ಉಡುಪಿಯ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜ್ನಲ್ಲಿ ಹಳೆಯ ವಿದ್ಯಾರ್ಥಿ ಸಂಘದ ವಾಲಿಬಾಲ್ ಪಂದ್ಯಾಟಕ್ಕೆ ಡಾ. ಜೆರಾಲ್ಡ್ ಲೋಬೊ, ಮಂಜುಷಾ ಕನ್ವರ್ ಚಾಲನೆ ನೀಡಿದರು. ಫರ್ಡಿನಾಂಡ್ ಗೊನ್ಸಾಲ್ವಿಸ್, ಡಾ. ವಿನ್ಸೆಂಟ್ ಆಳ್ವಾ, ಸೊಫೀಯಾ ಡಾಯಸ್, ಶಾಲೆಟ್ ಮಥಾಯಸ್, ಶಶಿಧರ್ ಸಾಲಿಯಾನ್ ಇತರರಿದ್ದರು.
* ಬಿಷಪ್ ಡಾ. ಜೆರಾಲ್ಡ್ ಲೋಬೊ ಅಭಿಪ್ರಾಯ
* ಮಿಲಾಗ್ರಿಸ್ ವಾಲಿಬಾಲ್ ಪಂದ್ಯಾಟಕ್ಕೆ ಚಾಲನೆ
ಉಡುಪಿ: ಯಾವುದೇ ಕ್ರೀಡೆಯಾದರೂ ಅಲ್ಲಿ ಗೆಲುವೇ ಮುಖ್ಯವಾಗಿರುತ್ತದೆ. ಆದರೂ ಕ್ರೀಡಾಸ್ಫೂರ್ತಿ ಅದಕ್ಕಿಂತ ಮುಖ್ಯ. ಸೋಲಿನ ನಂತರ ಪುನ: ಎದ್ದು ನಿಲ್ಲುವ ಮನೋಬಲವೇ ನಿಜವಾದ ಚಾಂಪಿಯನ್ಗಳ ಗುಣ. ಕ್ರೀಡೆ ಕೇವಲ ಸ್ಪರ್ಧೆಯಲ್ಲ. ಅದು ವ್ಯಕ್ತಿತ್ವ, ಶಿಸ್ತು ಮತ್ತು ಏಕತೆಯ ಪ್ರತಿಬಿಂಬವಾಗಿದೆ. ಸವಾಲು ಎದುರಿಸುವ ಧೈರ್ಯ ಹಾಗೂ ಜಯದಲ್ಲಿ ವಿನಯ ಕಲಿಸುತ್ತದೆ ಎಂದು ಉಡುಪಿ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಅಭಿಪ್ರಾಯಪಟ್ಟರು.
ಉಡುಪಿಯ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜ್ನಲ್ಲಿ ಹಳೆಯ ವಿದ್ಯಾರ್ಥಿ ಸಂಘದ ವತಿಯಿಂದ ಶನಿವಾರ (ಮಾ.21) ಆಯೋಜಿಸಿದ್ದ ಮಿಲಾಗ್ರಿಸ್ ಪ್ರೀಮಿಯರ್ ಲೀಗ್ ವಾಲಿಬಾಲ್ ಪಂದ್ಯಾಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಂತಾರಾಷ್ಟ್ರೀಯ ಮಾಜಿ ಬ್ಯಾಡ್ಮಿಂಟನ್ ಪಟು ಮಂಜುಷಾ ಕನ್ವರ್ ಮಾತನಾಡಿ, ಕ್ರೀಡಾಪಟುಗಳಿಗೆ ಶುಭಹಾರೈಸಿದರು. ಕಾಲೇಜಿನ ಸಂಚಾಲಕ ವಂ.ಫರ್ಡಿನಾಂಡ್ ಗೊನ್ಸಾಲ್ವಿಸ್, ಉಪಪ್ರಾಂಶುಪಾಲರಾದ ಸೊಫೀಯಾ ಡಾಯಸ್, ಶಾಲೆಟ್ ಮಥಾಯಸ್, ಹಳೆಯ ವಿದ್ಯಾರ್ಥಿಗಳ ಸಂಘದ ಆಲನ್ ಲೂವಿಸ್, ಥೋಮಸ್ ಡಿಸೋಜಾ, ರಾಜ್ ಬೆಂಗ್ರೆ, ಮೆಲ್ವಿನ್ ಸಿಕ್ವೇರಾ, ವಿಲ್ಸನ್ ಫೆರ್ನಾಂಡಿಸ್, ನಿಖಿಲ್ ಇತರರು ಉಪಸ್ಥಿತರಿದ್ದರು.
ಪ್ರಾಂಶುಪಾಲ ಡಾ. ವಿನ್ಸೆಂಟ್ ಆಳ್ವಾ ಸ್ವಾಗತಿಸಿದರು. ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಶಶಿಧರ್ ಸಾಲಿಯಾನ್ ವಂದಿಸಿದರು.
ಎಂಟು ತಂಡ ಭಾಗಿ
ಕರಾವಳಿ ಮಿಲನ್, ಅರ್ಥ್ ಎಂಜೆಲ್ಸ್ ಕೆಮ್ಮಣ್ಣು, ಬೆಂಗ್ರೆ ಬುಲ್ಸ್, ಎಂಸಿಕೆ ಅಲುಮ್ಐ ಫೈರ್ಟಸ್, ಮುಂಬೈ ಲೆಜೆಂಡ್ಸ್, ಫೆರ್ನಾಂಡಿಸ್ ಫೈರ್ಟಸ್, ಕ್ಯಾಥಿ ನಿಂಜಾಸ್, ಮಿಲಾಗ್ರಿಸ್ ಸ್ಕೋರ್ಪಿಯನ್ಸ್ ಸೇರಿ ಒಟ್ಟು ಎಂಟು ತಂಡಗಳು ಭಾಗವಹಿಸಿದ್ದವು.
ಇಂತಹ ಪಂದ್ಯಾಟವು ಹಳೆಯ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಮತ್ತು ಅಭಿಮಾನಿಗಳನ್ನು ಒಟ್ಟುಗೂಡಿಸುವ ಉತ್ತಮ ವೇದಿಕೆಯಾಗಿದೆ. ಇದು ಸಂಸ್ಥೆಯ ಒಗ್ಗಟ್ಟು ಬಲಪಡಿಸುವುದರ ಜತೆಗೆ ಪರಸ್ಪರ ಸಹಕಾರ ಮತ್ತು ಗೌರವದ ಮೌಲ್ಯ ಉತ್ತೇಜಿಸುತ್ತದೆ. ತರಗತಿಗಳಲ್ಲಿ ಮಾತ್ರ ಶಿಕ್ಷಣ ಸೀಮಿತವಾಗದೆ ಸಂಬಂಧಗಳ ಮೂಲಕ ಮುಂದುವರಿಯುತ್ತದೆ ಎನ್ನುವುದನ್ನು ಹಳೆಯ ವಿದ್ಯಾರ್ಥಿಗಳ ಸಂಘ ತೋರಿಸಿದೆ.