ಕಳತ್ತೂರಿನಲ್ಲಿ 2080ನೇ ಮದ್ಯವರ್ಜನ ಶಿಬಿರವನ್ನು ಚಕ್ರಪಾಣಿ ದೇವಪೂಜಿತ್ತಾಯ ಉದ್ಘಾಟಿಸಿದರು. ಮಂಜುನಾಥ ಆಳ್ವ ಮಡ್ವ, ವಿ.ಪಿ.ಅಬ್ದುಲ್ ಖಾದರ್ ಮೊದಲಾದವರಿದ್ದರು.
ಕಾಸರಗೋಡು: ಮದ್ಯ ವ್ಯಸನದಿಂದ ಅದೆಷ್ಟೋ ಕುಟುಂಬಗಳು ಬೀದಿಪಾಲಾಗುತ್ತಿರುವ ಇಂದಿನ ದಿನಗಳಲ್ಲಿ ಶ್ರೀ ಧರ್ಮಸ್ಥಳ ಕ್ಷೇತ್ರದ ವತಿಯಿಂದ ವ್ಯಸನಮುಕ್ತ ಸಮಾಜದ ಧ್ಯೇಯದೊಂದಿಗೆ ನಡೆಯುತ್ತಿರುವ ಮದ್ಯವರ್ಜನ ಶಿಬಿರ ದೇಶಕ್ಕೆ ಮಾದರಿ ಎಂದು ಚಕ್ರಪಾಣಿ ದೇವಪೂಜಿತ್ತಾಯ ಹೇಳಿದರು.
ಕಳತ್ತೂರಿನ ಶ್ರೀ ಮಹಾದೇವ ಭಜನಾ ಮಂದಿರದಲ್ಲಿ 2080ನೇ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮಂಜೇಶ್ವರ ತಾಲೂಕು ಅಧ್ಯಕ್ಷ ಮಂಜುನಾಥ ಆಳ್ವ ಮಡ್ವ ಅಧ್ಯಕ್ಷತೆ ವಹಿಸಿದ್ದರು.
ಕುಂಬಳೆ ಗ್ರಾಪಂ ಅಧ್ಯಕ್ಷ ವಿ.ಪಿ.ಅಬ್ದುಲ್ ಖಾದರ್, ಜಿಪಂ ಸದಸ್ಯ ಅಜೀಜ್ ಕಳತ್ತೂರು, ಕುಂಬಳೆ ಗ್ರಾಪಂ ಸದಸ್ಯ ಸುಕೇಶ್ ಭಂಡಾರಿ, ಪುತ್ತಿಗೆ ಗ್ರಾಪಂ ಸದಸ್ಯ ಬಾಲಕೃಷ್ಣ ರೈ, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯಪ್ರಸಾದ್ ರೈ ಕಾರಿಂಜ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ದಕ್ಷಿಣ ಕನ್ನಡ-2 ಜಿಲ್ಲೆ ನಿರ್ದೇಶಕ ಬಾಬು ನಾಯ್ಕ, ಧಾರ್ಮಿಕ ಮುಖಂಡ ಯೋಗಿಶ್ ಕಡಮಣ್ಣಾಯ, ಶಿಬಿರ ವ್ಯವಸ್ಥಾಪನಾ ಸಮಿತಿ ಗೌರವಾಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ ಪ್ರಮುಖರಾದ ಶಿವರಾಮ್ ಭಟ್ ಕಾರಿಂಜ, ಉದಯಕುಮಾರ್, ಅಮಿತಾ ದೇವದಾಸ್ ಆಳ್ವ, ನರಹರಿ ಮಾಸ್ಟರ್, ಶ್ರೀನಿವಾಸ ಆಳ್ವ, ಮಹೇಶ್ ಪುಣಿಯೂರು, ಬಾಲಕೃಷ್ಣ ನೆಲ್ಯಡ್ಕ ಗೌರವ ಉಪಸ್ಥಿತರಿದ್ದರು.
ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಸಿ.ಟ್ರಸ್ಟ್ ಮಂಜೇಶ್ವರ ಯೋಜನಾಧಿಕಾರಿ ಶಶಿಕಲಾ ಸುವರ್ಣ ಸ್ವಾಗತಿಸಿದರು. ಕುಂಬಳೆ ವಲಯ ಮೇಲ್ವಿಚಾರಕ ಅಭಿಷೇಕ್ ಡಿ. ವಂದಿಸಿದರು.