ಹೊಳೆಬಾಗಿಲು ಸಂಪರ್ಕಿಸುವ ರಸ್ತೆ ಸತತವಾಗಿ ಸುರಿಯುತ್ತಿರುವ ಮಳೆಗೆ ಹೊಂಡಗುಂಡಿಗಳಿಂದ ಕೂಡಿರುವುದು. 
ಉಡುಪಿ

ಹೊಳೆಬಾಗಿಲು ರಸ್ತೆ ಕೆಸರುಮಯ

ಕೊಕ್ಕರ್ಣೆ: ಕೊಕ್ಕರ್ಣೆ ಗ್ರಾಮ ಪಂಚಾಯಿತಿ ಕುದಿ ಗ್ರಾಮದ ನಿಂಜೂರುಬೆಟ್ಟು ಹಾಗೂ ಹೆಗ್ಗುಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಳೆಬಾಗಿಲು ಸಂಪರ್ಕಿಸುವ ರಸ್ತೆ ಸತತವಾಗಿ ಸುರಿಯುತ್ತಿರುವ ಮಳೆಗೆ ಕೆಸರುಮಯವಾಗಿದ್ದು, ಹೊಂಡ-ಗುಂಡಿಗಳಿಂದ ತುಂಬಿ ಸಂಚಾರಕ್ಕೆ ತೊಡಕುಂಟಾಗಿದೆ.

ಈ ರಸ್ತೆಯನ್ನು ಸಾರ್ವಜನಿಕರು, ವಿದ್ಯಾರ್ಥಿಗಳು ಅವಲಂಬಿಸಿದ್ದು, ಪ್ರತಿನಿತ್ಯ ಕೆಸರು ರಸ್ತೆಯಲ್ಲೇ ಸಂಚರಿಸಬೇಕಾಗಿದೆ. ವಾಹನ ಸಂಚಾರಕ್ಕೆ ತೀವ್ರ ಸಮಸ್ಯೆಯಾಗಿದೆ. ಹಲವು ವಾಹನಗಳ ಚಕ್ರಗಳು ಕೆಸರಲ್ಲಿ ಹೂತುಹೋಗಿವೆ. ಗ್ರಾಮ ಪಂಚಾಯಿತಿ ರಸ್ತೆ ಸರಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸ್ಥಳೀಯರು ಜನಪ್ರತಿನಿಧಿಗಳಿಗೆ, ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಮಾಡಿದ್ದಾರೆ.

ಕಳೆದ ಬಾರಿ ವಿಜಯವಾಣಿ ಪತ್ರಿಕೆಯಲ್ಲಿ ವರದಿ ಬಂದ ಮರುದಿನವೇ ಸಂಬಂಧಪಟ್ಟ ಇಲಾಖೆ ಜಲ್ಲಿ ಸುರಿದು ಸಂಚಾರಕ್ಕೆ ಅನುವು ಮಾಡಿತ್ತು. ಮುಂದಿನ ದಿನಗಳಲ್ಲಿ ಡಾಂಬರೀಕರಣ ನಡೆಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿ ಕೊಡಬೇಕು.

— ಸುಬ್ರಹ್ಮಣ್ಯ ಸ್ಥಳೀಯರು