ಕುಕ್ಕೆಹಳ್ಳಿಯ ಶ್ರೀ ಆದಿಮಾಯೇ ಮೂಕಾಂಬಿಕಾ ಮತ್ತು ಕೊರಗಜ್ಜ ಕ್ಷೇತ್ರದಲ್ಲಿ ಮಡಾಮಕ್ಕಿ ಶ್ರೀ ವೀರಭದ್ರ ದಶಾವತಾರ ಯಕ್ಷಗಾನ ಮಂಡಳಿಯ ರಂಗ ವೇದಿಕೆಯಲ್ಲಿ ಕುಕ್ಕೆಹಳ್ಳಿ ಶ್ರೀ ಕೊರಗಜ್ಜನ ಕರಿಗಂಧ ಪ್ರಸಂಗದ ಬಿಡುಗಡೆ ನಡೆಯಿತು.  
ಉಡುಪಿ

ಯಕ್ಷಗಾನ ಪ್ರಸಂಗದಿಂದ ಹೆಚ್ಚುತ್ತದೆ ಕ್ಷೇತ್ರದ ಮಹಿಮೆ

ವಿಜಯವಾಣಿ ಸುದ್ದಿಜಾಲ ಹೆಬ್ರಿ
ಯಕ್ಷಗಾನ ಪ್ರಸಂಗಗಳ ಮೂಲಕ ಕ್ಷೇತ್ರದ ಕಥೆಯನ್ನು ಜನರಿಗೆ ತಿಳಿಸಿದರೆ ಜನರು ಹೆಚ್ಚಿನ ಪ್ರಭಾವಕ್ಕೆ ಒಳಗಾಗುತ್ತಾರೆ. ಪಿ.ವಿ.ಆನಂದ ಸಾಲಿಗ್ರಾಮ ಅವರ ಪ್ರಸಂಗಗಳು ಯಶಸ್ವಿ ಪ್ರಸಂಗಗಳಾಗಿದ್ದು ಕ್ಷೇತ್ರದ ಮಹಿಮೆಯನ್ನು, ಮೇಳಗಳು ಎಲ್ಲ ಕಡೆ ಹರಡುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದು ಹಾವಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸುರೇಶ್ ಶೆಟ್ಟಿ ಹೇಳಿದರು.
ಅವರು ಕುಕ್ಕೆಹಳ್ಳಿಯ ಶ್ರೀ ಆದಿಮಾಯೇ ಮೂಕಾಂಬಿಕಾ ಮತ್ತು ಕೊರಗಜ್ಜ ಕ್ಷೇತ್ರದಲ್ಲಿ ಮಡಾಮಕ್ಕಿ ಶ್ರೀ ವೀರಭದ್ರ ದಶಾವತಾರ ಯಕ್ಷಗಾನ ಮಂಡಳಿಯ ರಂಗ ವೇದಿಕೆಯಲ್ಲಿ ಕುಕ್ಕೆಹಳ್ಳಿ ಶ್ರೀ ಕೊರಗಜ್ಜನ ಕರಿಗಂಧ ಪ್ರಸಂಗದ ಬಿಡುಗಡೆ ಮಾಡಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು.
67 ಯಕ್ಷಗಾನ ಪ್ರಸಂಗಗಳನ್ನು ರಚಿಸಿದ ಬಡಗಿನ ಪ್ರಸಂಗಕರ್ತ ಪಿ.ವಿ.ಆನಂದ ಸಾಲಿಗ್ರಾಮ ಅವರನ್ನು ಕ್ಷೇತ್ರದ ವತಿಯಿಂದ ಸನ್ಮಾನಿಸಲಾಯಿತು.
ಕೊರಗಜ್ಜ ಸೇವಾ ಸಮಿತಿಯ ಗೌರವ ಅಧ್ಯಕ್ಷ ಬಜ್ಜಾಲು ಚಂದ್ರಶೇಖರ ಹೆಗ್ಡೆ, ಬ್ರಹ್ಮಾವರ ವ್ಯ.ಸೇ.ಸ ಸಂಘದ ನಿರ್ದೇಶಕ ಕಮಲಾಕ್ಷ ಹೆಬ್ಬಾರ್, ಚೇರ್ಕಾಡಿ ಗ್ರಾಪಂ ಮಾಜಿ ಅಧ್ಯಕ್ಷ ಹರೀಶ್ ಶೆಟ್ಟಿ, ಮೇಳದ ಮೇನೇಜರ್ ಮನೋಹರ ಹೆಗ್ಡೆ, ಕ್ಯಾಂಪ್ ಮೇನೇಜರ್ ಸೌಢ ಭಾಸ್ಕರ್ ಉಪಸ್ಥಿತರಿದ್ದರು. ಕ್ಷೇತ್ರದ ಧರ್ಮದರ್ಶಿ ಡಾ.ಕೆ.ಕೃಷ್ಣ ಕುಲಾಲ್ ನಿರೂಪಿಸಿ, ವಂದಿಸಿದರು. ಬಳಿಕ ಕುಕ್ಕೆಹಳ್ಳಿ ಶ್ರೀ ಕೊರಗಜ್ಜನ ಕರಿಗಂಧ ಪ್ರಸಂಗ ಪ್ರದರ್ಶನಗೊಂಡಿತು.