ಬಡಗಬೆಳ್ಳೂರು ಗ್ರಾಮದ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಳದ ಬ್ರಹ್ಮಕಲಶೋತ್ಸದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕ್ಷೇತ್ರದ ಸೇವಾಕರ್ತರನ್ನು ಗೌರವಿಸಲಾಯಿತು. ಮಾಣಿಲ ಶ್ರೀ, ಶ್ರೀ ಕೃಪಾನಿಧಿ ಗುರೂಜಿ, ರಾಜೇಶ್ ನಾಕ್, ರಮಾನಾಥ ರೈ, ರೂಪಾಶ್ರೀ ನಾರಾಯಣ ನಾಯ್ಕ ಮತ್ತಿತರರಿದ್ದರು.
ಬಂಟ್ವಾಳ: ಮುಗ್ಧ ಭಕ್ತಿಗೆ ತಾಯಿ ಚಾಮುಂಡೇಶ್ವರಿ ಬೇಗ ಒಲಿಯುತ್ತಾಳೆ. ದೇವಸ್ಥಾನದ ಗರ್ಭಗುಡಿಗಿಂತಲೂ ಹೆಚ್ಚಾಗಿ ಭಕ್ತನ ಹೃದಯದಲ್ಲಿ ಆಕೆ ನೆಲೆಸುತ್ತಾಳೆ. ಅಂಥ ತಾಯಿಯ ಕ್ಷೇತ್ರ ಇಂದು ಅಭಿವೃದ್ಧಿಗೊಂಡಿರುವುದರಿಂದ ಹೃದಯ ತುಂಬಿ ಬಂದಿದೆ ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ್ ಪರಮಹಂಸ ಸ್ವಾಮೀಜಿ ಹೇಳಿದರು.
ಬಡಗಬೆಳ್ಳೂರು ಗ್ರಾಮದ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಳದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಘು ಎಲ್.ಶೆಟ್ಟಿ ಅಧ್ಯಕ್ಷತೆ ವಹಿಸಿ, ನಿರೀಕ್ಷೆಗಿಂತಲೂ ಮಿಗಿಲಾದ ಕಾರ್ಯವನ್ನು ಇಲ್ಲಿನ ಸ್ವಯಂಸೇವಕರು ಮಾಡಿದ್ದಾರೆ. ಗ್ರಾಮಸ್ಥರ ಸಹಕಾರದಿಂದ ಕಡಿಮೆ ಅವಧಿಯಲ್ಲಿ ಸುಂದರವಾದ ದೇವಸ್ಥಾನ ನಿರ್ಮಾಣವಾಗಿದ್ದು ಇಲ್ಲಿನ ಚಿತ್ರಣವೇ ಬದಲಾಗಿದೆ ಎಂದರು.
ಮಧುಗಿರಿ ಶ್ರೀ ಸಾಮ್ರಾಜ್ಯ ಲಕ್ಷ್ಮೀ ಮಹಾಸಂಸ್ಥಾನದ ಶ್ರೀ ಕೃಪಾನಿಧಿ ಗುರೂಜಿ, ತಪೋನಿಧಿ ಬಾಬಾ ವಿಠಲ ಗಿರಿಜೀ ಮಜಾರಾಜ್, ಶಾಸಕ ರಾಜೇಶ್ ನಾಕ್, ಮಾಜಿ ಸಚಿವ ರಮಾನಾಥ ರೈ, ದೇವಸ್ಥಾನದ ಸ್ಥಾಪಕರ ಪತ್ನಿ ಶಾರದಾ ಸದಾಶಿವ ಕರ್ಕೇರ, ಬಡಗಬೆಳ್ಳೂರು ಗ್ರಾಪಂ ಅಧ್ಯಕ್ಷೆ ರೂಪಾಶ್ರೀ ನಾರಾಯಣ ನಾಯ್ಕ, ಪೊಳಲಿ ಶ್ರೀ ರಾಜರಾಜೇಶ್ವರಿ ದೇವಳ ಆಡಳಿತ ಮೊಕ್ತೇಸರ ಮಂಜಯ್ಯ ಶೆಟ್ಟಿ, ಮನಪಾ ಮಾಜಿ ಮೇಯರ್ ಭಾಸ್ಕರ್ ಮೊಯ್ಲಿ, ಭರತ್ ಬಂಗೇರ ಅಮ್ಮುಂಜೆ, ಧೀರಜ್ ನಾಯ್ಕ, ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಅಧ್ಯಕ್ಷ ಸಂಜೀವ ಪೂಜಾರಿ, ಕಾರ್ಯಾಧ್ಯಕ್ಷ ಸಂದೀಪ್ ಸದಾಶಿವ ಬೆಳ್ಳೂರು ಉಪಸ್ಥಿತರಿದ್ದರು.
ದೇವಳದ ಸೇವಾಕರ್ತರನ್ನು ಗೌರವಿಸಲಾಯಿತು. ಬ್ರಹ್ಮಕಲಶ ಸಮಿತಿ ಪ್ರಧಾನ ಕಾರ್ಯದರ್ಶಿ ದೇವಪ್ಪ ಪೂಜಾರಿ ಬಾಳಿಕೆ ಸ್ವಾಗತಿಸಿದರು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ಪಳ್ಳಿಪ್ಪಾಡಿ ಪ್ರಸ್ತಾವನೆಗೈದರು. ಟ್ರಸ್ಟಿ ಶಶಕಿರಣ್ ವಂದಿಸಿದರು, ಪ್ರವೀಣ್ ಎಸ್.ಕುಂಪಲ ನಿರೂಪಿಸಿದರು.
ದೇವರ ಬಿಂಬ ಪ್ರತಿಷ್ಠಾಪನೆ
ಬೆಳಗ್ಗೆ ದೇವರ ಬಿಂಬ ಪ್ರತಿಷ್ಠಾಪನೆ ನಡೆದು ಪಂಚಾಮೃತ ಅಭಿಷೇಕ, ಪರಿಕಲಶಾಭಿಷೇಕ ಸಹಿತ ಬ್ರಹ್ಮಕಲಶಾಭಿಷೇಕ ನಡೆಯಿತು. ಬಳಿಕ ಪಂಚಪರ್ವ ನಿರ್ಣಯ, ಮಹಾಪೂಜೆ, ಪಲ್ಲಪೂಜೆ, ಮಹಾಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.