ಮಕ್ಕಳ ಮೊದಲ ಹಂತದ ಸಾಂಸ್ಕೃತಿಕ ಸ್ಪರ್ಧೆಗಳನ್ನು ಪುಟಾಣಿಗಳಾದ ಪ್ರಾಧ್ಯಾ ಬಜ್ಪೆ, ಆದಿತ್ಯರಾಜ್ ಭಟ್, ತ್ರಿಷಿಕಾ, ಅಭಿಷ್ಟ ಕೃಷ್ಣ, ಅಗಮ್ಯ ಉದ್ಘಾಟಿಸಿದರು. ವಿದ್ವಾನ್ ಕೆ.ವಿ.ರಮಣಾಚಾರ್ಯ, ಮುದ್ದುಕೃಷ್ಣ ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಚಂದ್ರಕಾಂತ್ ತೊಕ್ಕೊಟ್ಟು, ಉಪಾಧ್ಯಕ್ಷ ಸತೀಶ್ ದೀಪಂ ಮೊದಲಾದವರಿದ್ದರು.
ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಮೊಸರು ಕುಡಿಕೆ ಉತ್ಸವದ ಉದ್ದೇಶವೇ ತಾಯಿ ಯಶೋದೆ, ದೇವಕಿಯ ಮಮತೆಯ ವಿಚಾರಧಾರೆಯನ್ನು ಮರು ಸೃಷ್ಟಿಸುತ್ತಾ ಕಣ್ತುಂಬಿಸಿಕೊಳ್ಳುವ ಸಂಭ್ರಮದ ಕ್ಷಣ ಎಂದು ಉಡುಪಿ ಶ್ರೀ ಪುತ್ತಿಗೆ ಮಠದ ಕೋಟಿಗೀತ ಲೇಖನ ಯಜ್ಞಗೀತ ಮಂದಿರದ ಪೂರ್ಣಾವಧಿ ಪ್ರಚಾರಕ ವಿದ್ವಾನ್ ಕೆ.ವಿ.ರಮಣಾಚಾರ್ಯ ಅಭಿಪ್ರಾಯಪಟ್ಟರು.
ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ತೊಕ್ಕೊಟ್ಟಿನ ಮುದ್ದುಕೃಷ್ಣ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ತೊಕ್ಕೊಟ್ಟು ಒಳಪೇಟೆ ಕ್ಲಿಕ್ ಸಭಾಂಗಣದಲ್ಲಿ ಭಾನುವಾರ ಪ್ರಾಥಮಿಕ, ಪ್ರೌಢಶಾಲಾ ಮಕ್ಕಳ ಮೊದಲ ಹಂತದ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪುಟಾಣಿಗಳಾದ ಪ್ರಾಧ್ಯಾ ಬಜ್ಪೆ, ಆದಿತ್ಯರಾಜ್ ಭಟ್, ತ್ರಿಷಿಕಾ, ಅಭಿಷ್ಟ ಕೃಷ್ಣ, ಅಗಮ್ಯ ಉದ್ಘಾಟಿಸಿದರು. ಮುದ್ದುಕೃಷ್ಣ ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಚಂದ್ರಕಾಂತ್ ತೊಕ್ಕೊಟ್ಟು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸತೀಶ್ ದೀಪಂ, ಪ್ರಧಾನ ಕಾರ್ಯದರ್ಶಿ ಭವಿತ್ ಬಂಗೇರ, ಕಾರ್ಯಕ್ರಮ ಸಂಯೋಜಕ, ಉಳ್ಳಾಲ ಚೀರುಂಭ ಭಗವತಿ ಕ್ಷೇತ್ರದ ಗುರಿಕಾರ ಅಶೋಕ್ ತೊಕ್ಕೊಟ್ಟು, ಸಾಂಸ್ಕೃತಿಕ ಕಾರ್ಯದರ್ಶಿ ನವನೀತ್ ಕುತ್ತಾರ್, ಸಮಿತಿ ಸದಸ್ಯರು ಉಪಸ್ಥಿತರಿದ್ದರು. ರಾಜಗೋಪಾಲ್ ಪೈವಳ್ಳಿಕೆ, ಪುಷ್ಪ ಮುರಳಿಧರ್, ತುಷಾರ್ ಆಚಾರ್ಯ, ಹರಿಣಿ ಉದಯ್, ಕೃತಿ ಕರ್ಕೇರಾ, ರಾಜೇಶ್ ದಡ್ಡಂಗಡಿ, ಕಾರ್ತಿಕ್ ಉಳ್ಳಾಲ್, ಜೆಪಿ ಕೋಟೆಕಾರ್, ಪ್ರಮೋದ್ ಉಳ್ಳಾಲ ತೀರ್ಪುಗಾರರಾಗಿದ್ದರು.