ಕವಿ ನಾಡೋಜ ಕಯ್ಯಾರರು ಕನ್ನಡ ಭಾಷೆಗೆ ಹೊಸ ವ್ಯಾಖ್ಯಾನ ಕೊಟ್ಟಿದ್ದು, ವಿವಿಧ ಚಳವಳಿಗಳ ನೇತೃತ್ವ ವಹಿಸಿದ್ದರು. ಕರಾವಳಿ ಕನ್ನಡ ಪ್ರಜ್ಞೆಯ ಪ್ರತೀಕವಾಗಿದ್ದ ಅವರ ಬದುಕು ಇತರರಿಗೆ ಮಾದರಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ವಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಅಭಿಪ್ರಾಯಪಟ್ಟರು. 
ಉಡುಪಿ

ಕಯ್ಯಾರರ ಬದುಕು ಕನ್ನಡಿಗರಿಗೆ ಮಾದರಿ

ವಿಜಯವಾಣಿ ಸುದ್ದಿಜಾಲ ಕುಂಬಳೆ
ಕವಿ ನಾಡೋಜ ಕಯ್ಯಾರರು ಕನ್ನಡ ಭಾಷೆಗೆ ಹೊಸ ವ್ಯಾಖ್ಯಾನ ಕೊಟ್ಟಿದ್ದು, ವಿವಿಧ ಚಳವಳಿಗಳ ನೇತೃತ್ವ ವಹಿಸಿದ್ದರು. ಕರಾವಳಿ ಕನ್ನಡ ಪ್ರಜ್ಞೆಯ ಪ್ರತೀಕವಾಗಿದ್ದ ಅವರ ಬದುಕು ಇತರರಿಗೆ ಮಾದರಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ವಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಅಭಿಪ್ರಾಯಪಟ್ಟರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು, ಕಲ್ಕೂರ ಪ್ರತಿಷ್ಠಾನ ಸಹಯೋಗದಲ್ಲಿ ಭಾನುವಾರ ಕಯ್ಯಾರು ಕೊಕ್ಕಚಾಲು ಕಾಮಿಲ್ ಶಾಲಾ ವಠಾರದಲ್ಲಿ ನಡೆದ ನಾಡೋಜ ಡಾ.ಕಯ್ಯಾರ ಕಿಞ್ಞಣ್ಣ ರೈ ಜನ್ಮ ದಿನಾಚರಣೆ, ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ವಾತನಾಡಿದರು.
ನಾಡೋಜ ಕಯ್ಯರ ಕಿಞ್ಞಣ್ಣ ರೈ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಎಸ್.ಹೊರಟ್ಟಿ, ಕಾಸರಗೋಡಿನ ಕನ್ನಡ ಅಸ್ಮಿತೆ ಸ್ತುತ್ಯರ್ಹವಾದುದು. ಇಲ್ಲಿಯ ಜನರ ಶುದ್ಧ ಭಾಷಾಪ್ರೇಮ ಕರ್ನಾಟಕಕಕ್ಕೂ ವಾದರಿಯಾಗುವಂಥದ್ದು. ಈ ಪ್ರಶಸ್ತಿ ನನಗೆ ಕನ್ನಡ ಸೇವೆ ಮಾಡಲು ಮತ್ತಷ್ಟು ಪ್ರೇರಣೆ ನೀಡಿದೆ ಎಂದರು.
ಇನ್ನೋರ್ವ ಪ್ರಶಸ್ತಿ ಪುರಸ್ಕೃತ ಎಟಿಎಸ್ ಆಡಳಿತ ನಿರ್ದೇಶಕ ಡಾ.ಮೂಡಂಬೈಲು ರವಿ ಶೆಟ್ಟಿ ದೋಣಿಂಜೆಗುತ್ತು ಶುಭ ಹಾರೈಸಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಮುಖ್ಯ ಅತಿಥಿಯಾಗಿದ್ದರು. ರೆ.ಫಾ.ವಿಶಾಲ್ ಮೋನಿಶ್, ಬದರುನ್ನೀಸ ಸಲೀಂ, ಜಿ.ಪಂ.ಸದಸ್ಯ ಸೋಮಶೇಖರ ಜೆ.ಎಸ್, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುವಾರ್ ಬೊಟ್ಯಾಡಿ, ಮೋಹನ್ ರೈ, ಚಂದ್ರಾವತಿ ಶೆಟ್ಟಿ, ಸುನೀನಾ ಝಡ್.ಎ.ಕಯ್ಯಾರ್, ಪ್ರಿನ್ಸಿ ಡಿಸೋಜ, ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಎ.ಆರ್.ಸುಬ್ಬಯ್ಯಕಟ್ಟೆ, ತೆಕ್ಕೆಕೆರೆ ಶಂಕರನಾರಾಯಣ ಭಟ್, ಬೇಬಿ ಶೆಟ್ಟಿ, ಪ್ರಸಾದ್ ರೈ ಕಯ್ಯಾರ್, ಮೊಯ್ದೀನ್ ಕುಂಞಿ ಉಪಸ್ಥಿತರಿದ್ದರು. ಚನಿಯಪ್ಪ ನಾಯ್ಕ ಸ್ವಾಗತಿಸಿದರು. ಪುರುಷೋತ್ತಮ ಭಟ್ ಕೆ. ವಂದಿಸಿದರು. ರವಿ ನಾಯ್ಕಾಪು ಕಾರ್ಯಕ್ರಮ ನಿರೂಪಿಸಿದರು.

ಕೃತಿ ಬಿಡುಗಡೆ, ಸಾಧಕರಿಗೆ ಗೌರವ

ಶಿವಾನಂದ ಕೋಟ್ಯಾನ್ ಕಟಪಾಡಿ ರಚಿಸಿದ ಪರಂಪರೆಯ ಪಯಣ ಕೃತಿಯನ್ನು ಎಲ್.ಎನ್.ಮುಕುಂದರಾಜ್ ಬಿಡುಗಡೆಗೊಳಿಸಿದರು. ಡಾ.ಪ್ರಸನ್ನ ರೈ ಕಲ್ಲಕಳಿಯ ಕಯ್ಯಾರರ ಹಾಡುಗಳನ್ನು ಹಾಡಿದರು. ಸಾವಾಜಿಕ ಕಾರ್ಯಕರ್ತ ದೀಪಕ್ ವಿ.ಕೆ, ಜಾನಪದ ಕಲಾವಿದ ಸೋಮಯ್ಯ ಅಶ್ವತ್ಥಕಟ್ಟೆ, ಕೃಷಿಕ ರಾಮಣ್ಣ ಅತ್ತಾರ್, ನಾಟಿ ವೈದ್ಯ ಮೊಹಮ್ಮದ್ ಪರಂಬಳ ಅವರನ್ನು ಗೌರವಿಸಲಾಯಿತು.

ಪದವಿ ತರಗತಿಯಲ್ಲಿ ಅಧ್ಯಯನ ನಡೆಸುತ್ತಿದ್ದ ಸಂದರ್ಭ ಕಯ್ಯರರ ವಿವಿಧ ಸಾಹಿತ್ಯಗಳಿಂದಾಗಿ ಕನ್ನಡ ಭಾಷೆ, ಸಂಸ್ಕೃತಿಯ ಪ್ರೇಮ ಮೂಡಿದೆ. ಹೋರಾಟಗಾರರಾಗಿ ಅವರು ತೋರಿಸಿದ ಧೈರ್ಯವೇ ನನಗೆ ಈಗ ವಿಧಾನಸಭೆಯಲ್ಲಿ ಕನ್ನಡದಲ್ಲಿ ಪ್ರವಾಣವಚನ ಹಾಗೂ ಬಸವಣ್ಣನವರ ವಚನಗಳನ್ನು ಉಲ್ಲೇಖಿಸಲು ಪ್ರೇರಣೆಯಾಯಿತು.

— ಎ.ಕೆ.ಎಂ.ಅಶ್ರಫ್, ಮಂಜೇಶ್ವರ ಶಾಸಕ