ಗುರುಪುರ: ಮಾಣಿಬೆಟ್ಟುಗುತ್ತುವಿನಲ್ಲಿ ಇನಾಯತ್ ಆಲಿ ಅಧ್ಯಕ್ಷತೆಯಲ್ಲಿ ನಡೆದ ಮೂಳೂರು-ಅಡ್ಡೂರು ಜೋಡುಕರೆ ಕಂಬಳದಲ್ಲಿ ಕನೆಹಲಗೆ 15, ಅಡ್ಡಹಲಗೆ 7, ಹಗ್ಗ ಹಿರಿಯ 11, ನೇಗಿಲು ಹಿರಿಯ 21, ಹಗ್ಗ ಕಿರಿಯ 30, ನೇಗಿಲು ಕಿರಿಯ 76 ಜೋಡಿಗಳ ಸಹಿತ ಒಟ್ಟು 160 ಜೋಡಿ ಕೋಣಗಳು ಭಾಗವಹಿಸಿದ್ದವು.
ಬೋಳಾರ ತ್ರಿಶಾಲ್ ಕೆ.ಪೂಜಾರಿ(ಹಲಗೆ ಮುಟ್ಟಿದವರು- ತೆಕ್ಕಟ್ಟೆ ಸುಧೀರ್ ದೇವಾಡಿಗ ) ‘ಎ’ ಕೋಣಗಳು ಕನೆಹಲಗೆ ವಿಭಾಗದಲ್ಲಿ 6.5 ಕೋಲು ನಿಶಾನೆಗೆ ನೀರು ಹಾಯಿಸಿವೆ. ಅಡ್ಡಹಲಗೆ ವಿಭಾಗದಲ್ಲಿ ಇರುವೈಲು ದೊಡ್ಡಗುತ್ತು ಅಮರ್ಥ್ಯ ಪದ್ಮನಾಭ ಶೆಟ್ಟಿ(ಹಲಗೆ ಮುಟ್ಟಿದವರು- ತೆಕ್ಕಟ್ಟೆ ಸುಧೀರ್ ದೇವಾಡಿಗ) ಪ್ರಥಮ, ನಾರಾವಿ ರಕ್ಷಿತ್ ಜೈನ್(ಭಟ್ಕಳ ಪಾಂಡು) ಕೋಣಗಳು ದ್ವಿತೀಯ ಸ್ಥಾನ ಪಡೆದಿವೆ.
ನೇಗಿಲು ಹಿರಿಯ ವಿಭಾಗದಲ್ಲಿ 80 ಬಡಗುಬೆಟ್ಟು ಕಲ್ಲಪಾಪು ಶ್ರೀಕ ಸಂದೀಪ್ ಶೆಟ್ಟಿ(ಓಡಿಸಿದವರು- ಕುಂದ ಬಾರಂದಡಿ ಮಾಸ್ತಿಕಟ್ಟೆ ಸ್ವರೂಪ್) ಪ್ರಥಮ, ಸುರತ್ಕಲ್ ಪಾಂಚಜನ್ಯ ಯೋಗೀಶ್ ಕರಿಯ ಪೂಜಾರಿ(ಭಟ್ಕಳ ಶಂಕರ್) ದ್ವಿತೀಯ. ನೇಗಿಲು ಕಿರಿಯ ವಿಭಾಗದಲ್ಲಿ ನಿಂಜೂರು ಪಡುಮನೆ ಅಮಯ್ ಆದ್ಯ ಶೆಟ್ಟಿ(ಬೈಂದೂರು ವಿಶ್ವನಾಥ ದೇವಾಡಿಗ) ಪ್ರಥಮ, ಹೊಸ್ಮಾರು ಸೂರ್ಯಶ್ರೀ ಜ್ಯೋತಿ ಸುರೇಶ್ ಶೆಟ್ಟಿ ‘ಎ’(ಮುಳಿಕ್ಕಾರು ಕುಂಟೋನಿ ವಿವೇಕ್ ದೇವಾಡಿಗ) ದ್ವಿತೀಯ ಸ್ಥಾನ ಗಳಿಸಿವೆ.
ಹಗ್ಗ ಹಿರಿಯ ವಿಭಾಗದಲ್ಲಿ ಕೊಳಕೆ ಇರ್ವತ್ತೂರು ಭಾಸ್ಕರ ಎಸ್.ಕೋಟ್ಯಾನ್(ಓಡಿಸಿದವರು- ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ) ಪ್ರಥಮ, ನಂದಳಿಕೆ ಶ್ರೀಕಾಂತ ಭಟ್ ‘ಬಿ’(ಬಂಬ್ರಾಣಬೈಲು ವಂದಿತ್ ಶೆಟ್ಟಿ) ದ್ವಿತೀಯ. ಹಗ್ಗ ಕಿರಿಯ ವಿಭಾಗದಲ್ಲಿ ಶ್ರೀ ಸ್ವಾಮಿಧಾಮ ಹೊಳೆಕಟ್ಟು ಕುಂಭಾಶಿ(ಉಜಿರೆ ಸ್ಪಂದನ್ ಶೆಟ್ಟಿ) ಪ್ರಥಮ, ಪಡೀಲ್ ಕಬತ್ತೂರುಗುತ್ತು ದಿನಕರ ಜಯರಾಮ ಶೆಟ್ಟಿ(ಮಂದಾರ್ತಿ ಶಿರೂರು ಮುದ್ದುಮನೆ ಭರತ್ ನಾಯ್ಕ ಕೋಣ) ದ್ವಿತೀಯ ಸ್ಥಾನ ಪಡೆದಿವೆ.