ್ಲಿ ನಡೆಯುವ ಚರ್ಚೆ ವಿಷಯಗಳು ಸದಸ್ಯರ ಹೆಸರಿನ ಉಲ್ಲೇಖದೊಂದಿಗೆ ಕೇವಲ ಪಾಲನಾ ವರದಿಗಷ್ಟೇ ಸೀಮಿತವಾಗುತ್ತಿದೆ. ಚಾ, ಅಂಬಡೆ ತಿನ್ನಲು ಬರುತ್ತಿದ್ದೆವೇಯೇ ಎಂದು ನಮ್ಮನ್ನು ನಾವೇ ಪ್ರಶ್ನಿಸುವಂತಾಗಿದೆ. ಮೂರ್ನಾಲ್ಕು ಸಭೆಗಳು ನಡೆದರೂ ಸಮಸ್ಯೆಗಳಿಗೆ ತಾರ್ಕಿಕ ಅಂತ್ಯ ಕಾಣದಿರುವ ಬಗ್ಗೆ ಕಾಪು ಪುರಸಭೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಪು ಪುರಸಭೆಯ ಇಂದಿರಾಗಾಂಧಿ ಸಭಾಗಂಣದಲ್ಲಿ ಮಂಗಳವಾರ ನಡೆದ ಕಾಪು ಪುರಸಭೆ ಸಾವಾನ್ಯ ಸಭೆಯಲ್ಲಿ ಸದಸ್ಯರು ಆಕ್ರೋಶ ಹೊರಹಾಕಿದರು.
2020ರಿಂದ ಈವರೆಗೆ ನೋಂದಣಿ ಇಲಾಖೆಯಿಂದ ಸರ್ಚಾರ್ಜ್ ಪಾವತಿಯಾಗದಿರುವ ಬಗ್ಗೆ ಸದಸ್ಯ ಅರುಣ್ ಶೆಟ್ಟಿ ಸಭೆ ಗಮನ ಸೆಳೆದರು. ಉತ್ತರಿಸಿದ ಮುಖ್ಯಾಧಿಕಾರಿ ನೀಲಕಂಠ ಮೇಸ್ತ, ಈ ಬಗ್ಗೆ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಕಾಪು ಯೋಜನಾ ಪ್ರಾಧಿಕಾರದಲ್ಲಿನ ಸಿಂಗಲ್ ಲೇಔಟ್ ಸಮಸ್ಯೆಯಿಂದಾಗಿ ಗ್ರಾಮೀಣ ಜನರು ಹೈರಾಣಾಗುತ್ತಿದ್ದಾರೆ. ಕಡತಗಳು ಕಚೇರಿಯಲ್ಲಿ ಕೊಳೆಯುತ್ತಿರುವ ಬಗ್ಗೆ ಸದಸ್ಯರಾದ ಅನಿಲ್ ಕುವಾರ್, ಫರ್ಜಾನ, ಅರುಣ್ ಶೆಟ್ಟಿ, ಸುರೇಶ್ ದೇವಾಡಿಗ, ಶೈಲೇಶ್ ಅಮೀನ್, ಮಹಮ್ಮದ್ ಆಸಿಫ್ ಸಭೆಯ ಗಮನ ಸೆಳೆದರು. ಉತ್ತರಿಸಿದ ಪ್ರಾಧಿಕಾರದ ಅಧಿಕಾರಿ, ತ್ವರಿತ ಕಡತ ವಿಲೇಗೆ ಪ್ರಾವಾಣಿಕ ಪ್ರಯತ್ನ ವಾಡುವುದಾಗಿ ಭರವಸೆ ನೀಡಿದರು.
ಕಾಪು ಪೇಟೆ ಕತ್ತಲಲ್ಲಿದೆ. ಮೂರು ದಿನಗಳಿಂದ ಬೀದಿ ದೀಪಗಳು ಉರಿಯುತ್ತಿಲ್ಲ. ಒಂದೆಡೆ ಬೀದಿ ನಾಯಿಗಳ ಕಾಟ ಮತ್ತೊಂದೆಡೆ ವಿದ್ಯುತ್ ದೀಪಗಳ ಕೊರತೆಯಿಂದ ಕಾಪು ಪೇಟೆ ನಲುಗುತ್ತಿದೆ ಎಂದು ಸದಸ್ಯರು ದೂರಿದರು. ಉಪಾಧ್ಯಕ್ಷೆ ಸರಿತಾ ಶಿವಾನಂದ್, ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಆಳ್ವ ಉಪಸ್ಥಿತರಿದ್ದರು.
ವಸತಿ ಸಮುಚ್ಚಯ, ಖಾಸಗಿ ಅಪಾರ್ಟ್ಮೆಂಟ್, ವಾಣಿಜ್ಯ ಕಟ್ಟಡಗಳಿಂದ ಬರುವ ಕೊಳಚೆ ನೀರು ಪುರಸಭೆ ವ್ಯಾಪ್ತಿಯಲ್ಲಿ ಅಸಹನೀಯ ವಾತಾವರಣ ನಿರ್ವಾಣಕ್ಕೆ ಕಾರಣವಾಗುತ್ತಿದೆ. ಸಕ್ಕಿಂಗ್ ಯಂತ್ರ ಖರೀದಿಸಿ ಪುರಸಭೆ ವ್ಯಾಪ್ತಿಯ ಜನರಿಗೆ ರಿಯಾಯಿತಿ ದರದಲ್ಲಿ ಒದಗಿಸಿ, ಹೊರಗಿನವರಿಗೆ ಕಿಲೋಮೀಟರ್ ದರದಲ್ಲಿ ಒದಗಿಸುವಂತೆ ಸದಸ್ಯರು ಸಲಹೆ ನೀಡಿದರು. 3 ಸಾವಿರ ಲೀಟರ್ ಸಾಮರ್ಥ್ಯದ ಸಕ್ಕಿಂಗ್ ಯಂತ್ರ ಸರ್ಕಾರದಿಂದ ಬರಲಿದೆ ಎಂದು ಮುಖ್ಯಾಧಿಕಾರಿ ತಿಳಿಸಿದರು.
ಪುರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ವಿಚಾರದಲ್ಲಿ ನಾವು ಈಗಿನಿಂದಲೇ ಎಚ್ಚರಗೊಳ್ಳಬೇಕಿದೆ. ಈಗಾಗಲೇ ಇರುವ ನೀರಿನ ಸಮಸ್ಯೆಗೆ ಪರಿಹಾರ ಲಭಿಸಿಲ್ಲ ಎಂದು ಸದಸ್ಯರು ದೂರಿದರು. ಕುರ್ಕಾಲು ಅಣೆಕಟ್ಟು ಬಳಿ ಒಂದು ಅಡಿ ಗೇಟ್ ಅಳವಡಿಸಲಾಗಿದೆ. ನೀರಿನ ಮಿತ ಬಳಕೆ ಬಗ್ಗೆ ಜಿಲ್ಲಾಧಿಕಾರಿಗಳಿಂದಲೂ ಆದೇಶ ಬಂದಿದೆ ಎಂದು ಇಂಜಿನಿಯರ್ ತಿಳಿಸಿದರು. ನೀರಿನ ಸಮಸ್ಯೆ ಬಗ್ಗೆ ಚರ್ಚಿಸಲು ನ.5ರಂದು ವಿಶೇಷ ಸಭೆ ಕರೆಯುವುದಾಗಿ ಮುಖ್ಯಾಧಿಕಾರಿ ತಿಳಿಸಿದರು.
ಪುರಸಭೆ ವ್ಯಾಪ್ತಿಯ 3 ಆರೋಗ್ಯ ಉಪಕೇಂದ್ರಗಳ ಗ್ರಾಮೀಣ ಆರೋಗ್ಯಾಧಿಕಾರಿ(ಸಿಎಚ್ಒ)ಗಳ ವರ್ಗಾವಣೆಗೆ ಹುನ್ನಾರ ನಡೆಯುತ್ತಿರುವ ಬಗ್ಗೆ ಸದಸ್ಯರಿಂದ ಆಕ್ಷೇಪ ವ್ಯಕ್ತವಾಯಿತು. ಉತ್ತರಿಸಿದ ಆರೋಗ್ಯ ಇಲಾಖೆ ಅಧಿಕಾರಿಗಳು ಜಿಲ್ಲಾಮಟ್ಟದಲ್ಲಿಯೇ ಈ ಪ್ರಕ್ರಿಯೆ ನಡೆಯುತ್ತಿದೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.