ಗ್ಯಾರೇಜು ಮಾಲೀಕರ ಸಂಘದ ರಜತ ಸಂಭ್ರಮ ಕಾರ್ಯಕ್ರಮದಲ್ಲಿ ಕೌಶಿಕ್ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಕೃಷಿಕ ಪ್ರಕಾಶ್ ಕಾರಂತ್, ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ಜಗನ್ನಾಥ ಚೌಟ ಮೊದಲಾದವರಿದ್ದರು. 
ಉಡುಪಿ

ಜೀವನ ಪಯಣ ರೂಪಿಸುವ ಮೆಕಾನಿಕ್‌ಗಳು

ಬಂಟ್ವಾಳ: ಮೆಕಾನಿಕ್‌ಗಳು ಜೀವನದ ಪಯಣ ರೂಪಿಸಬಲ್ಲರು. ವಾಹನಗಳು ನಿಂತರೆ ಚಲನೆಯೇ ನಿಲ್ಲುತ್ತದೆ. ಮೆಕಾನಿಕ್‌ಗಳ ಸೇವೆಯಿಂದ ಆ ಚಲನೆ ಮುನ್ನಡೆಯುತ್ತದೆ ಎಂದು ಪ್ರಗತಿಪರ ಕೃಷಿಕ ಪ್ರಕಾಶ್ ಕಾರಂತ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಗ್ಯಾರೇಜು ಮಾಲೀಕರ ಸಂಘದ ಬಂಟ್ವಾಳ ವಲಯದ ರಜತ ಸಂಭ್ರಮ ಕಾರ್ಯಕ್ರಮ ಬಿ.ಸಿ.ರೋಡ್‌ನ ಸ್ಪರ್ಶ ಕಲಾಮಂದಿರದಲ್ಲಿ ಉದ್ಘಾಟಿಸಿ ಮಾತನಾಡಿದರು.
ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ಜಗನ್ನಾಥ ಚೌಟ ಮಾತನಾಡಿ, ಗ್ಯಾರೇಜು ಮಾಲೀಕರು ತಾವು ಮಾಲೀಕರಾಗಿದ್ದರೂ ಕೆಲಸ ಅರಿತುಕೊಂಡ ಕೆಲಸಗಾರರು. ವೃತ್ತಿ ನಿಷ್ಠೆಯೊಂದಿಗೆ ಸಂಘದ ಸೇವಾಕಾರ್ಯದಲ್ಲೂ ತೊಡಗಿಸಿಕೊಂಡಿರುವುದು ಅಭಿನಂದನೀಯ ಎಂದರು.
ಬೂಡ ಮಾಜಿ ಅಧ್ಯಕ್ಷ ಪಿಯೂಸ್ ಎಲ್.ರೋಡ್ರಿಗಸ್ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಬೂಡ ಅಧ್ಯಕ್ಷ ಬೇಬಿ ಕುಂದರ್, ಜೋತಿಷಿ ಅನಿಲ್ ಪಂಡಿತ್, ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಸ್ಥಾನದ ಅಧ್ಯಕ್ಷ ಬಿ.ಮೋಹನ್, ದ.ಕ. ಗ್ಯಾರೇಜು ಮಾಲೀಕರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಜನಾರ್ದನ ಅತ್ತಾವರ, ಕೆಎಸ್‌ಟಿಎ ರಾಜ್ಯಾಧ್ಯಕ್ಷ ಸುರೇಶ್ ಸಾಲ್ಯಾನ್, ಸಂಘದ ನೂತನ ಅಧ್ಯಕ್ಷ ಗಣೇಶ್ ಸುವರ್ಣ, ನಿರ್ಗಮನ ಅಧ್ಯಕ್ಷ ಸುಧೀರ್ ಪೂಜಾರಿ, ಕಾರ್ಯದರ್ಶಿ ಉಮೇಶ್ ಶೆಟ್ಟಿ, ಕೋಶಾಧಿಕಾರಿ ರಮೇಶ್ ಭಂಡಾರಿ ಉಪಸ್ಥಿತರಿದ್ದರು.
ಗೌರವ ಸಲಹೆಗಾರ ಸುಧಾಕರ ಸಾಲ್ಯಾನ್ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಜಗದೀಶ್ ರೈ ವಂದಿಸಿದರು. ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.
ಸನ್ಮಾನ
ಕಾಲಿನಲ್ಲಿ ಚಿತ್ರ ಬರೆದು ಸಾಧನೆ ಮಾಡಿರುವ ಕೌಶಿಕ್ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಸಂಘದ ಮಾಜಿ ಅಧ್ಯಕ್ಷರನ್ನು ಗೌರವಿಸಲಾಯಿತು. ಸಂಘದ ಚಟುವಟಿಕೆಗೆ ಸಹಕಾರ ನೀಡಿದ ರೋನಿ ಫರ್ನಾಂಡಿಸ್ ದಂಪತಿಯನ್ನು ಗೌರವಿಸಲಾಯಿತು. ಖ್ಯಾತ ಬೈಕ್ ರೈಡರ್‌ಗಳಾದ ಮೂಸ ಶರೀಫ್ ಹಾಗೂ ಅಶ್ವಿನ್ ನಾಯಕ್ ಅವರನ್ನು ಅಭಿನಂದಿಸಲಾಯಿತು.