ಮೊಸರು ಕುಡಿಕೆ ಉತ್ಸವದ ಧಾರ್ಮಿಕ ಸಭೆಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಂಗಾಧರ ಪೂಜಾರಿ, ಸಾಧಕ ವಿದ್ಯಾರ್ಥಿಗಳಾದ ಶ್ರೀರಕ್ಷಾ ಎಚ್.ಪೂಜಾರಿ, ಧನಲಕ್ಷ್ಮೀ ಅಸೈ, ದರ್ಶಿನಿ ಉಮೇಶ್, ಫಾತಿಮಾ ಶಿಝಾ ಹಾಗೂ ಕಾವ್ಯಶ್ರೀ ಅವರನ್ನು ಸನ್ಮಾನಿಸಲಾಯಿತು. 
ಉಡುಪಿ

ತುಳುನಾಡಿನ ಸಂಸ್ಕೃತಿ, ಆಚಾರ, ವಿಚಾರವೇ ವಿಭಿನ್ನ

ಉಳ್ಳಾಲ: ತುಳುನಾಡಿನ ಸಂಸ್ಕೃತಿ, ಆಚಾರ, ವಿಚಾರವೇ ವಿಭಿನ್ನ. ಇಲ್ಲಿ ನಿರಂತರ ನಡೆಯುವ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸಂಸ್ಕೃತಿ ಭದ್ರವಾಗಿ ನೆಲೆ ನಿಂತಿದ್ದು ಆಧುನಿಕ ತಂತ್ರಜ್ಞಾನದ ಕಾಲದಲ್ಲೂ ಕರಾವಳಿಯ ಸಂಸ್ಕೃತಿ ಮೆಟ್ಟಿ ಹೋಗಲು ಯಾವುದೇ ದೇಶಕ್ಕೂ ಸಾಧ್ಯವಾಗಿಲ್ಲ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ಅಸೈಗೋಳಿ ಯುವಕ ಮಂಡಲ ಮತ್ತು ಸಾರ್ವಜನಿಕ ಮೊಸರುಕುಡಿಕೆ ಉತ್ಸವ ಸಮಿತಿಯ ಜಂಟಿ ಆಶ್ರಯದಲ್ಲಿ ಅಸೈಗೋಳಿಯ ಕೇಂದ್ರ ಮೈದಾನದಲ್ಲಿ ಶನಿವಾರ 8ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಉತ್ಸವದ ಸಾಂಸ್ಕೃತಿಕ ಮತ್ತು ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದರು.
ವಾಸುದೇವ ಕೊಣಾಜೆ ಅವರಿಗೆ ಗ್ರಾಮ ಗೌರವ ನೀಡಿ ಪುರಸ್ಕರಿಸಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಂಗಾಧರ ಪೂಜಾರಿ, ಸಾಧಕ ವಿದ್ಯಾರ್ಥಿಗಳಾದ ಶ್ರೀರಕ್ಷಾ ಎಚ್.ಪೂಜಾರಿ, ಧನಲಕ್ಷ್ಮೀ ಅಸೈ, ದರ್ಶಿನಿ ಉಮೇಶ್, ಫಾತಿಮಾ ಶಿಝಾ ಹಾಗೂ ಕಾವ್ಯಶ್ರೀ ಅವರನ್ನು ಸನ್ಮಾನಿಸಲಾಯಿತು.
ಧಾರ್ಮಿಕ, ಸಾಮಾಜಿಕ ಮುಂದಾಳು ನಾರಾಯಣ ರೈ ಕಕ್ಕೆಮಜಲು ಅಧ್ಯಕ್ಷತೆ ವಹಿಸಿದ್ದರು. ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ಅಧ್ಯಕ್ಷ ಶ್ರೀನಿವಾಸ ಶೆಟ್ಟಿ ಪುಲ್ಲು, ಟ್ರಸ್ಟಿಗಳಾದ ಪ್ರಶಾಂತ್ ಕಾಜವ, ಚಂದ್ರಶೇಖರ್ ಶೆಟ್ಟಿ ಮಂಟಮೆ, ಸಮಾಜಸೇವಕ ಸುರೇಂದ್ರ ರೈ ಗ್ರಾಮಚಾವಡಿ, ಬಂಟರ ಸಂಘ ಅಧ್ಯಕ್ಷ ರವೀಂದ್ರ ರೈ ಕಲ್ಲಿಮಾರ್, ಉದ್ಯಮಿಗಳಾದ ಇಕ್ಬಾಲ್ ಸಾಮಾನಿಗೆ, ಪುರುಷೋತ್ತಮ ಆಂಚನ್, ಉದ್ಯಮಿ ಸುರೇಶ್ ಅಸೈ, ವಿಎಚ್ ಪಿ ಗ್ರಾಮಾಂತರ ಅಧ್ಯಕ್ಷ ಶಿವಪ್ರಸಾದ್ ಕೊಣಾಜೆ, ಪಟ್ಟೋರಿ ಶ್ರೀ ನಾಗಬ್ರಹ್ಮ ಅರಸು ಉಳ್ಳಾಲ್ತಿ ಮಾಡ ಆಡಳಿತ ಮೊಕ್ತೇಸರ ದಿವಾಕರ ಭಂಡಾರಿ, ಕೊಣಾಜೆ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ರಾಜಾರಾಮ ರೈ, ವಕ್ಫ್ ರಾಜ್ಯ ಸಮಿತಿ ಸದಸ್ಯ ಅಬ್ದುಲ್ ರಹ್ಮಾನ್ ಕೋಡಿಜಾಲ್, ಸೀತಾರಾಮ್ ಶೆಟ್ಟಿ ದಡಸ್ ಮೊದಲಾದವರು ಉಪಸ್ಥಿತರಿದ್ದರು.
ಯುವಕ ಮಂಡಲದ ಅಧ್ಯಕ್ಷ ಸಂತೋಷ್ ಶೆಟ್ಟಿ ಪುಲ್ಲು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ತ್ಯಾಗಂ ಹರೇಕಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಮನಾ ಗಿರೀಶ್ ಸನ್ಮಾನ ಪತ್ರ ವಾಚಿಸಿದರು. ರಾಧಾಕೃಷ್ಣ ರೈ ಸ್ಪರ್ಧಾ ವಿಜೇತರ ಹೆಸರು ವಾಚಿಸಿದರು. ಶಿಕ್ಷಕರಾದ ಹರೀಶ್ ಕುಮಾರ್ ವಂದಿಸಿದರು. ರಾಜೀವ ಟಿ.ನಾಯಕ ನಿರೂಪಿಸಿದರು.