ಶರವೂರು ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆಯಲ್ಲಿ ವಿದ್ವಾನ್ ಪಂಜ ಭಾಸ್ಕರ ಭಟ್ ಮಾತನಾಡಿದರು. ಗೋಪಾಲಕೃಷ್ಣ ಪಡ್ಡಿಲ್ಲಾಯ, ರಾಮಮೋಹನ್ ರೈ, ಅಜಿತ್ ಪಾಲೇರಿ, ಬೀರಂತಡ್ಕ ಸುಬ್ರಹ್ಮಣ್ಯ ಭಟ್ ಮತ್ತಿತರರು ಉಪಸ್ಥಿತರಿದ್ದರು. 
ಉಡುಪಿ

ಪೂಜಾ ಕೈಕಂರ್ಯಗಳಿಂದ ದೇಶಕ್ಕೆ ಒಳಿತು

ಕಡಬ: ನಮ್ಮ ಧಾರ್ಮಿಕ ಪರಂಪರೆಗೆ ಪರಕೀಯರ ದಾಳಿಯಿಂದ ಹಲವು ಪ್ರಮುಖ ಗ್ರಂಥಗಳು ನಾಶವಾಗಿವೆ. ಆಗಮ ಶಾಸ್ತ್ರದ ಪ್ರಕಾರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಮಾಡಲಾಗುತ್ತಿದೆ. ಶಾಸ್ತ್ರದ ಪ್ರಕಾರ ವ್ಯವಸ್ಥಿತವಾಗಿ ನಿರ್ಮಿಸಿದ ಶ್ರದ್ಧಾಕೇಂದ್ರಗಳಲ್ಲಿ ನಡೆಯುವ ಪೂಜೆ ಕೈಕಂರ್ಯಗಳಿಂದ ಇಡೀ ದೇಶಕ್ಕೆ ಒಳಿತಾಗುತ್ತದೆ ಎಂದು ವಿದ್ವಾನ್ ಪಂಜ ಭಾಸ್ಕರ ಭಟ್ ಹೇಳಿದರು.
ಆಲಂಕಾರು ಗ್ರಾಮದ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವಾಗಿ ಅಂಗವಾಗಿ ಗುರುವಾರ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.
ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಉದ್ಘಾಟಿಸಿ ಮಾತನಾಡಿ, ನಮ್ಮ ಸಂಪ್ರದಾಯದ ವಿರುದ್ಧ ಎಷ್ಟೇ ಷಡ್ಯಂತ್ರ ನಡೆದರೂ ನಮ್ಮಲ್ಲಿನ ಏಕತೆಯಿಂದಾಗಿ ಇಂದಿಗೂ ಧಾರ್ಮಿಕ ನಂಬಿಕೆ ಉಳಿದುಕೊಂಡಿದೆ. ಧಾರ್ಮಿಕ ಕಾರ್ಯದಲ್ಲಿ ನಾವೆಲ್ಲರೂ ಒಟ್ಟಾಗಿ ಧರ್ಮದ ಮೌಲ್ಯವನ್ನು ಉದ್ಧೀಪನಗೊಳಿಸಬೇಕು ಎಂದರು.
ಬ್ರಹ್ಮಕಲಶ ಅಧ್ಯಕ್ಷ ಗೋಪಾಲಕೃಷ್ಣ ಪಡ್ಡಿಲ್ಲಾಯ ಅಧ್ಯಕ್ಷತೆ ವಹಿಸಿದ್ದರು. ಸುರುಳಿ ಶ್ರೀ ಬಾಲಸುಬ್ರಹ್ಮಣ್ಯ ದೇವಳ ಕಾಯಂ ಟ್ರಸ್ಟಿ ರಾಮಮೋಹನ್ ರೈ, ಕುಕ್ಕೆ ಸುಬ್ರಹ್ಮಣ್ಯ ದೇವಳ ವ್ಯವಸ್ಥಾಪನಾ ಸಮಿತಿ ಸದಸ್ಯ ಅಜಿತ್ ಪಾಲೇರಿ, ಪ್ರಗತಿಪರ ಕೃಷಿಕ ಬೀರಂತಡ್ಕ ಸುಬ್ರಹ್ಮಣ್ಯ ಭಟ್, ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಳ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರೋಹಿಣಿ ಬಿ.ಎನ್.ನಾಡ್ತಿಲ, ಪುಷ್ಪಲತಾ ಹಳೆನೇರಿಂಕಿ, ರಾಧಕೃಷ್ಣ ಪರಾರಿಗುತ್ತು, ವಿಠಲ ರೈ ಪೆರಾಬೆ ಪಟ್ಟೆ, ಅಭಿವೃದ್ಧಿ ಸಮಿತಿ ಸದಸ್ಯರಾದ ವಿಜಯ ಕುಮಾರ್ ಕೆದಿಲ, ಗಣೇಶ್ ಹಿರಿಂಜ, ಜನಾದರ್ನ ಕುಂಬಾರ, ವ್ಯವಸ್ಥಾಪನಾ ಮಾಜಿ ಅಧ್ಯಕ್ಷ ದಾಮೋದರ ಕಕ್ವೆ, ನಿವೃತ್ತ ಯೋಧ ಶೀನಪ್ಪ ಕುಂಬಾರ, ಬುಡೇರಿಯಾ ಆಡಳಿತ ಪ್ರಮುಖ ಈಶ್ವರ ಗೌಡ, ಪ್ರಮುಖರಾದ ರೇವತಿ ಕಮಲಾಕ್ಷ ರೈ ಪರಾರಿಗುತ್ತು, ಕಡಬ ತಾಲೂಕು ಒಕ್ಕಲಿಗ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು ಉಪಸ್ಥಿತರಿದ್ದರು.
ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಾ.ಹೇಮಂತ್ ರೈ ಮನವಳಿಕೆಗುತ್ತು ಸ್ವಾಗತಿಸಿದರು. ಮುತ್ತಪ್ಪ ಪೂಜಾರಿ ವಂದಿಸಿದರು. ಗಣರಾಜ ಕುಂಬ್ಳೆ ನಿರೂಪಿಸಿದರು. ವಿವಿಧ ಭಜನಾ ಮಂಡಳಿಯಿಂದ ಭಜನಾ ಸೇವೆ, ಕುಣಿತಾ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಸನಾತನ ಹಿಂದೂ ಸಮಾಜದಲ್ಲಿ ಜೀವನ ಮೌಲ್ಯವಿದೆ. ಹಿಂದೂ ದೇಗುಲ ಉಳಿಯಬೇಕಾದರೆ ಕಾಲಕಾಲಕ್ಕೆ ಅವುಗಳ ಜೀರ್ಣೋದ್ಧಾರವಾಗಬೇಕು. ದೇವಾಲಯಗಳ ಪುನರುತ್ಥಾನದಿಂದ ಊರಿಗೆ ಒಳಿತಾಗುತ್ತದೆ.

ಮನುಷ್ಯ ಧರ್ಮದ ಹಾದಿಯಲ್ಲಿ ಬದುಕಿದಾಗ ಸಮಾಜದಲ್ಲಿ ಗುರುತಿಸಿಕೊಳ್ಳುತ್ತಾನೆ. ಹಿಂದೂ ಸಮಾಜದ ನ್ಯೂನತೆಗಳನ್ನು ಸರಿಪಡಿಸಿಕೊಂಡಾಗ ಹಿಂದೂಗಳು ಸ್ವಾಭಿಮಾನದಿಂದ ಜೀವಿಸಬಹುದು. ನಮ್ಮಲಿರುವ ಎಲ್ಲ ತೊಡಕನ್ನು ಸರಿಪಡಿಸಲು ಹಿರಿಯರು ಶ್ರಮಿಸಬೇಕು.