ಉಡುಪಿಯಲ್ಲಿ ಬಿಲ್ಲವರ ಸೇವಾ ಸಂಘದ ವತಿಯಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು. ಡಾ. ನಿಶಾ ಎಸ್​. ಅಮೀನ್​, ಶಶಿಧರ್​ ಎಂ. ಅಮೀನ್​, ಸದಾನಂದ್​ ಪೂಜಾರಿ, ಕೋಶಾಧಿಕಾರಿ ಸದಾನಂದ್​ ಅಮೀನ್​, ಮಾಧವ ಪೂಜಾರಿ ಬನ್ನಂಜೆ, ಸುಕನ್ಯಾ ಕಡೆಕಾರ್​ ಇತರರಿದ್ದರು. 
ಉಡುಪಿ

ಶೈಕ್ಷಣಿಕ ಗುರಿ ಸಾಧನೆಗೆ ನೀಡಿ ಮಹತ್ವ

* ಡಾ. ನಿಶಾ ಎಸ್​. ಅಮೀನ್​ ಕಿವಿಮಾತು

* ಪಿಯುಸಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಣೆ

ಉಡುಪಿ: ಕಾಲೇಜ್​ ಹಂತದ ಜೀವನ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ವೇದಿಕೆಯಾಗಿದೆ. ಹೀಗಾಗಿ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು ಶೈಕ್ಷಣಿಕ ಗುರಿ ಸಾಧನೆಗಾಗಿ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಗುರು&ಹಿರಿಯರು, ಹೆತ್ತವರನ್ನು ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು. ಉತ್ತಮ ನಡವಳಿಕೆ ಅಳವಡಿಸಿಕೊಳ್ಳಬೇಕು ಎಂದು ಡಾ. ನಿಶಾ ಎಸ್​. ಅಮೀನ್​ ಕಿವಿಮಾತು ಹೇಳಿದರು.
ಉಡುಪಿ ಬನ್ನಂಜೆಯಲ್ಲಿರುವ ಶ್ರೀನಾರಾಯಣ ಗುರು ಆಡಿಟೋರಿಯಂನಲ್ಲಿ ಬಿಲ್ಲವರ ಸೇವಾ ಸಂಘ ಉಡುಪಿ (ರಿ.) ಬನ್ನಂಜೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 2026-27ನೇ ಸಾಲಿನ ಪ್ರಥಮ ಮತ್ತು ದ್ವಿತೀಯ ಪಿಯುಸಿ ಕಲಿಯುತ್ತಿರುವ ಸಮುದಾಯದ 411 ವಿದ್ಯಾರ್ಥಿಗಳಿಗೆ ಒಟ್ಟು 3.70 ಲಕ್ಷ ರೂ. ಮೌಲ್ಯದ ಪಠ್ಯ ಪುಸ್ತಕ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.
ಸಂದ ಅಧ್ಯಕ್ಷ ಶಶಿಧರ್​ ಎಂ. ಅಮೀನ್​ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸದಾನಂದ್​ ಪೂಜಾರಿ, ಕೋಶಾಧಿಕಾರಿ ಸದಾನಂದ್​ ಅಮೀನ್​, ಸದಸ್ಯರಾದ ಮಾಧವ ಪೂಜಾರಿ ಬನ್ನಂಜೆ, ಲಕ್ಷ್ಮಣ ಪೂಜಾರಿ, ಡಾ. ಸಂದೀಪ್​ ಸನಿಲ್​, ಸುಕನ್ಯಾ ಕಡೆಕಾರ್​, ಅಶೋಕ್​ ಪೂಜಾರಿ ಕೋಡಂಕೂರು, ಸತೀಶ್​ ಅಮೀನ್​, ವಿಶ್ವನಾಥ್​ ಕಲ್ಮಾಡಿ, ಸುಧಾಕರ್​ ಪೂಜಾರಿ, ಕಿರಣಕುಮಾರ್​, ಜಿತೇಶ್​, ಜಯಕರ್​ ಅಮೀನ್​, ವಿಠ್ಠಲ ಪೂಜಾರಿ, ರಾಘು ಕೋಟ್ಯಾನ್​ ಉಪ್ಪಸ್ಥಿತರಿದ್ದರು. 
ಸಂಘದ ಪುರೋಹಿತ ದಯಾಕರ್​ ಶಾಂತಿ ಪ್ರಾರ್ಥಿಸಿದರು. ಕಾರ್ಯದರ್ಶಿ ದಯಾನಂದ್​ ಪೂಜಾರಿ ಸ್ವಾಗತಿಸಿದರು. ಸದಸ್ಯ ಸೂರ್ಯಪ್ರಕಾಶ್​ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಕಾರ್ಯದರ್ಶಿ ರಾಘವೇಂದ್ರ ಅಮೀನ್​ ವಂದಿಸಿದರು. ನಿಶಾ ಬನ್ನಂಜೆ ಕಾರ್ಯಕ್ರಮ ನಿರೂಪಿಸಿದರು.