ಪೆರ್ಲಂಪಾಡಿಯಲ್ಲಿ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಪದಗ್ರಹಣವನ್ನು ಪದ್ಮನಾಭ ಶೆಟ್ಟಿ ಉದ್ಘಾಟಿಸಿದರು. ಉದಯ ಕುಮಾರ್ ಜಿ.ಕೆ., ಬಾಬು ನಾಯ್ಕ, ಶಶಿಧರ್ ಮತ್ತಿತರರು ಇದ್ದರು.
ಪುತ್ತೂರು ಗ್ರಾಮಾಂತರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದಾಗಿ ವ್ಯಕ್ತಿಗಳು ಶಕ್ತಿಯಾಗಿ ರೂಪುಗೊಳ್ಳಲು ಸಾಧ್ಯವಾಗಿದೆ. ಗ್ರಾಮೀಣ ಭಾಗದ ಜನತೆಯ ಅಭಿವೃದ್ಧಿ ಹಾಗೂ ಕೃಷಿ ಕ್ಷೇತ್ರದ ಬೆಳವಣಿಗೆಯಲ್ಲಿ ಯೋಜನೆ ಮಹತ್ವದ ಪಾತ್ರ ವಹಿಸಿದೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ ಅಭಿಪ್ರಾಯಪಟ್ಟರು.
ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಷಣ್ಮುಖದೇವ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬಿ.ಸಿ.ಟ್ರಸ್ಟ್ ಪುತ್ತೂರು, ಕೊಳ್ತಿಗೆ, ಪೆರ್ಲಂಪಾಡಿ ಮತ್ತು ಮೊಗಪ್ಪೆ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಪದಗ್ರಹಣ ಹಾಗೂ ಆಟಿಡೊಂಜಿ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು-ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷ ಉದಯ ಕುಮಾರ್ ಜಿ.ಕೆ. ಅಧ್ಯಕ್ಷತೆ ವಹಿಸಿದ್ದರು. ಯೋಜನೆಯ ದಕ್ಷಿಣ ಕನ್ನಡ ಜಿಲ್ಲೆ- 2 ನಿರ್ದೇಶಕ ಬಾಬು ನಾಯ್ಕ, ಪುತ್ತೂರು ತಾಲೂಕು ಯೋಜನಾಧಿಕಾರಿ ಶಶಿಧರ್, ಪುತ್ತೂರಿನ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಮುಖ್ಯಶಿಕ್ಷಕಿ ಆಶಾ ಬೆಳ್ಳಾರೆ, ಜನಜಾಗೃತಿ ವೇದಿಕೆ ಕೆಯ್ಯೂರು ವಲಯಾಧ್ಯಕ್ಷ ಅಬ್ದುಲ್ ಖಾದರ್ ಮೇರ್ಲ ಅತಿಥಿಗಳಾಗಿದ್ದರು.
ಪ್ರಮುಖರಾದ ತೀರ್ಥಾನಂದ ದುಗ್ಗಳ, ಕೃಷ್ಣವೇಣಿ, ಭವ್ಯಾ, ಹೇಮಾವತಿ ಕುರ್ಮಕೋಡಿ, ವೀಣಾ ಕೋಡಂಬು, ಯಶೋದಾ ಕುಮಾರ್, ವಸಂತ ಕೆರೆಮೂಲೆ, ವೆಂಕಟರಮಣ ಆಚಾರ್ಯ, ಶಿವರಾಮ ಪೂಜಾರಿ, ತಿಮ್ಮಪ್ಪ ಗೌಡ ದುಗ್ಗಳ, ಚಂದ್ರಾವತಿ ಕುಂಟಿಕಾನ ಮೊದಲಾದವರು ಉಪಸ್ಥಿತರಿದ್ದರು.
ಕುಸುಮಾಧರ ಪಾಂಬಾರು ಸ್ವಾಗತಿಸಿದರು. ಗಾಯತ್ರಿ ವರದಿ ಮಂಡಿಸಿದರು. ಶುಭವತಿ ನಿರೂಪಿಸಿದರು. ಭಜನೆ, ಕುಣಿತ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.