jailu 
ಉಡುಪಿ

ಅಪರಾಧಿಗೆ 10 ವರ್ಷ ಜೈಲು, ದಂಡ

ಕಾಸರಗೋಡು: ವಿವಾಹವಾಗುವುದಾಗಿ ನಂಬಿಸಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಅಪರಾಧಿ, ಕುಂಬಳೆ ಕೊಯಿಪ್ಪಾಡಿ ಬಟ್ಟಂಪಾಡಿ ನಿವಾಸಿ ಎಸ್.ಪುರುಷೋತ್ತಮ(40) ಎಂಬಾತನಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ (ಪ್ರಥಮ)ದ ನ್ಯಾಯಾಧೀಶ ಟಿ.ಎಸ್.ರಜಿತ 10 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 60,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡ ಪಾವತಿಸದಿದ್ದಲ್ಲಿ ಆರು ತಿಂಗಳ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಲಾಗಿದೆ.

ಕುಂಬಳೆ ಠಾಣೆ ಅಂದಿನ ಇನ್‌ಸ್ಪೆಕ್ಟರ್ ಎಂ.ಸಿ.ಅನಿಲ್ ಹಾಗೂ ನಂತರ ಇನ್‌ಸ್ಪೆಕ್ಟರ್ ಪಿ.ಪ್ರವೀಣ್ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. 2019 ಜೂ.2ರಂದು ಎಸ್.ಪುರುಷೋತ್ತಮ ಕೊಯಿಪ್ಪಾಡಿಯಲ್ಲಿರುವ ತನ್ನ ಮನೆಯಲ್ಲಿ ಹಾಗೂ ನಂತರ ಹೊಸದುರ್ಗದ ಚಾಮುಂಡಿಕುನ್ನುವಿನಲ್ಲಿರುವ ಸಂಬಂಧಿಕರ ಮನೆಗೆ ಕರೆದೊಯ್ದು ಹಲವು ಬಾರಿ ಲೈಂಗಿಕ ಕಿರುಕುಳ ನೀಡಿದ್ದರುವುದಲ್ಲದೆ, ಒಂದು ಲಕ್ಷ ರೂ. ಹಣವನ್ನೂ ಪಡೆದುಕೊಂಡಿರುವುದಾಗಿ ಯುವತಿ ಕುಂಬಳೆ ಠಾಣೆ ಪೊಲೀಸರಿಗೆ ದೂರು ನೀಡಿದ್ದಳು.