ಕುಂಜಾಲು ಕ್ರಾಸ್ ಬಳಿ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ಗಣೇಶ ಕಡೆಶಿವಾಲಯ ಮಾತನಾಡಿದರು. ಪ್ರಮುಖರಾದ ಬೆಳ್ಮಾರು ರಾಘವೇಂದ್ರ ಭಟ್, ಗೋಕುಲ್ ದಾಸ್ ಕಚ್ಚೂರು, ಚಿತ್ತರಂಜನ್ ಹೆಗ್ಡೆ, ರಾಘವೇಂದ್ರ ಪೂಜಾರಿ, ಮಧುಸೂದನ್ ಕಚ್ಚೂರು ಉಪಸ್ಥಿತರಿದ್ದರು. 
ಉಡುಪಿ

ದೇಶದ ನೈಜ ಇತಿಹಾಸ ತಿರುಚುವ ಕಾರ್ಯ

ಬ್ರಹ್ಮಾವರ: ಅಖಂಡ ಭಾರತಕ್ಕೆಸ್ವಾತಂತ್ರ್ಯ ದೊರಕುವ ಒಂದು ತಿಂಗಳ ಮೊದಲೇ ತ್ರಿಖಂಡವಾಗಿಸಿ ಲಕ್ಷಾಂತರ ಹಿಂದೂಗಳ ನರಮೇದ ಮಾಡಿ ನಿರಾಶ್ರಿತರನ್ನಾಗಿ ಮಾಡಿ ದೇಶದ ನೈಜ ಇತಿಹಾಸವನ್ನೇ ತಿರುಚಲಾಗಿದೆ. ನಮ್ಮ ಮಕ್ಕಳಿಗೆ ದೇಶದ ನೈಜ ಘಟನೆ ತಿಳಿಸದೆ ಸತ್ಯ ಮರೆಮಾಚಿ ರಚಿಸಿದ ಪಠ್ಯಗಳಿಂದ ನೀಡಿದ ಶಿಕ್ಷಣದಿಂದಾಗಿ ಇಂದು ದೇಶದ ಒಳಗಡೆ ಇರುವವರಿಂದಲೇ ದೇಶದ್ರೋಹದ ಕಾರ್ಯ ನಡೆಯುತ್ತಿದೆ.

ಹಿಂದೂಗಳು ದೇಶದ ರಕ್ಷಣೆ ಮತ್ತು ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಬಾರದಂತೆ ಎಲ್ಲರೂ ಒಂದಾಗಬೇಕಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಗಣೇಶ ಕಡೆಶಿವಾಲಯ ಹೇಳಿದರು.

ಹಿಂದೂ ಜಾಗರಣ ವೇದಿಕೆ ಬ್ರಹ್ಮಾವರ ತಾಲೂಕು ವತಿಯಿಂದ ಅಖಂಡ ಭಾರತ ಸಂಕಲ್ಪದಿನದ ಅಂಗವಾಗಿ ಬುಧವಾರ ಪಂಜಿನ ಮೆರವಣಿಗೆ ಬಳಿಕ ಕುಂಜಾಲು ಕ್ರಾಸ್ ಬಳಿ ಜರುಗಿದ ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಬ್ರಹ್ಮಾವರ ಬಂಟರಭವನದ ಬಳಿಯಿಂದ ಹೊರಟ ಪಂಜಿನ ಮೆರವಣಿಗೆಗೆ ರಾಯಲ್ ರತ್ನಾಕರ ಶೆಟ್ಟಿ ಚಾಲನೆ ನೀಡಿದರು. ಜೋತಿಷ್ಯ ವಿದ್ವಾನ್ ಬೆಳ್ಮಾರು ರಾಘವೇಂದ್ರ ಭಟ್ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಬಾರಕೂರು ಕಚ್ಚೂರು ಮಾಲ್ತೀ ದೇವಿ ದೇವಸ್ಥಾನ ಮೊಕ್ತೇಸರ ಗೋಕುಲ್ ದಾಸ್ ಕಚ್ಚೂರು ಅಧ್ಯಕ್ಷತೆ ವಹಿಸಿದ್ದರು.
ವಿಶ್ವ ಹಿಂದೂ ಪರಿಷತ್ ಹಿರಿಯ ಕಾರ್ಯಕರ್ತ ಚಿತ್ತರಂಜನ್ ಹೆಗ್ಡೆ, ಬ್ರಹ್ಮಾವರ ಬಿಲ್ಲವ ಸಂಘದ ಮುಖಂಡ ರಾಘವೇಂದ್ರ ಪೂಜಾರಿ, ಬೆಣ್ಣೆಕುದ್ರು ಶ್ರೀ ಕುಲಮಹಾ ಸ್ತ್ರೀ ದೇವಸ್ಥಾನದ ಸಮಿತಿ ಸದಸ್ಯ ಮಧುಸೂದನ್ ಕಚ್ಚೂರು ಉಪಸ್ಥಿತರಿದ್ದರು. ಅಮಿತಾ ಪ್ರಭು ಪ್ರಾರ್ಥಿಸಿದರು. ಪ್ರಣೂತ್ ಗಾಣಿಗ ಕಾರ್ಯಕ್ರಮ ನಿರೂಪಿಸಿದರು.