ಉಡುಪಿಯ ಕಾತ್ಯಾಯಿನಿ ನಗರದಲ್ಲಿ ಆಯೋಜಿಸಿದ್ದ ಹೊಸ ವರ್ಷ ಸ್ವಾಗತ ಕಾರ್ಯಕ್ರಮವನ್ನು ಅನುರಾಧಾ ಜಿ.ಎಸ್. ಉದ್ಘಾಟಿಸಿದರು. ಶ್ರೀನಿವಾಸ್ ರಾವ್ ಕೆ., ಗುಣವತಿ, ಹೇಮಲತಾ, ಸುದೇಶ್ ಪಿ. ಇದ್ದರು.
* ಅನುರಾಧಾ ಜಿ.ಎಸ್. ಅಭಿಪ್ರಾಯ
* ಹೊಸ ವರ್ಷಕ್ಕೆ ಸ್ವಾಗತ ಕಾರ್ಯಕ್ರಮ
ಉಡುಪಿ: ಮುಂದಿನ ಪೀಳಿಗೆಗೆ ಶುದ್ಧ ಗಾಳಿ, ನೀರು, ಪರಿಸರ ಉಳಿಸುವ ಸಂಕಲ್ಪ ತೊಡುವುದು ಇಂದಿನ ಅಗತ್ಯವಾಗಿದೆ. ಮಾನವೀಯ ಸಂಬಂಧಗಳಿಂದ ಸುಂದರ ಸಮಾಜ ನಿರ್ಮಾಣ ಸಾಧ್ಯ. ಪರೋಪಕಾರದಲ್ಲಿಯೇ ಜೀವನದ ಸಾರ್ಥಕತೆ ಅಡಗಿದೆ ಎಂದು ಸಮಾನ ಮನಸ್ಕ ಕನ್ನಡಿಗರ ವೇದಿಕೆಯ ಸದಸ್ಯೆ, ಶಾರದಾ ವಸತಿ ಶಾಲೆಯ ಸಿಬ್ಬಂದಿ ಅನುರಾಧಾ ಜಿ.ಎಸ್. ಅಭಿಪ್ರಾಯಪಟ್ಟರು.
ಉಡುಪಿಯ ಕಾತ್ಯಾಯನಿ ನಗರದಲ್ಲಿ ಹೊಸ ವರ್ಷ ಆಚರಣೆಯ ನಿಮಿತ್ತ ಸಮಾನ ಮನಸ್ಕ ಕನ್ನಡಿಗರ ವೇದಿಕೆಯಿಂದ ಬುಧವಾರ (ಡಿ.31) ರಾತ್ರಿ ಆಯೋಜಿಸಿದ್ದ ಹೊಸ ವರ್ಷಕ್ಕೆ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಾಂಧವ್ಯ ಉಳಿಸೋಣ
ವೇದಿಕೆಯ ಅಧ್ಯಕ್ಷ ಶ್ರೀನಿವಾಸ್ ರಾವ್ ಕೆ. ಮಾತನಾಡಿ, ಮೊಬೈಲ್ ಅತಿಯಾದ ಬಳಕೆಯಿಂದ ಇಂದು ಮಾನವೀಯತೆ ಮರೆಯಾಗುತ್ತಿದೆ. ಹಣ ಗಳಿಕೆಯ ಹಿಂದೆ ಹೋಗಿ ಸಂಬಂಧಗಳನ್ನು ಕಳೆದುಕೊಳ್ಳುತ್ತಿದ್ದೇವೆ. 2026ರ ಹೊಸ ವರ್ಷವನ್ನು ಬಾಂಧವ್ಯ ಸುಧಾರಣೆಗಳ ವರ್ಷವನ್ನಾಗಿ ಮಾರ್ಪಡಿಸೋಣ. ಮೊಬೈಲ್ ಹೆಚ್ಚು ನೋಡುವ ಮಕ್ಕಳಿಗೆ ಪಾಲಕರು ಓದುವ ಹವ್ಯಾಸ ರೂಢಿಸಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಸಮಿತಿಯ ಸುರೇಶ್ ಡಿ., ಶ್ರೀನಿವಾಸ್ ಡಿ., ಸುದೇಶ್ ಪಿ., ರವೀಂದ್ರ ನಾಯಕ್, ಗುಣವತಿ, ಹೇಮಲತಾ, ಚಂದ್ರಶೇಖರ್, ಸುಖೇಶ್ ಪೂಜಾರಿ, ಲಕ್ಷ್ಮೀ, ವಿಜಯಲಕ್ಷ್ಮೀ, ಶ್ರೀದೇವಿ, ರಾಘವೇಂದ್ರ, ಉಷಾ, ಪ್ರೇಮಾ, ಮಾಲತಿ, ಭವ್ಯಾ, ಚಂದ್ರಿಕಾ, ಸಂಗೀತಾ, ಸ್ವಾತಿ ಇತರರು ಉಪಸ್ಥಿತರಿದ್ದರು.