ಚೆಂಗಳ ಸ್ಮಾರ್ಟ್ ಗ್ರಾವಾಧಿಕಾರಿ ಕಚೇರಿ ಕಟ್ಟಡವನ್ನು ಸಚಿವ ಎ.ಪಿ.ಅನಿಲ್‌ಕುವಾರ್ ಉದ್ಘಾಟಿಸಿದರು. ಶಾಸಕ ಕಲ್ಲಟ್ರ ವಾಹಿನ್, ಸಂಸದ ರಾಜಮೋಹನ್ ಉಣ್ಣಿತ್ತಾನ್, ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಇತರರಿದ್ದರು. 
ಉಡುಪಿ

ಜನರಿಗೆ ಉತ್ತಮ ಸೇವೆ ನೀಡಲು ಸರ್ಕಾರ ಬದ್ಧ

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಜಿಲ್ಲೆಯ ಗುಂಪು ಗ್ರಾಮಗಳನ್ನು ವಿಭಜಿಸುವ ಬೇಡಿಕೆಯನ್ನು ಸರ್ಕಾರ ಪರಿಗಣಿಸುತ್ತಿದ್ದು, ಪ್ರಸ್ತುತ ನಡೆಯುತ್ತಿರುವ ಜನಗಣತಿಯ ಕಾರಣದಿಂದ ಇಂತಹ ವಿಭಜನೆಯು ಕಾರ್ಯಸಾಧ್ಯವಲ್ಲ ಎಂದು ಕಂದಾಯ ಸಚಿವ ಎ.ಪಿ.ಅನಿಲ್ ಕುಮಾರ್ ಹೇಳಿದರು.
ಚೆಂಗಳ ಸ್ಮಾರ್ಟ್ ಗ್ರಾವಾಧಿಕಾರಿ ಕಚೇರಿ ಕಟ್ಟಡ ಉದ್ಘಾಟಿಸಿ ಮಾತನಾಡಿ, ಗ್ರಾಮ ವಿಭಜನೆಯ ಸಂದರ್ಭ ಚೆಂಗಳ ಗ್ರಾಮವನ್ನು ಪರಿಗಣಿಸಲಾಗುವುದು. ಭೂ ಮರು ವರ್ಗೀಕರಣ, ಭೂ ಒಡೆತನದ ಹಕ್ಕುಪತ್ರಗಳ ವಿತರಣೆ ಸಹಿತ ವಿವಿಧ ಕಾರ್ಯವಿಧಾನಗಳನ್ನು ತ್ವರಿತ ಮತ್ತು ಪಾರದರ್ಶಕವಾಗಿಸುವ ಮೂಲಕ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದರು.
ಗುತ್ತಿಗೆದಾರ ಮನಾಫ್ ಎಡನೇರಿ ಅವರನ್ನು ಸಚಿವ ಎ.ಪಿ.ಅನಿಲ್ ಕುವಾರ್ ಸನ್ಮಾನಿಸಿದರು. ಶಾಸಕ ಕಲ್ಲಟ್ರ ವಾಹಿನ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿದ್ದರು. ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ವರದಿ ಮಂಡಿಸಿದರು.
ಭೂಕಂದಾಯ ಆಯುಕ್ತ ಎಚ್.ದಿನೇಶನ್, ಕಾಸರಗೋಡು ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಅಬ್ದುಲ್ಲಕುಞಿ ಚೆರ್ಕಳ, ಚೆಂಗಳ ಗ್ರಾಮ ಪಂಚಾಯಿತಿ ಅಧ್ಯಕ್ಷ ವಸಂತ ಅಜಕ್ಕೋಡು, ವಾಜಿ ಸಚಿವ ಸಿ.ಟಿ.ಅಹ್ಮದಾಅಲಿ, ಕಾಸರಗೋಡು ಜಿಪಂ ಸದಸ್ಯೆ ಜಸ್ನಾ ಮನಾಫ್, ಪ್ರಮುಖರಾದ ಜಾಸ್ಮಿನ್ ಕಬೀರ್, ಶುಕ್ಕೂರ್ ಚೆರ್ಕಳ, ಕಂದಾಯ ಅಧಿಕಾರಿಗಳು ಉಪಸ್ಥಿತರಿದ್ದರು. ಇಲಾಖೆಯ ವಿಶೇಷ ಕಾರ್ಯದರ್ಶಿ ಕೆ.ಜೀವನ್ ಬಾಬು ಸ್ವಾಗತಿಸಿದರು. ಎಡಿಎಂ ಪಿ.ಉದಯಕುಮಾರ್ ವಂದಿಸಿದರು.