ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದೇವರಾಜು ಅರಸು 111ನೇ ಜನ್ಮದಿನಾಚರಣೆ ನಡೆಯಿತು. ಪ್ರಮುಖರಾದ ಡಾ.ಜಯಪ್ರಕಾಶ್ ಶೆಟ್ಟಿ ಎಚ್., ಡಾ.ಸೌಮ್ಯಲತಾ ಪಿ., ಡಾ.ಲಿತಿನ್ ಬಿ.ಎಂ., ಡಾ.ರಾಧಾಕೃಷ್ಣ ನಾಯಕ್ ಮತ್ತಿತರರಿದ್ದರು.  
ಉಡುಪಿ

ಕತ್ತಲೆಯಿಂದ ಪಾರು ಮಾಡಿದ ಧೀಮಂತ

ಹೆಬ್ರಿ: ಸಾ

ಜಿಕ ನ್ಯಾಯ ಮತ್ತು ಸಮಾನತೆಯ ಪ್ರಜಾಸತಾತ್ಮಕ ಹೊಣೆಗಾರಿಕೆಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿ, ಕರ್ನಾಟಕವನ್ನು ಕತ್ತಲೆಯಿಂದ ಪಾರು ಮಾಡಿದ ಧೀಮಂತ ಮುಖ್ಯಮಂತ್ರಿ ದಿ.ದೇವರಾಜು ಅರಸು. ಅವರನ್ನು ಎಲ್ಲರೂ ಸದಾ ಸ್ಮರಿಸಬೇಕು ಎಂದು ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥೆ ಮೀನಾಕ್ಷಿ ನಾಯ್ಕ ಹೇಳಿದರು.

ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿಯಡಿ ಕನ್ನಡ, ಸಮಾಜಶಾಸ ವಿಭಾಗ, ರಾಷ್ಟ್ರೀಯ ಸೇವಾ ಯೋಜನೆ ಘಟಕ ಆಯೋಜಿಸಿದ ದೇವರಾಜು ಅರಸು 111ನೇ ಜನ್ಮದಿನಾಚರಣೆಯಲ್ಲಿ ಉಪನ್ಯಾಸ ನೀಡಿದರು.
ಪ್ರಾಂಶುಪಾಲ ಡಾ.ಜಯಪ್ರಕಾಶ್ ಶೆಟ್ಟಿ ಎಚ್. ಮಾತನಾಡಿದರು. ಕನ್ನಡ ವಿಭಾಗ ಮುಖ್ಯಸ್ಥೆ ಡಾ.ಸೌಮ್ಯಲತಾ ಪಿ., ಐಕ್ಯೂಎಸಿ ಸಂಚಾಲಕ ಡಾ.ಲಿತಿನ್ ಬಿ.ಎಂ., ವಾಣಿಜ್ಯಶಾಸ ವಿಭಾಗ ಮುಖ್ಯಸ್ಥ ಡಾ.ರಾಧಾಕೃಷ್ಣ ನಾಯಕ್, ರಾಷ್ಟ್ರೀಯ ಸೇವಾ ಕಾರ್ಯಕ್ರಮಾಧಿಕಾರಿ ನಂದೀಶ್ ಕುವಾರ್ ಕೆ.ಸಿ., ಆಂಗ್ಲ ಭಾಷಾ ವಿಭಾಗದ ನಿಶ್ಚಿತಾ ಎಸ್.ಹೋಬಳಿದಾರ್, ರಾಜ್ಯಶಾಸ್ತ್ರ ವಿಭಾಗದ ಅಪರ್ಣಾ ಕೆ.ಯು. ಉಪಸ್ಥಿತರಿದ್ದರು. ಅಭೀಷಾ ಸ್ವಾಗತಿಸಿದರು. ಅಕ್ಷಯಾ ವಂದಿಸಿದರು. ಪ್ರಿಯಾ ನಿರೂಪಿಸಿದರು.