ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಹೆಬ್ರಿ ತಾಲೂಕು ಶಾಖೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಮುಖರಾದ ಡಾ.ಅಶೋಕ್ ಕುಮಾರ್ ವೈ.ಜಿ., ಡಾ.ಗಣನಾಥ ಎಕ್ಕಾರ್, ವೀಣಾ ಆರ್.ಭಟ್, ಯೋಗೀಶ್ ಭಟ್ ಹೆಬ್ರಿ, ವಿದ್ವಾನ್ ರಾಘವೇಂದ್ರ ಭಟ್, ಚಂದ್ರ ಎ.ಕೆ., ಡಾ.ವಿದ್ಯಾಧರ ಹೆಗ್ಡೆ ಉಪಸ್ಥಿತರಿದ್ದರು. 
ಉಡುಪಿ

ಸಂಸ್ಥೆ ಮೂಲ ತತ್ವ ಪಾಲಿಸಿ ಸಮಾಜಕ್ಕೆ ಸೇವೆ

ಹೆಬ್ರಿ: ಕಾರ್ಯವೈಖರಿಯಿಂದ ಹೆಬ್ರಿಯಲ್ಲಿ ತಾಲೂಕು ಶಾಖೆ ಬಲಿಷ್ಠಗೊಂಡು ಸಂಸ್ಥೆಯ ಮೂಲ ತತ್ವಗಳನ್ನು ಪರಿಪಾಲಿಸಿ ಸಮಾಜಕ್ಕೆ ಸೇವೆ ಒದಗಿಸುವಲ್ಲಿ ಸಮರ್ಥವಾಗಲಿ ಎಂದು ಜಿಲ್ಲಾ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಭಾಪತಿ ಡಾ.ಅಶೋಕ್ ಕುಮಾರ್ ವೈ.ಜಿ. ಹೇಳಿದರು.

ಹೆಬ್ರಿಯಲ್ಲಿ ಬುಧವಾರ ಆಯೋಜಿಸಲಾದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಹೆಬ್ರಿ ತಾಲೂಕು ಶಾಖೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪದಾಧಿಕಾರಿಗಳಿಗೆ, ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿ ಪದಪ್ರದಾನ ಮಾಡಲಾಯಿತು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಕಾರ್ಯದರ್ಶಿ ಡಾ.ಗಣನಾಥ ಎಕ್ಕಾರ್ ಮಾತನಾಡಿದರು. ಸಂಸ್ಥೆಯ ನೂತನ ಸಭಾಪತಿ ವೀಣಾ ಆರ್.ಭಟ್ ಅಧ್ಯಕ್ಷತೆ ವಹಿಸಿದ್ದರು.
ಉದ್ಯಮಿ ಯೋಗೀಶ್ ಭಟ್ ಹೆಬ್ರಿ, ಕಾಡುಹೊಳೆ ಶ್ರೀ ಜಂಗಮೇಶ್ವರ ಮಠದ ಪ್ರಧಾನ ಅರ್ಚಕ ವಿದ್ವಾನ್ ರಾಘವೇಂದ್ರ ಭಟ್, ಹೆಬ್ರಿ ಪಿಎಸ್‌ಐ ಚಂದ್ರ ಎ.ಕೆ., ಹೆಬ್ರಿ ರೆಡ್‌ಕ್ರಾಸ್ ಶಾಖೆ ಉಪಸಭಾಪತಿ ಡಾ.ವಿದ್ಯಾಧರ ಹೆಗ್ಡೆ ಉಪಸ್ಥಿತರಿದ್ದರು. ಪ್ರಶಾಂತ ಪೈ ಸ್ವಾಗತಿಸಿದರು. ಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ್ ಶೆಟ್ಟಿ ವಂದಿಸಿದರು.

ಕೊಡುಗೆ ಹಸ್ತಾಂತರ

ಹೆಬ್ರಿ ತಾಲೂಕು ಆಯ್ದ ಬಡ ಕುಟುಂಬಗಳಿಗೆ ಸಂಸ್ಥೆಯಿಂದ 10 ಟಾರ್ಪಾಲ್, 5 ಸೆಟ್ ಅಡುಗೆ ಪಾತ್ರೆಗಳನ್ನು ವಿತರಿಸಲಾಯಿತು. ಮುದ್ರಾಡಿ ಗ್ರಾಮ ಉಪ್ಪಳದ ಅಶಕ್ತ ಶಾರದಾ ಶೆಟ್ಟಿಗಾರ್ ಅವರಿಗೆ ದಾನಿ ಕಾಡುಹೊಳೆ ರಾಘವೇಂದ್ರ ಭಟ್ ಕೊಡುಗೆಯಾಗಿ ನೀಡಿದ ವೀಲ್‌ಚೇರ್ ನೀಡಲಾಯಿತು. ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ 2 ಸೆಟ್ ಆಕ್ಸಿಜನ್ ಮೀಟರ್ ನೀಡಲಾಯಿತು.