ಸಾಸ್ತಾನದ ಬ್ರಹ್ಮ ಬೈದರ್ಕಳ ಪಂಜುರ್ಲಿ ಗರಡಿಯಲ್ಲಿ ಗೋಳಿಗರಡಿ ಮೇಳದ ಕಲಾವಿದರಿಗೆ ನಡೆದ ತರಬೇತಿಯಲ್ಲಿ ಪಿ.ವಿ.ಆನಂದ ಸಾಲಿಗ್ರಾಮ ಮಾತನಾಡಿದರು. 
ಉಡುಪಿ

ಕಲಾವಿದರ ಸಾಂಘಿಕ ಶ್ರಮದಿಂದ ಪ್ರದರ್ಶನ ಯಶಸ್ವಿ

ಕೋಟ: ಕಲಾವಿದರು ತಮಗೆ ಸಿಕ್ಕ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಪ್ರತಿ ಸಂದರ್ಭದಲ್ಲೂ ಪ್ರಸಂಗದ ಮೂಲ ಚಿಂತನೆಯನ್ನು ಗಮನದಲ್ಲಿ ಇಟ್ಟುಕೊಂಡು ಪ್ರದರ್ಶನ ನೀಡಿದಲ್ಲಿ ಅಂತಹ ಕಥೆ ಯಶಸ್ವಿ ಆಗುತ್ತದೆ ಎಂದು ಯಕ್ಷಗಾನ ಪ್ರಸಂಗಕರ್ತ, ರಾಜ್ಯ ಸಂಪನ್ಮೂಲ ವ್ಯಕ್ತಿ ಪಿ.ವಿ.ಆನಂದ ಸಾಲಿಗ್ರಾಮ ಹೇಳಿದರು.
ಸಾಸ್ತಾನದ ಬ್ರಹ್ಮ ಬೈದರ್ಕಳ ಪಂಜುರ್ಲಿ ಗರಡಿಯಲ್ಲಿ ಶನಿವಾರ ಗೋಳಿಗರಡಿ ಮೇಳದ ಕಲಾವಿದರಿಗೆ ನಡೆದ ಈ ವರುಷದ ಯಕ್ಷಗಾನ ಪ್ರಸಂಗ ಹಂದಿಗದ್ದೆ ಸುರೇಶ್ ಕುಲಾಲ್ ವಿರಚಿತ ‘ಮಹಾಶಕ್ತಿ ಚೌಡೇಶ್ವರಿ ಕಥೆ’ಯ ತರಬೇತಿಯಲ್ಲಿ ಮಾತನಾಡಿದರು.
ಮೇಳದ ಯಜಮಾನ ಜಿ.ವಿಠಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರದ ಪಾತ್ರಿಗಳಾದ ಶಂಕರ ಪೂಜಾರಿ, ಮೇಳದ ಪ್ರೋತ್ಸಾಹಕರಾದ ಶಂಕರ ಕುಲಾಲ್, ಸಾಮಾಜಿಕ ಮುಂದಾಳು ಗಣಪಯ್ಯ ಆಚಾರ್, ಭಾಗವತರಾದ ಸುರೇಶ್ ರಾವ್ ಬಾರ್ಕೂರು, ಆರ್ಡಿ ಸಂತೋಷ, ಹಿರಿಯ ಕಲಾವಿದರಾದ ಶ್ರೀಕಂಠ ಭಟ್, ಮಾಗೋಡು ರಾಘವೇಂದ್ರ ಸೇರಿದಂತೆ ಹಿಮ್ಮೇಳ ಮುಮ್ಮೇಳ ಕಲಾವಿದರೆರು ಪಾಲ್ಗೊಂಡಿದ್ದರು.