ಇಸ್ಕಾನ್ ಶ್ರೀಕೃಷ್ಣ ಜನ್ಮಾಷ್ಟಮಿ ಪೂರ್ವಭಾವಿ ಸಭೆಯಲ್ಲಿ ಶ್ರೀ ಕೃಷ್ಣ ಬಲರಾಮ ಮಂದಿರದ ಉಪಾಧ್ಯಕ್ಷ ಸನಂದನದಾಸ ಪ್ರಭು ಮಾತನಾಡಿದರು. ನಕುಲದಾಸ ಕೃಷ್ಣದಾಸ, ಮಂಜುನಾಥ ಭಂಡಾರಿ ಶೆಡ್ಡೆ ಮತ್ತಿತರರಿದ್ದರು.  
ಉಡುಪಿ

ಗ್ರಾಮಸ್ಥರ ಸಹಕಾರದಿಂದ ಉತ್ಸವಕ್ಕೆ ಬಲ

ಗುರುಪುರ: ಶ್ರೀ ಕೃಷ್ಣನ ಅನುಗ್ರಹದಿಂದ ಈ ಬಾರಿ ಮಂಗಳೂರು ಹೊರವಲಯದ ಮೂಡುಶೆಡ್ಡೆಯಲ್ಲಿ ಸಂಸ್ಥೆಯು ಶ್ರೀ ಕೃಷ್ಣನ ಹುಟ್ಟುಹಬ್ಬ ಆಚರಿಸುವಂತಾಗಿದೆ. ಮೂಡುಬಿದಿರೆಯ ಆಳ್ವಾಸ್ ಪ್ರತಿಷ್ಠಾನ ಮತ್ತು ಸುತ್ತಲ ಗ್ರಾಮಸ್ಥರ ಸಹಕಾರ ಮಹೋತ್ಸವಕ್ಕೆ ಹೆಚ್ಚಿನ ಬಲ ತುಂಬಿದೆ. ಸೆ.2ರಂದು ರಾತ್ರಿ ಇಲ್ಲಿಗೆ ಶ್ರೀ ದೇವರ ಆಗಮನವಾಗಲಿದ್ದು, ಎರಡು ದಿನ ಬೆಳಗ್ಗಿನಿಂದ ರಾತ್ರಿವರೆಗೆ ವಿಶೇಷ ಪೂಜೆಗಳು ನಡೆಯಲಿವೆ ಎಂದು ಶ್ರೀ ಕೃಷ್ಣ ಬಲರಾಮ ಮಂದಿರದ ಉಪಾಧ್ಯಕ್ಷ ಸನಂದನದಾಸ ಪ್ರಭು ಹೇಳಿದರು.

ಶ್ರೀ ಕೃಷ್ಣ ಬಲರಾಮ ಮಂದಿರ ಇಸ್ಕಾನ್ ಮಂಗಳೂರು ವತಿಯಿಂದ ಸೆ.3 ಮತ್ತು 4ರಂದು ಮೂಡುಶೆಡ್ಡೆ ಪಿಲಿಕುಳದ ಸ್ಕೌಟ್ಸ್ ಭವನದಲ್ಲಿ ನಡೆಯಲಿರುವ ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಂಗಳವಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಂದಿರದ ಪ್ರಮುಖ ನಕುಲದಾಸ ಕೃಷ್ಣದಾಸ ಮಾತನಾಡಿದರು. ಮೂಡುಬಿದಿರೆ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಭಾಗವಹಿಸಿದರು. ಆದ್ಯಪಾಡಿ ಶ್ರೀ ನೀಲಕಂಠ ಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಮಂಜುನಾಥ ಭಂಡಾರಿ ಶೆಡ್ಡೆ, ಸ್ಥಳೀಯ ಪ್ರಮುಖರಾದ ವೇಣುಗೋಪಾಲ ಅರಸ ಮೂಡುಶೆಡ್ಡೆ, ಸಂತೋಷ್ ಶೆಟ್ಟಿ ಶೆಡ್ಡೆ ಹೊಸಲಕ್ಕೆ, ರಮಾನಾಥ ಅತ್ತಾರ್(ಚಿತ್ತಣ್ಣ), ಜಯರಾಮ ಕೊಟ್ಟಾರಿ, ಜಯಶ್ರೀ, ಪ್ರವೀಣ್ ಆಳ್ವ ಸಲಹೆ ಸೂಚನೆ ನೀಡಿದರು. ಮಂದಿರದ ಹಿರಿಯ ಭಕ್ತ ನಂದನಾಚಾರ್ಯ ದಾಸ್, ಮೂಡುಶೆಡ್ಡೆ ಸುತ್ತಲ ಪ್ರದೇಶದ ಸಂಘ-ಸಂಸ್ಥೆ, ದೈವ-ದೇವಾಲಯಗಳ ಪ್ರಮುಖರು, ಶೀ ಕೃಷ್ಣ ಭಕ್ತರು, ಗ್ರಾಮಸ್ಥರು ಇದ್ದರು. ಮಂದಿರದ ಭಕ್ತ ಯಶವಂತ ಸಾಲ್ಯಾನ್ ಪ್ರಸ್ತಾವಿಸಿ ನಿರೂಪಿಸಿದರು. ಸುಂದರ ಗೌರ್‌ದಾಸ್ ಪ್ರಾರ್ಥನೆಗೈದರು. ನಕುಲಕೃಷ್ಣದಾಸ್ ವಂದಿಸಿದರು.