Crime 
ಉಡುಪಿ

ಪತ್ತೆಯಾಗಿದ್ದ ಮೃತದೇಹದ ಗುರುತು ಲಭ್ಯ

ಕಾಸರಗೋಡು: ಉಪ್ಪಳ ಮುಸೋಡಿ ಸಮುದ್ರ ದಡದಲ್ಲಿ ಪತ್ತೆಯಾಗಿರುವ ಮೃತದೇಹ ತಿರುವನಂತಪುರದಿಂದ ನಾಪತ್ತೆಯಾಗಿದ್ದ ವಿ.ರಾಜನ್(64) ಅವರದ್ದೆಂದು ಕರಾವಳಿ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.

ರಾಜನ್ ಅವರು ವೃತ್ತಿಯಲ್ಲಿ ಇಲೆಕ್ಟ್ರಿಷಿಯನ್ ಆಗಿದ್ದು, ಜುಲೈ 27ರ ರಾತ್ರಿ ಮನೆಯಿಂದ ಹೊರಟ ಬಳಿಕ ನಾಪತ್ತೆಯಾಗಿದ್ದು, ಈ ಬಗ್ಗೆ ಮನೆಯವರು ತಿರುವನಂತಪುರ ಕಾಂಜಿರಂಕುಳಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಶುಕ್ರವಾರ ಮಧ್ಯಾಹ್ನ ಮುಸೋಡಿ ಸಮುದ್ರ ತೀರದಲ್ಲಿ ಮೃತದೇಹ ಪತ್ತೆಯಾಗಿತ್ತು. ಮಂಜೇಶ್ವರ ಪೊಲೀಸರು ಹಾಗೂ ಕರಾವಳಿ ಠಾಣೆ ಪೊಲೀಸರು ನಡೆಸಿದ ತನಿಖೆಯಿಂದ ಮೃತದೇಹದ ಗುರುತು ಪತ್ತೆಯಾಗಿದೆ.