ಕುಂದಾಪುರದ ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಸಾಡಿ ಖಾದ್ಯಗಳ ತಯಾರಿ ಮತ್ತು ಪ್ರದರ್ಶನ ಸ್ಪರ್ಧೆ ನಡೆಯಿತು. ಪ್ರಮುಖರಾದ ಎ.ಜಯಕರ ಶೆಟ್ಟಿ, ಡಾ.ಕೆ.ಉಮೇಶ ಶೆಟ್ಟಿ, ಸಂತೋಷ್ ಶೆಟ್ಟಿ ಮತ್ತಿತರರು ಇದ್ದರು. 
ಉಡುಪಿ

ಸಂಸ್ಕೃತಿ, ಆಚರಣೆ ತಿಳಿಸುವ ಪ್ರಯತ್ನ ಶ್ಲಾಘನೀಯ

ಕುಂದಾಪುರ: ವಿದ್ಯಾರ್ಥಿಗಳಿಗೆ ಸ್ಥಳೀಯ ಭಾಷೆ, ಸಂಸ್ಕೃತಿ, ಆಚರಣೆ, ಆಹಾರ ಪದ್ಧತಿಗಳನ್ನು ತಿಳಿಸುವ ಪ್ರಯತ್ನ ಶ್ಲಾನೀಯವಾಗಿದ್ದು, 123 ಕುಂದಾಪುರದ ವಿಶೇಷ ಖಾದ್ಯಗಳನ್ನು ವಿದ್ಯಾರ್ಥಿಗಳು ಸ್ಪರ್ಧೆಯೊಂದಲ್ಲಿ ಪ್ರದರ್ಶಿಸಿರುವುದು ಸಂಸ್ಥೆಯ ಪ್ರೋತ್ಸಾಹದ ಪ್ರತೀಕ ಎಂದು ಕಂಡ್ಲೂರಿನ ನೇತಾಜಿ ಹಿರಿಯ ಪ್ರಾಥಮಿಕ ಶಾಲೆ ನಿವೃತ್ತ ಮುಖ್ಯಶಿಕ್ಷಕ ಎ.ಜಯಕರ ಶೆಟ್ಟಿ ಹೇಳಿದರು.

ಕುಂದಾಪುರದ ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಮತ್ತು ಕುಂದಗನ್ನಡ ಸಂಘ ಆಶ್ರಯದಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಆಸಾಡಿ ಖಾದ್ಯಗಳ ತಯಾರಿ ಮತ್ತು ಪ್ರದರ್ಶನ ಸ್ಪರ್ಧೆಯಲ್ಲಿ ಮಾತನಾಡಿದರು.
ಪ್ರಾಂಶುಪಾಲ ಡಾ.ಕೆ.ಉಮೇಶ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕೈಲ್ಕೆರೆಮೊಳಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ವಡ್ಡರ್ಸೆ ಸಂತೋಷ್ ಶೆಟ್ಟಿ, ಕುಂದಗನ್ನಡ ಭಾಷೆ ಚಿಂತಕ ರಾಮ ಶೆಟ್ಟಿ ಅತ್ತಿಕಾರ್ ರ್ತೀರ್ಪುಗಾರರಾಗಿದ್ದರು.
ಹಿರಿಯ ಜಾನಪದ ಕಲಾವಿದ ಮಂಜು ಪೂಜಾರಿ ಬನ್ನಾಡಿ ಅವರನ್ನು ಸನ್ಮಾನಿಸಲಾಯಿತು. ಮನೀಷಾ ಮತ್ತು ಆದಿತ್ಯ ಭತ್ತ ಕುಟ್ಟುವ ಹಾಡು ಹಾಡಿದರು. ಉಪ ಪ್ರಾಂಶುಪಾಲ ಡಾ.ಚೇತನ ಶೆಟ್ಟಿ ಕೋವಾಡಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರಕ್ಷಿತ್ ರಾವ್ ಗುಜ್ಜಾಡಿ, ರೇಷ್ಮಾ ಶೆಟ್ಟಿ, ಕುಂದಗನ್ನಡ ಸಂಘ ಸಂಯೋಜಕಿ ರಶ್ಮಿತಾ ಶೆಟ್ಟಿ ಉಪಸ್ಥಿತರಿದ್ದರು. ಪೃಥ್ವಿ ಸ್ವಾಗತಿಸಿದರು. ದೀಪ್ತಿ ವಂದಿಸಿದರು. ಶರಣ್ಯ ಶೆಟ್ಟಿ ನಿರೂಪಿಸಿದರು.
-----ಫೋಟೋ------
14ಜಿಎಎನ್2ಎಯುಜಿ
ಕುಂದಾಪುರದ ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಸಾಡಿ ಖಾದ್ಯಗಳ ತಯಾರಿ ಮತ್ತು ಪ್ರದರ್ಶನ ಸ್ಪರ್ಧೆ ನಡೆಯಿತು. ಪ್ರಮುಖರಾದ ಎ.ಜಯಕರ ಶೆಟ್ಟಿ, ಡಾ.ಕೆ.ಉಮೇಶ ಶೆಟ್ಟಿ, ಸಂತೋಷ್ ಶೆಟ್ಟಿ ಮತ್ತಿತರರು ಇದ್ದರು.