ಹೊಸ ತಲೆಮಾರು ವಿಚಾರವಾಗಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಪ್ರೊ.ಗಿರೀಶ್ ಭಟ್ ಅಜಕ್ಕಳ ವಿಮರ್ಶೆ ಸಂಶೋಧನೆ ಬಗ್ಗೆ ಉಪನ್ಯಾಸ ನೀಡಿದರು. ಪ್ರೀತಂ ಬಲ್ಯಾಯ ಸಾಲೆತ್ತೂರು, ಕಡಬ ತಾಲೂಕು ಕಸಾಪ ಅಧ್ಯಕ್ಷ ಕೆ.ಸೇಸಪ್ಪ ರೈ, ಕಾವಳಮೂಡೂರು ಸಹಕಾರಿ ಸಂಘ ಅಧ್ಯಕ್ಷ ಪದ್ಮಶೇಖರ್ ಜೈನ್ ಮತ್ತಿತರರಿದ್ದರು. 
ಉಡುಪಿ

ಕನ್ನಡದಲ್ಲಿ ವೈದ್ಯಕೀಯ ಕಲಿಕೆ ಸವಾಲು

ಬಂಟ್ವಾಳ: ವೈದ್ಯ ವಿಜ್ಞಾನಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಸಮಗ್ರ ಪಠ್ಯಪುಸ್ತಕಗಳು ಇಲ್ಲ, ಬೋಧಕರ ಕೊರತೆ, ಕನ್ನಡ ಮಾಧ್ಯಮದ ಬಗ್ಗೆ ಕೀಳರಿಮೆ, ಆಂಗ್ಲ ಭಾಷೆಗೆ ಸರಿಯಾದ ಪರ್ಯಾಯ ಪದಗಳನ್ನು ಹುಡುಕುವುದು ಕಷ್ಟ, ಜಾಗತಿಕ ಮಟ್ಟದಲ್ಲಿ ಆಂಗ್ಲ ಭಾಷೆಯ ಪ್ರಭಾವ ಈ ಎಲ್ಲ ಕಾರಣಗಳಿಂದಾಗಿ ಕನ್ನಡ ಭಾಷೆಯಲ್ಲಿ ವೈದ್ಯ ವಿಜ್ಞಾನ ಹಾಗೂ ವೈದ್ಯಕೀಯ ಕಲಿಕೆ ಸವಾಲಾಗುತ್ತಿದೆ ಎಂದು ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ ಪ್ರೊ.ಆನಂದ ಬಂಗೇರ ಹೇಳಿದರು.
ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಸರ್ವಾಧ್ಯಕ್ಷತೆಯಲ್ಲಿ ಬಿ.ಸಿ.ರೋಡಿನ ಸ್ಪರ್ಶಾಕಲಾ ಮಂದಿರದಲ್ಲಿ ಎರಡನೇ ದಿನವಾದ ಶನಿವಾರ ಕನ್ನಡ ಭಾಷೆಯಲ್ಲಿ ವೈದ್ಯ ವಿಜ್ಞಾನ ಹಾಗೂ ವೈದ್ಯಕೀಯ ಕಲಿಕೆ ವಿಚಾರವಾಗಿ ವಿಶೇಷ ಉಪನ್ಯಾಸ ನೀಡಿದರು.
ಕಾರ್ಮೆಲ್ ಪಪೂ ಕಾಲೇಜಿನ ಉಪಪ್ರಾಂಶುಪಾಲ ಸುರೇಶ್ ನಂದೊಟ್ಟು, ಮೂಲ್ಕಿ ತಾಲೂಕು ಕಸಾಪ ಅಧ್ಯಕ್ಷ ಮಿಥುನ್ ಉಡುಪ ಉಪಸ್ಥಿತರಿದ್ದರು. ವಿಂದ್ಯಾ ಎಸ್.ರೈ ನಿರೂಪಿಸಿದರು.

ವಿಶೇಷ ಉಪನ್ಯಾಸ

ಹೊಸ ತಲೆಮಾರು ವಿಚಾರವಾಗಿ ಪುತ್ತೂರು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಸುಬ್ಬಪ್ಪ ಕೈಕಂಬ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಪ್ರೊ.ಗಿರೀಶ್ ಭಟ್ ಅಜಕ್ಕಳ ವಿಮರ್ಶೆ ಸಂಶೋಧನೆ ಬಗ್ಗೆ ಉಪನ್ಯಾಸ ನೀಡಿದರು. ತಂತ್ರಜ್ಞಾನ-ಸಾಹಿತ್ಯ-ಸಹಬಾಳ್ವೆಯ ವಿಚಾರವಾಗಿ ಮೂಡಬಿದಿರೆ ಜೈನ ಪಪೂ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಭಾತ್ ಬಲ್ನಾಡ್ ವಿಚಾರ ಮಂಡಿಸಿದರು. ಕನ್ನಡ ಮಾಧ್ಯಮ ಶಾಲೆಗಳ ವಾಸ್ತವ ಮತ್ತು ಭವಿಷ್ಯ ವಿಚಾರವಾಗಿ ಸುಳ್ಯ ಸ್ನೇಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಚಂದ್ರಶೇಖರ್ ದಾಮ್ಲೆ ವಿಶೇಷ ಉಪನ್ಯಾಸ ನೀಡಿದರು. ಗಮಕಿ ಮಧೂರು ವಿಷ್ಣು ಪ್ರಸಾದ ಕಲ್ಲೂರಾಯ ಮತ್ತು ಪ್ರೊ.ಮಧೂರು ಮೋಹನ ಕಲ್ಲೂರಾಯ ಅವರಿಂದ ಶ್ರೀ ಕೃಷ್ಣ ಭಕ್ತಿ ಗಮಕ ನಡೆಯಿತು. ಬಳಿಕ ಎಸ್‌ವಿಎಸ್ ಕಾಲೇಜಿನ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಪ್ರೀತಂ ಬಲ್ಯಾಯ ಸಾಲೆತ್ತೂರು, ಕಡಬ ತಾಲೂಕು ಕಸಾಪ ಅಧ್ಯಕ್ಷ ಕೆ.ಸೇಸಪ್ಪ ರೈ, ಕಾವಳಮೂಡೂರು ಸಹಕಾರಿ ಸಂಘ ಅಧ್ಯಕ್ಷ ಪದ್ಮಶೇಖರ್ ಜೈನ್, ಸಮ್ಮೇಳನ ಸ್ವಾಗತ ಸಮಿತಿ ಕಾರ್ಯದರ್ಶಿ ದೇವಪ್ಪ ಕುಲಾಲ್ ಉಪಸ್ಥಿತರಿದ್ದರು. ಸುಭಾಶ್ಚಂದ್ರ ಜೈನ್, ನಾಗೇಶ್ ಬಾಳೆಹಿತ್ಲು, ಎಸ್‌ವಿಎಸ್ ಕಾಲೇಜಿನ ಪ್ರಾಂಶುಪಾಲ ಎಂ.ಡಿ.ಮಂಚಿ ನಿರೂಪಿಸಿದರು.

ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ

ಮಧ್ಯಾಹ್ನ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಬಿ.ಎನ್.ಪುಷ್ಪರಾಜ್, ಪತ್ರಕರ್ತರಾದ ಉದಯ ಶಂಕರ್ ನಿರ್ಪಾಜೆ, ಗಣೇಶ್ ಪ್ರಸಾದ್ ಪಾಂಡೇಲು, ಹರೀಶ್ ಮಾಂಬಾಡಿ, ಡಾ.ಮಾಲತಿ ಶೆಟ್ಟಿ ಮಾಣೂರು ಭಾಗವಹಿಸಿದ್ದರು. ರೇಖಾ ವಿಶ್ವನಾಥ ಬಂಟ್ವಾಳ ನಿರೂಪಿಸಿದರು. ಬಳಿಕ ನೃತ್ಯರಂಜಿನಿ ಕಾರ್ಯಕ್ರಮ ನಡೆಯಿತು.