ಡಾ. ಸಿ. ಆರ್. ಚಂದ್ರಶೇಖರ್ ದ ಹೋಪ್-ಮದರ್ವುಡ್ ಮೆತಡ್ ಪುಸ್ತಕ ಬಿಡುಗಡೆಗೊಳಿಸಿದರು.
ಉಡುಪಿ: ಪ್ರಾಣಿ ಮತ್ತು ಪಗಳಲ್ಲಿ ಮರಿಗಳು 1 ತಿಂಗಳಿಂದ ಗರಿಷ್ಠ 1 ವರ್ಷದೊಳಗೆ ಸ್ವತಂತ್ರ$ವಾಗಿ ಜೀವಿಸುತ್ತವೆ. ಆದರೆ ಪ್ರಪಂಚದಲ್ಲಿ ಮಕ್ಕಳು ಮಾತ್ರ ತೀರಾ ಅಸಹಾಯಕರು. ಮನುಷ್ಯರಲ್ಲಿ ಬಾಲ್ಯ ವಿಕಾಸ ಹೊಂದಲು 20 ರಿಂದ 25 ವರ್ಷ ಬೇಕಾಗುತ್ತದೆ. ಪ್ರಾಣಿಗಳು ಕೇವಲ ಆಹಾರ, ರಕ್ಷಣೆ, ಸಂತಾನಾಭಿವೃದ್ಧಿ ಮಾತ್ರ ಕಲಿಯುತ್ತವೆ. ಆದರೆ ಮನುಷ್ಯ ಬೆಳವಣಿಗೆ ಹೊಂದುವಾಗ ಎಲ್ಲಾ ಕೌಶಲ್ಯಗಳನ್ನು ಕಲಿಯುವುದು ಅತೀ ಅವಶ್ಯ ಎಂದು ನಿಮ್ಹಾನ್ಸ್ ಮಾಜಿ ನಿರ್ದೇಶಕ ಡಾ. ಸಿ. ಆರ್. ಚಂದ್ರಶೇಖರ್ ಹೇಳಿದರು.
ಡಾ. ಎ.ವಿ. ಬಾಳಿಗ ಸ್ಮಾರಕ ಆಸ್ಪತ್ರೆಯಲ್ಲಿ ಕಮಲ್ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್ , ಒನ್ ಗುಡ್ ಸ್ಟೆಪ್ ಬೆಂಗಳೂರು, ಭಾರತೀಯ ವೈದ್ಯಕಿಯ ಸಂಘ ಹಾಗೂ ಸಂವೇದ ಪೋಷಕರ ಬೆಂಬಲ ಗುಂಪಿನ ಆಶ್ರಯದಲ್ಲಿ ಡಾ. ಸುಪ್ರಿಯಾ ಪೈ ಬರೆದಿರುವ ದ ಹೋಪ್-ಮದರ್ವುಡ್ ಮೆತಡ್ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಆಟಿಸಂ ಕಾಯಿಲೆ ವ್ಯಾಪಕವಾಗುತ್ತಿದೆ. ಮಗು ಸ್ವಲಿನತೆಯಲ್ಲಿರುವುದು. ಸಂವಹನ ಮಾಡದೆ ಸುಮ್ಮನಿರುವುದು ಮುಂತಾದ ಲಕ್ಷಣಗಳು ಕಂಡುಬಂದಾಗ ಹೆತ್ತವರು ಅಧೀರರಾಗುವುದು ಸಹಜ. ಆಟಿಸಂಗೆ ದೀರ್ಕಾಲೀನ ಚಿಕಿತ್ಸೆ ಅಗತ್ಯವಿದ್ದು, ಬಳಿಕ ಎಲ್ಲಾ ಮಕ್ಕಳಂತೆ ಸಹಜ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಅನುಭವಜನ್ಯ ಸಾಹಿತ್ಯ ಹೆಚ್ಚು ಮೌಲ್ಯಯುತವಾಗಿರುತ್ತದೆ. ಈ ನಿಟ್ಟಿನಲ್ಲಿ ಆಟಿಸಂ ಮಗುವಿನ ತಾಯಿಯಾಗಿ ಸುಪ್ರಿಯಾ ಅವರು ಬರೆದ ಪುಸ್ತಕ ಸಮಾಜಕ್ಕೆ ಕೊಡುಗೆಯಾಗಿದೆ ಎಂದರು.
ಬಳಿಕ ನರ್ಸಿಂಗ್ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಯೂತ್ ಮೈಂಡ್ ಮ್ಯಾಟರ್ಸ್ ಕಾರ್ಯಾಗಾರದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಆಟಿಸಂ ಸೊಸೈಟಿಯ ಅಧ್ಯಕ್ಷ ಹಾಗೂ ಮನೋವೈದ್ಯ ಡಾ. ವಿರೂಪಾಕ್ಷ ದೇವರಮನೆ ವಹಿಸಿದ್ದರು. ಅತಿಥಿಗಳಾಗಿ 'ಒನ್ ಗುಡ್ ಸ್ಟೆಪ್' ಸಂಸ್ಥಾಪಕಿ ಅಮಿತಾ ಪೈ, ಲೇಖಕಿ ಡಾ. ಸುಪ್ರಿಯಾ ಪೈ, ಮನೋವೈದ್ಯರಾದ ಡಾ. ದೀಪಕ್ ಮಲ್ಯ ಹಾಗೂ ಡಾ. ಮಾನಸ್ ಇ.ಆರ್. ಉಪಸ್ಥಿತರಿದ್ದರು. ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ಸ್ವಾಗತಿಸಿದರು. ವೃತ್ತಿಪರ ಚಿಕಿತ್ಸಕಿ ಪೂರ್ಣಿಮಾ ಪ್ರಾರ್ಥನೆ ನೆರವೇರಿಸಿದರು. ದೀಪಶ್ರೀ ನಾಯಕ್ ಕಾರ್ಯಕ್ರಮ ನಿರೂಪಿಸಿದರು.