ಉಡುಪಿ ಕಲ್ಮಾಡಿಯಲ್ಲಿರುವ ಸ್ಟೆಲ್ಲಾ ಮಾರಿಸ್ ದೇವಾಲಯ ಹಾಗೂ ವೆಲಂಕಣಿ ಆರೋಗ್ಯ ಮಾತೆ.
ರೆಕ್ಟರ್ ಬ್ಯಾಪ್ಟಿಸ್ ಮಿನೇಜಸ್ ಮಾಹಿತಿ
* ಆ.6ರಿಂದ 14ರ ವರೆಗೆ ನೊವೇನಾ ಪ್ರಾರ್ಥನೆ
ಉಡುಪಿ: ಕಲ್ಮಾಡಿಯಲ್ಲಿರುವ ಸ್ಟೆಲ್ಲಾ ಮಾರಿಸ್ ದೇವಾಲಯದ ವೆಲಂಕಣಿ ಆರೋಗ್ಯ ಮಾತೆಯ ಪುಣ್ಯಕ್ಷೇತ್ರದ ಪ್ರತಿಷ್ಠಾಪನಾ ವಾರ್ಷಿಕ ಮಹೋತ್ಸವವು ಆಗಸ್ಟ್ 15ರಂದು ನಡೆಯಲಿದೆ. ಮಹೋತ್ಸವದ ಪೂರ್ವಭಾವಿಯಾಗಿ ಆ.6ರಿಂದ 14ರ ವರೆಗೆ ನೊವೇನಾ ಪ್ರಾರ್ಥನೆ ಹಮ್ಮಿಕೊಳ್ಳಲಾಗಿದೆ.
ಈ ಬಾರಿಯ ಹಬ್ಬದ ಸಂದೇಶ 'ಆತ ಹೇಳಿದಂತೆ ಮಾಡಿ' ಎನ್ನುವುದಾಗಿದ್ದು, ಆ.6ರಂದು ಮಧ್ಯಾಹ್ನ 3:45ಕ್ಕೆ ಉಡುಪಿ ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ಅವರು ಪುಣ್ಯಕ್ಷೇತ್ರದ ಬಾವುಟ ಹಾರಿಸುವ ಮೂಲಕ ನೊವೇನಾ ಪ್ರಾರ್ಥನೆಗೆ ಚಾಲನೆ ನೀಡಲಿದ್ದಾರೆ.
9 ದಿನಗಳ ನೊವೇನಾ ಕಾರ್ಯಕ್ರಮದಲ್ಲಿ ಯುವಜನತೆ, ಧಾರ್ಮಿಕ ವ್ಯಕ್ತಿಗಳು, ಅಶಕ್ತರು, ಕೆಸ್ತ ಕುಟುಂಬ, ವಿದೇಶದಲ್ಲಿ ನೆಲೆಸಿರುವ ಕೆಸ್ತ ವಿಶ್ವಾಸಿಗಳು, ದಾನಿಗಳು, ನೂತನ ದಂಪತಿ, ಮಕ್ಕಳು ಹಾಗೂ ಭಕ್ತರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತದೆ.
ಆ.13ರಂದು ಮಧ್ಯಾಹ್ನ 2:54ಕ್ಕೆ ಆದಿಉಡುಪಿ ಜಂಕ್ಷನ್ನಿಂದ ಚರ್ಚ್ನ ವರೆಗೆ ವೆಲಂಕಣಿ ಮಾತೆಯ ಸ್ವರೂಪದ ಮೆರವಣಿಗೆ ನಡೆಯಲಿದ್ದು, ಶಿವಮೊಗ್ಗ ಧರ್ಮಪ್ರಾಂತ್ಯದ ವಂ.ಫ್ರಾಂಕ್ಲಿನ್ ಡಿಸೋಜಾ ಚಾಲನೆ ನೀಡಲಿದ್ದಾರೆ.
ಆ.15ರ ಬೆಳಗ್ಗೆ 10:30ಕ್ಕೆ ಉಡುಪಿ ಧರ್ಮಪ್ರಾಂತದ ಅಧ್ಯಕ್ಷ ಲೆಸ್ಲಿ ಕ್ಲಿಫರ್ಡ್ ಡಿಸೋಜಾ ದಿವ್ಯ ಬಲಿಪೂಜೆ ನೆರೆವೇರಿಸುವರು. ಉಡುಪಿ ಧರ್ಮಪ್ರಾಂತದ ಅನೇಕ ಗುರುಗಳು ಹಾಗೂ ಸಾವಿರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ. ಅಂದು ಬೆಳಗ್ಗೆ 7:30 ಹಾಗೂ ಸಂಜೆ 4 ಗಂಟೆಗೆ ಕೊಂಕಣಿ ಭಾಷೆಯಲ್ಲಿ, ಮಧ್ಯಾಹ್ನ 2 ಗಂಟೆಗೆ ಕನ್ನಡ ಹಾಗೂ ಸಂಜೆ 6ಕ್ಕೆ ಇಂಗ್ಲಿಷ್ ಭಾಷೆಯಲ್ಲಿ ಇನ್ನಿತರ ಬಲಿಪೂಜೆ ಆಯೋಜಿಸಲಾಗಿದೆ ಎಂದು ಪುಣ್ಯಕ್ಷೇತ್ರದ ರೆಕ್ಟರ್ ವಂ.ಬ್ಯಾಪ್ಟಿಸ್ ಮಿನೇಜಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.