ಕುಪ್ಪೆಪದವು ಪ್ರದೇಶ ಬೀಡಿ ಕೆಲಸಗಾರರ ಸಂಘದ 36ನೇ ವಾರ್ಷಿಕ ಮಹಾಸಭೆ ನಡೆಯಿತು. ಬೀಡಿ ಕಾರ್ಮಿಕರ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಜೆ.ಬಾಲಕೃಷ್ಣ ಶೆಟ್ಟಿ, ಸಂಘದ ಕಾರ್ಯದರ್ಶಿ ವಸಂತಿ ಕುಪ್ಪೆಪದವು, ಕೋಶಾಧಿಕಾರಿ ಕುಸುಮಾ ಮೊದಲಾದವರಿದ್ದರು.
ಗುರುಪುರ: ಬೀಡಿ ಕಾರ್ಮಿಕರು ತಮ್ಮ ಒಗ್ಗಟ್ಟಿನ ಬಲದಿಂದ ಹಲವು ಸವಲತ್ತು ಪಡೆದುಕೊಂಡಿದ್ದಾರೆ. 2024ರಲ್ಲಿ ಸರ್ಕಾರ ಹೆಚ್ಚಿಸಿರುವ 17 ರೂ. ಕನಿಷ್ಠ ಕೂಲಿಯನ್ನು ಮಾಲೀಕರು ಇನ್ನೂ ನೀಡುತ್ತಿಲ್ಲ. ಇದಕ್ಕಾಗಿ ಬೀಡಿ ಕಾರ್ಮಿಕರ ಹೋರಾಟ ತೀವ್ರಗೊಳ್ಳಬೇಕು ಎಂದು ಬೀಡಿ ಕಾರ್ಮಿಕರ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಜೆ.ಬಾಲಕೃಷ್ಣ ಶೆಟ್ಟಿ ಕರೆ ನೀಡಿದರು.
ಎಡಪದವು ನಾರಾಯಣಗುರು ಸಭಾಭವನದಲ್ಲಿ ಭಾನುವಾರ ಕುಪ್ಪೆಪದವು ಪ್ರದೇಶ ಬೀಡಿ ಕೆಲಸಗಾರರ ಸಂಘದ 36ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.
ಸಂಘದ ಕಾರ್ಯದರ್ಶಿ ವಸಂತಿ ಕುಪ್ಪೆಪದವು ವರದಿ ಮಂಡಿಸಿದರು. ಕೋಶಾಧಿಕಾರಿ ಕುಸುಮಾ ಲೆಕ್ಕಪತ್ರ ವಾಚಿಸಿದರು. ಫೆಡರೇಶನ್ ಕೋಶಾಧಿಕಾರಿ ಸದಾಶಿವದಾಸ್ ಪ್ರಾಸ್ತಾವಿಕ ಮಾತನಾಡಿದರು.
ಜಿಲ್ಲಾ ಬೀಡಿ ಫೆಡರೇಶನ್ ಅಧ್ಯಕ್ಷ ಸುಕುಮಾರ ತೊಕ್ಕೊಟ್ಟು, ಸಿಐಟಿಯು ಗುರುಪುರ ವಲಯ ಸಂಚಾಲಕ ನೋಣಯ್ಯ ಗೌಡ ಮಾತನಾಡಿದರು. ವಾಮಂಜೂರು ಬೀಡಿ ಕೆಲಸಗಾರರ ಸಂಘ ಅಧ್ಯಕ್ಷ ಹೊನ್ನಯ ಅಮೀನ್, ಗುರುಪುರ ಸುರತ್ಕಲ್ ಬೀಡಿ ಲೇಬರ್ ಯೂನಿಯನ್ ಅಧ್ಯಕ್ಷ ಗೋಪಾಲ ಮೂಲ್ಯ ಮಳಲಿ, ಪಿಎಫ್ ಪಿಂಚಣಿದಾರರ ಸಂಘದ ಕುಪ್ಪೆಪದವು ವಲಯ ಅಧ್ಯಕ್ಷೆ ಭಾರತಿ, ಸಂಘದ ಪದಾಧಿಕಾರಿಗಳಾದ ವಾರಿಜಾ ಕುಪ್ಪೆಪದವು, ಬೇಬಿ ನಾಯ್ಕ, ವಾರಿಜಾ ಮಂಗ್ಲುಚಾರ್ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ವಸಂತಿ ಕುಪ್ಪೆಪದವು ವಂದಿಸಿದರು.