ಕುಪ್ಪೆಪದವು ಗ್ರಾಪಂ ಸಭಾಭವನದಲ್ಲಿ ಯುವವಾಹಿನಿ ಕುಪ್ಪೆಪದವು-ಎಡಪದವು ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು. ಸಮಾಜದ ಮುಖಂಡ ಉಮೇಶ್ ಪೂಜಾರಿ ಸೂರಲ್ಪಾಡಿ, ಕೇಂದ್ರ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು, ಯುವವಾಹಿನಿ ನಿರ್ಗಮನ ಅಧ್ಯಕ್ಷ ಶ್ರೀಧರ ಪೂಜಾರಿ ಮೊದಲಾದವರಿದ್ದರು. 
ಉಡುಪಿ

ಬಿಲ್ಲವರು ಸ್ವಾವಲಂಬಿಗಳಾಗಿ ಬದುಕುತ್ತಿದ್ದಾರೆ

ವಿಜಯವಾಣಿ ಸುದ್ದಿಜಾಲ ಗುರುಪುರ

ಹಿಂದಿನ ಕಾಲದಲ್ಲಿ ಬಿಲ್ಲವರಿಗೆ ದೇವಸ್ಥಾನಕ್ಕೆ ಪ್ರವೇಶ ಇರಲಿಲ್ಲ. ನಾರಾಯಣಗುರುಗಳು ನಡೆಸಿದ ಕ್ರಾಂತಿಯ ಲವಾಗಿ ಇಂದು ದೇವಸ್ಥಾನ ಪ್ರವೇಶ ಸಾಧ್ಯವಾಯಿತು. ಬಿಲ್ಲವರು ಸ್ವಾವಲಂಬಿಗಳಾಗಿ ಬದುಕುತ್ತಿದ್ದಾರೆ ಎಂದು ಸಮಾಜದ ಮುಖಂಡ ಉಮೇಶ್ ಪೂಜಾರಿ ಸೂರಲ್ಪಾಡಿ ಹೇಳಿದರು.
ಕುಪ್ಪೆಪದವು ಗ್ರಾಪಂ ಸಭಾಭವನದಲ್ಲಿ ಯುವವಾಹಿನಿ ಕುಪ್ಪೆಪದವು-ಎಡಪದವು ಘಟಕ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಯುವವಾಹಿನಿ ನಿರ್ಗಮನ ಅಧ್ಯಕ್ಷ ಶ್ರೀಧರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷ ಅಕ್ಷಿತ್ ಕುಮಾರ್ ಪದಾಧಿಕಾರಿಗಳ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ನೂತನ ಅಧ್ಯಕ್ಷ ಗಂಗಾಧರ ಪೂಜಾರಿ ಎಡಪದವು, ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ನಿರಂಜನ್ ಬಜ್ಪೆ ಮಾತನಾಡಿದರು. ಘಟಕಕ್ಕೆ 108 ಹೊಸ ಸದಸ್ಯರು ಸೇರ್ಪಡೆಗೊಂಡರು.
42 ವಷಊ ಮೂರ್ತೆಗಾರಿಕೆ ಮಾಡಿಕೊಂಡು ಬಂದಿರುವ ಸುಂದರ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.
ಸ್ಥಾಪಕಾಧ್ಯಕ್ಷ ಅರುಣ್ ಕುಮಾರ್ ಅಂಬೆಲೊಟ್ಟು, ಕೇಂದ್ರ ಸಮಿತಿ ಜತೆ ಕಾರ್ಯದರ್ಶಿ ಹರೀಶ್ ಕೋಟ್ಯಾನ್, ಮಾಜಿ ಅಧ್ಯಕ್ಷರಾದ ಸತೀಶ್ ಪೂಜಾರಿ, ಜಗದೀಶ ದುರ್ಗಾಕೋಡಿ, ಸೌಮ್ಯಾ ಕೋಟ್ಯಾನ್, ಘಟಕ ಪದಾಧಿಕಾರಿಗಳು, ಸದಸ್ಯರು, ಹಿತೈಷಿಗಳು ಇದ್ದರು. ಮಾಜಿ ಅಧ್ಯಕ್ಷ ಅರ್ಜುನ್ ಅಮೀನ್ ಪ್ರಾಸ್ತಾವಿಕ ಮಾತನಾಡಿದರು. ಅಕ್ಷತಾ ವರದಿ ಮಂಡಿಸಿದರು. ಘಟಕದ ಸದಸ್ಯರಾದ ಧನ್ಯಶ್ರೀ, ಬಿಂದಿಯಾ ನಿರೂಪಿಸಿದರು. ಶ್ರೀಧರ ಪೂಜಾರಿ ಸ್ವಾಗತಿಸಿದರು. ನೂತನ ಕಾರ್ಯದರ್ಶಿ ಸಂತೋಷ್ ಬೊಳಿಯ ವಂದಿಸಿದರು.