ಜಿಲ್ಲಾಮಟ್ಟದ ಹೈಯರ್ ಸೆಕೆಂಡರಿ ಪ್ರವೇಶೋತ್ಸವವನ್ನು ಸಂಸದ ರಾಜಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಸಾಬು ಅಬ್ರಹಾಂ, ಎಂ.ಕೆ.ವಿನೋದ್ ಕುಮಾರ್, ಪಿ.ವಿ.ಚಂದ್ರನ್, ಸಿ.ಕೆ.ಅಶ್ರಫ್ ಮೊದಲಾದವರು ಉಪಸ್ಥಿತರಿದ್ದರು.
ಕಾಸರಗೋಡು: ಸಮಗ್ರತೆ, ಬದ್ಧತೆ ಮತ್ತು ಸ್ವಾವಲಂಬನೆಯ ಮನೋಭಾವ ಬೆಳೆಸುವುದರೊಂದಿಗೆ ದೇಶದ ಘನತೆ ಎತ್ತಿಹಿಡಿಯುವ ಸಾಮರ್ಥ್ಯವುಳ್ಳ ಹೊಸ ಪೀಳಿಗೆ ತಯಾರಿಸುವುದು ಶಿಕ್ಷಣದ ಅಂತಿಮ ಗುರಿಯಾಗಿದೆ ಎಂದು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ತಿಳಿಸಿದರು.
ರಾಜ್ಯ ಸರ್ಕಾರ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಹೊಸ ಯುಗದ ಕನಸುಗಳಿಗಾಗಿ ಎಂಬ ಧ್ಯೇಯದೊಂದಿಗೆ ರಾಜ್ಯದಲ್ಲೇ ಮೊದಲ ಬಾರಿಗೆ ಆಯೋಜಿಸಲಾದ ಜಿಲ್ಲಾಮಟ್ಟದ ಉನ್ನತ ಪ್ರೌಢಶಾಲಾ ಪ್ರವೇಶೋತ್ಸವ ಕಾರ್ಯಕ್ರಮವನ್ನು ಹೊಸದುರ್ಗ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಉದ್ಘಾಟಿಸಿ ಮಾತನಾಡಿದರು.
ಜಿಪಂ ಅಧ್ಯಕ್ಷ ಸಾಬು ಅಬ್ರಹಾಂ ಅಧ್ಯಕ್ಷತೆ ವಹಿಸಿದ್ದರು. ಕಣ್ಣೂರು ಆರ್‌ಡಿಡಿ ಎಂ.ಕೆ.ವಿನೋದ್ ಕುಮಾರ್, ನಗರಸಭೆ ವಾರ್ಡ್ ಕೌನ್ಸಿಲರ್ ಪಿ.ವಿ.ಚಂದ್ರನ್, ಎಸ್‌ಎಂಸಿ ಅಧ್ಯಕ್ಷ ಸಿ.ಕೆ.ಅಶ್ರಫ್, ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಕೆ.ರಶೀದ್, ಪಿಟಿಎ ಅಧ್ಯಕ್ಷೆ ಫಾತಿಮತ್ ನೌಶಿಬಾ, ಪ್ರಭಾರ ಮುಖ್ಯಶಿಕ್ಷಕಿ ಪಿ.ಸಂಗೀತಾ, ಹಿರಿಯ ಮಾಧ್ಯಮ ವಿಭಾಗದ ಹಿರಿಯ ಸಹಾಯಕಿ ಕೆ.ವಿ.ಸಜಿತಾ, ಸಿಬ್ಬಂದಿ ಕಾರ್ಯದರ್ಶಿ ಎನ್.ಸದಾಶಿವನ್, ಪ್ರೌಢಶಾಲಾ ವಿಭಾಗದ ಹಿರಿಯ ಸಹಾಯಕ ರಾಜೇಶ್ ಒಲ್ನಡಿಯನ್, ಸಿಬ್ಬಂದಿ ಕಾರ್ಯದರ್ಶಿ ಸಿ.ಕೆ.ರಮಿಯಾ, ಕಾರ್ಯಕ್ರಮ ಸಮಿತಿ ಅಧ್ಯಕ್ಷ ಎಂ.ಇಕ್ಬಾಲ್ ಹಾಗೂ ಸಂಚಾಲಕ ಎ.ಸತೀಶನ್ ಉಪಸ್ಥಿತರಿದ್ದರು.
ಅಧ್ಯಕ್ಷ ಪಿ.ಗಂಗಾಧರನ್ ಸ್ವಾಗತಿಸಿದರು. ಪ್ರಾಂಶುಪಾಲ ಡಾ.ಎ.ವಿ.ಸುರೇಶ್ ಬಾಬು ವಂದಿಸಿದರು. ಶಾಲೆಗೆ ಹೊಸದಾಗಿ ಪ್ರವೇಶ ಪಡೆದ ಪ್ಲಸ್ ಒನ್ ತರಗತಿ ವಿದ್ಯಾರ್ಥಿಗಳ ಪಾಲಕರಿಗೆ ಜಾಗೃತಿ ಕಾರ್ಯಕ್ರಮ ನಡೆಯಿತು.