ವಾರದಲ್ಲಿ 5 ದಿನ ಮಾತ್ರ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೊಳಿಸುವಂತೆ ಆಗ್ರಹಿಸಿ ಉಡುಪಿಯಲ್ಲಿ ಅಖಿಲ ಭಾರತೀಯ ಬ್ಯಾಂಕ್ ನೌಕರರ ಸಂಘಗಳ ಒಕ್ಕೂಟ ಪ್ರತಿಭಟಿಸಿತು. ಹರೀಶ್ ಶೆಟ್ಟಿ, ಸಚಿನ್ ಶೆಟ್ಟಿ, ಮುರಳೀಧರ್, ಸುಪ್ರಿಯಾ, ನಾಗೇಶ್ ನಾಯಕ್ ಇತರರಿದ್ದರು.
* ಎಐಬಿಇಎ ಜಿಲ್ಲಾ ಸಂಚಾಲಕ ಹರೀಶ್ ಶೆಟ್ಟಿ ಆಗ್ರಹ
* ಅಖಿಲ ಭಾರತೀಯ ಬ್ಯಾಂಕ್ ನೌಕರರ ಸಂಘಗಳ ಒಕ್ಕೂಟ ಪ್ರತಿಭಟನೆ
ಉಡುಪಿ: ಬ್ಯಾಂಕ್ಗಳ ಎಲ್ಲ ನೌಕರರ ನಡುವೆ ಒಂದೇ ರೀತಿಯ ಹುದ್ದೆ, ಶ್ರೇಣಿಗೆ ಸಮನಾಗಿ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹ ನೀಡಬೇಕು. ಇತ್ತೀಚೆಗಿನ ಕೆಲ ವರ್ಷಗಳಲ್ಲಿ ಕೆಲಸದ ಒತ್ತಡ ಹೆಚ್ಚುತ್ತಲಿದ್ದು ಅನಾರೋಗ್ಯಕ್ಕೆ ಒಳಗಾಗುವಂತಾಗಿದೆ. ಹೀಗಾಗಿ ವಾರದಲ್ಲಿ 5 ದಿನ ಮಾತ್ರ ಬ್ಯಾಂಕಿಂಗ್ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಕೂಡಲೇ ಜಾರಿ ಮಾಡಬೇಕು ಎಂದು ಅಖಿಲ ಭಾರತೀಯ ಬ್ಯಾಂಕ್ ನೌಕರರ ಸಂಘಗಳ ಒಕ್ಕೂಟ (ಎಐಬಿಇಎ)ದ ಜಿಲ್ಲಾ ಸಂಚಾಲಕ ಹರೀಶ್ ಶೆಟ್ಟಿ ಆಗ್ರಹಿಸಿದರು.
ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ ದೇಶವ್ಯಾಪಿ ಕರೆ ಕೊಟ್ಟಿರುವ ಅಖಿಲ ಭಾರತ ಬ್ಯಾಂಕ್ ಮುಷ್ಕರದ ಹಿನ್ನೆಲೆಯಲ್ಲಿ ಉಡುಪಿ ಕೋರ್ಟ್ ಸಮೀಪದಲ್ಲಿರುವ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಮುಂಭಾಗದಲ್ಲಿ ಎಐಬಿಇಎ ವತಿಯಿಂದ ಶುಕ್ರವಾರ (ಸೆ.11) ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ಪಿಎಲ್ಎಸ್ ವಂಚನೆ
ಎಐಬಿಒಸಿ ಪ್ರಮುಖ ಸಚಿನ್ ಶೆಟ್ಟಿ ಮಾತನಾಡಿ, ಸ್ಕೇಲ್-3 ನಂತರದ ಸೌಕರರಿಗೆ ಯಾವುದೇ ಸೌಲಭ್ಯವಿಲ್ಲ. ಇನ್ಸೆನ್ಟೀವ್ ಸಹ ಕೊಡುತ್ತಿಲ್ಲ. ಕೆಲಸ ಮಾಡುವವರು ನಾವು, ಅದರ ಪ್ರಯೋಜನ (ಪಿಎಲ್ಎಸ್) ಪಡೆಯುವವರು ಮೇಲಿನ ಅಧಿಕಾರಿಗಳು. ಕೆಲಸದಲ್ಲಿನ ಹಾಗೂ ವೇತನದಲ್ಲಿನ ತಾರತಮ್ಯವನ್ನೂ ಸಹ ನೀಗಿಸಬೇಕು ಎಂದರು.
ಎನ್ಸಿಬಿಇಯ ಮುರಳೀಧರ್, ಸುಪ್ರಿಯಾ, ಎಐಒಬಿಎಯ ರವಿಶಂಕರ್, ಐಎನ್ಬಿಒಸಿಯ ಪ್ರಮೋದ್ ಲಾಂಜೆ, ವಿವಿಧ ಸಂಘಟನೆಗಳ ಪ್ರಮುಖರಾದ ಸುದೀಪ್, ಮನೋಜಕುಮಾರ್, ರಮೇಶ್, ನಿರಂಜನ್, ಮರಿಯೋ ಮಥಾಯಿಸ್, ಪ್ರಣವ್ ಪೈ,ಸಂತೋಷ್, ಮಂಜುನಾಥ್, ಸಚಿನ್ ಚಾಪರ್, ಸೂರಜ್ ಇತರರಿದ್ದರು.
ಜೆಸಿಟಿಯು ಕನ್ವೀನರ್ ನಾಗೇಶ್ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.
ಮಣಿಪಾಲದಲ್ಲೂ ಮುಷ್ಕರ
ಮಣಿಪಾಲದ ಕೆನರಾ ಬ್ಯಾಂಕ್ ವೃತ್ತ ಶಾಖೆಯ ಮುಂಭಾಗದಲ್ಲಿಯೂ ಸಹ ಬ್ಯಾಂಕ್ ನೌಕರರ ಸಂಗಳ ಒಕ್ಕೂಟದಿಂದ ಪ್ರತಿಭಟಿಸಲಾಯಿತು. ಅಧಿಕಾರಿಗಳ ಸಂಘದ ಅಧ್ಯಕ್ಷ ಸಚಿನ್ ಶೆಟ್ಟಿ, ಪದಾಧಿಕಾರಿಗಳಾದ ಸೂರಜ್ ಉಪ್ಪೂರು, ದುರ್ಗಾಪ್ರಸಾದ್, ರೋಹಿತ್, ವಿಶಾಲ್ ಸಿಂಗ್, ಪ್ರಮೋದ್ ಲಾಂಜೆ, ನಿರಂಜನ್ ಆಚಾರ್ಯ ಮತ್ತಿತರರಿದ್ದರು.