ಬೈಂದೂರು ಉತ್ಸವ ಪೂರ್ವಭಾವಿಯಾಗಿ ಬೆಂಗಳೂರು ವಿಜಯನಗರ ಬಂಟರ ಸಂದ ತಂಡದ ನೇತೃತ್ವದಲ್ಲಿ ನಡೆದ ವಿದ್ಯಾ ಬೆಳಕು ಯೋಜನೆಯ ಪೋಸ್ಟರನ್ನು ಶಾಸಕ ಗುರುರಾಜ ಗಂಟಿಹೊಳೆ ಅನಾವರಣಗೊಳಿಸಿದರು.
ಬೈಂದೂರು: ನಮ್ಮ ಉತ್ಸವಗಳು ಕೇವಲ ಆಚರಣೆಗೆ ಸೀಮಿತವಾಗಿಲ್ಲ. ಸುಶಿಕ್ಷಿತ ಹಾಗೂ ಸುರಕ್ಷಿತ ಬೈಂದೂರು ನಿರ್ವಾಣ ನಮ್ಮ ಗುರಿ. ಅನಾರೋಗ್ಯಮುಕ್ತ ಬೈಂದೂರು ನಿರ್ವಾಣಕ್ಕಾಗಿ ಸರ್ಕಾರ ಹಾಗೂ ಸಂ ಸಂಸ್ಥೆಗಳ ಸಹಕಾರದಿಂದ ಎಲ್ಲರಿಗೂ ಇನ್ಶುರೆನ್ಸ್ ಮಾಡಿಸುವ ಅಭಿಯಾನ ಯಶಸ್ವಿಯಾಗಬೇಕು ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.
ಬೈಂದೂರು ಉತ್ಸವದ ಪೂರ್ವಭಾವಿಯಾಗಿ ಬೆಂಗಳೂರು ವಿಜಯನಗರ ಬಂಟರ ಸಂ ತಂಡದ ನೇತೃತ್ವದಲ್ಲಿ ನಡೆದ ವಿದ್ಯಾ ಬೆಳಕು ಯೋಜನೆ ಸವಾರಂಭದಲ್ಲಿ ಪೋಸ್ಟರ್ ಹಾಗೂ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಸಂದ ಗೌರವಾಧ್ಯಕ್ಷ ಟಿ.ಶಿವಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಇದು ಬೈಂದೂರಿನ ಮಕ್ಕಳ ಕನಸುಗಳಿಗೆ ಬೆಳಕು ನೀಡುವ ಕಾರ್ಯವಾಗಿದ್ದು, ಬೈಂದೂರು ಉತ್ಸವ ಸಮಿತಿ ಬೆಂಗಳೂರು ತಂಡವು ಊರಿನ ಮಕ್ಕಳ ಶಿಕ್ಷಣ ಹಾಗೂ ಆರೋಗ್ಯ ಭದ್ರತೆಗಾಗಿ ಕೆಲಸ ವಾಡುತ್ತಿದೆ ಎಂದರು.
ಸಣ್ಣ ಉದ್ದಿಮೆಗಳು ಮತ್ತು ಬೇಕರಿ ಒಕ್ಕೂಟ ಅಧ್ಯಕ್ಷ ಡಿ.ಬಿ.ಪ್ರತಾಪ ಶೆಟ್ಟಿ, ಯುವ ಉದ್ಯಮಿ ಬೆಳ್ಳಾಲ ಸುಧೀರ್ ಶೆಟ್ಟಿ ವಾತನಾಡಿದರು. ಸಂತೋಷ್ ಮೂಡುಬಗೆ, ಗೀತಾ ಶೆಟ್ಟಿ, ಸತೀಶ್ ಶೆಟ್ಟಿ, ಉಮೇಶ್, ಶೇಖರ್ ಕಾಲ್ತೋಡು, ವಾತೃ ಸಾಗರ ಸಂಸ್ಥೆಯ ಕೃಷ್ಣ ಪೂಜಾರಿ ಹಾಗೂ ಎಸ್.ಎಂ.ಚಂದ್ರ ದೇವಾಡಿಗ ಉಪಸ್ಥಿತರಿದ್ದರು.
ನಾಗರಾಜ್ ಶೆಟ್ಟಿ ಸ್ವಾಗತಿಸಿದರು. ವಿಜು ಉಪ್ಪುಂದ ವಂದಿಸಿದರು. ಚರಣ್ ಬೈಂದೂರು ನಿರೂಪಿಸಿದರು.