ರಂಗಶ್ರೀ ರಂಗಹಬ್ಬ 2026ರ ನಾಲ್ಕನೇ ದಿನದ ಕಾರ್ಯಕ್ರಮದಲ್ಲಿ ಯಕ್ಷಗಾನ ಭಾಗವತ ವಸ್ರೆ ಸುಧಾಕರ ಕೊಠಾರಿ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಮೋಹನ್ ಕುವಾರ್ ಬೈಂದೂರು, ರಾಜೇಂದ್ರ ಹೆಜ್ಜಾಲು, ಕೆ.ಗೋಪಾಲ ಪೂಜಾರಿ ಮೊದಲಾದವರಿದ್ದರು. 
ಉಡುಪಿ

ರಂಗಭೂಮಿಗೆ ಹೊಸ ಪ್ರಸ್ತುತಿ ಅರ್ಪಿಸಿದ ಹೆಗ್ಗಳಿಕೆ

ವಿಜಯವಾಣಿ ಸುದ್ದಿಜಾಲ ಬೈಂದೂರು
ರಂಗಭೂಮಿ ಕ್ಷೇತ್ರದಲ್ಲಿ ಲಾವಣ್ಯ ತನ್ನ ಪರಿಪೂರ್ಣ ಸಾಧನೆ ಮೂಲಕ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದೆ. ಇಂದಿನ ಕಾಲಟ್ಟಕ್ಕೆ ತಕ್ಕಂತೆ ಅನೇಕ ಬದಲಾವಣೆಗಳಿಗೆ ಒಗ್ಗಿಕೊಂಡು ಅಭಿನಯ, ನಾಟಕದ ಆಯ್ಕೆ ಜತೆಗೆ ಹೊಸ ಪ್ರಸ್ತುತಿಗಳನ್ನು ರಂಗಭೂಮಿಗೆ ನೀಡುತ್ತಿರುವುದು ಸಂಸ್ಥೆಯ ಹೆಗ್ಗಳಿಕೆ ಎಂದು ಉದ್ಯಮಿ ಮೋಹನ್ ಕುವಾರ್ ಬೈಂದೂರು ಹೇಳಿದರು.
ಬೈಂದೂರು ಶಾರದಾ ವೇದಿಕೆಯಲ್ಲಿ ಲಾವಣ್ಯದ ಸ್ಥಾಪಕಾಧ್ಯಕ್ಷ ದಿ.ಯು.ಉಪ್ಪುಂದ ಶ್ರೀನಿವಾಸ ಪ್ರಭು ಅವರ ಸ್ಮರಣಾರ್ಥ ಆಯೋಜನೆಯ ರಂಗಶ್ರೀ- ರಂಗಹಬ್ಬ-2026ರ ನಾಲ್ಕನೇ ದಿನದ ಕಾರ್ಯಕ್ರಮದಲ್ಲಿ ವಾತನಾಡಿದರು.
ಉದ್ಯಮಿ ರಾಜೇಂದ್ರ ಹೆಜ್ಜಾಲು ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ಭಾಗವತ ವಸ್ರೆ ಸುಧಾಕರ ಕೊಠಾರಿ ಅವರನ್ನು ಸನ್ಮಾನಿಸಲಾಯಿತು. ವಾಜಿ ಶಾಸಕ ಕೆ.ಗೋಪಾಲ ಪೂಜಾರಿ, ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಸತೀಶ ಬಟ್ವಾಡಿ, ಡಾ.ನಂದಿನಿ ಬಿ., ರಂಗ ಕಲಾವಿದ ಅನಿಲ್ ಕುವಾರ್ ಶ್ಯಾನುಭಾಗ್, ಎಲ್‌ಐಸಿ ನಿವೃತ್ತ ಅಭಿವೃದ್ಧಿ ಅಧಿಕಾರಿ ಯು.ರಾಜೇಂದ್ರ ಪ್ರಭು, ರೋಟರಿ ಅಧ್ಯಕ್ಷ ಸುಬ್ರಹ್ಮಣ್ಯ ಜಿ., ಡಾ.ಬಿ.ಆರ್.ಅಂಬೇಡ್ಕರ ಯುವಕ ಸಂದ ಅಧ್ಯಕ್ಷ ರಾವೇಂದ್ರ ಬೈಂದೂರು, ಜ್ಯೋತಿಷಿ ಬಾಲರಾಜ್ ಶರ್ವಾ ಮೊದಲಾದವರಿದ್ದರು.
ರಾಜೇಶ ನಾಯ್ಕ ಸ್ವಾಗತಿಸಿದರು. ಮಂಜುನಾಥ ಶಿರೂರು ನಿರೂಪಿಸಿದರು. ದಯಾನಂದ ಪಿ. ವಂದಿಸಿದರು. ಲಾವಣ್ಯ ಮಕ್ಕಳ ಮತ್ತು ಮಹಿಳಾ ಯಕ್ಷಗಾನ ಸದಸ್ಯರಿಂದ ಯಕ್ಷಗಾನ ಪ್ರದರ್ಶನಗೊಂಡಿತು.

ರಂಗಾಸಕ್ತ ಸಹೃದಯಿ ಕಲಾಭಿವಾನಿಗಳು, ಕಲಾ ಪೋಷಕರು ಕೈಹಿಡಿದು ಮುನ್ನೆಡಿಸಿದ ಪರಿಣಾಮ ಕಳೆದ ನಲವತ್ತೊಂಬತ್ತು ವಸಂತಗಳಲ್ಲಿ ಲಾವಣ್ಯ ಲವಲವಿಕೆಯಿಂದಲೇ ಬೆಳೆದುಬಂದಿದೆ. ಒಳ ಹೊರಗೆ ತನ್ನದೇ ಆದ ಉತ್ಸಾಹಿ ಸಮುದಾಯವನ್ನು ಲಾವಣ್ಯ ಕಟ್ಟಿಕೊಂಡಿದೆ. ಕಲಾ ಸೇವೆಗಾಗಿ ದುಡಿಯುತ್ತಿರುವ ಲಾವಣ್ಯ ಮುಂದಿನ ವರ್ಷ ಸುವರ್ಣ ಸಂಭ್ರವಾಚರಣೆಯಲ್ಲಿದೆ. ಇದರ ಯಶಸ್ಸಿಗೆ ರಾಜ್ಯ ಹಾಗೂ ದೇಶಾದ್ಯಂತ ನೆಲೆಸಿರುವ ಬೈಂದೂರಿನ ಜನರು ಲಾವಣ್ಯಕ್ಕೆ ಸಹಕಾರ ನೀಡುವುದರೊಂದಿಗೆ ಕಲೆಯ ಉಳಿವಿಗೆ ನೆರವಾಗಬೇಕಿದೆ.

ರಂಗಭೂಮಿಯನ್ನು ಪ್ರೀತಿಸುವ ಯುವ ಪೀಳಿಗೆಯನ್ನು ತಯಾರು ವಾಡುವಲ್ಲಿ ಲಾವಣ್ಯ ಹೋರಾಟ ನೀಡಿದೆ. ಜಗತ್ತಿಗೆ ಉತ್ತಮ ಸಂದೇಶ ನೀಡುವಲ್ಲಿ ದೃಶ್ಯ ವಾಧ್ಯಮ ಹಾಗೂ ರಂಗಭೂಮಿಗೆ ವಾತ್ರ ಸಾಧ್ಯ. ಭಾಷೆ, ಊರು, ಸಂಸ್ಕೃತಿ, ಸಾಹಿತ್ಯವನ್ನು ಪ್ರಸಿದ್ಧಗೊಳಿಸುವಲ್ಲಿ ರಂಗಭೂಮಿಯು ತನ್ನದೆ ಆದ ಕೊಡುಗೆ ನೀಡಿದೆ.