ಮಾರಾಳಿ ಶ್ರೀ ಮಹಾಗಣಪತಿ ದೇವಸ್ಥಾನ ವರ್ಧಂತ್ಯುತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ದಾನಿಗಳಾದ ಕಾಶೀನಾಥ್ ಶೆಣೈ ಕಜ್ಕೆ, ಉಮೇಶ್ ಪೈ ದಂಪತಿ, ರಶ್ಮಿ ಸಂತೋಷ್ ಹೆಗ್ಡೆ ವಾರಾಳಿ, ಸಿಎ ರುರಾಮ್ ಮರಕಾಲ ಎಂ.ಎಚ್., ಪ್ರಸಾದ ಹೆಗ್ಡೆ ಮಾರಾಳಿ ಅವರನ್ನು ಗೌರವಿಸಲಾಯಿತು. ಪ್ರಮುಖರಾದ ವಿವೇಕಾನಂದ ಶೆಟ್ಟಿ, ಪ್ರತಾಪ್ ಹೆಗ್ಡೆ ವಾರಾಳಿ ಮತ್ತಿತರರು ಉಪಸ್ಥಿತರಿದ್ದರು.
ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ
ನಾವು ದೇವರ ಶಕ್ತಿಗೆ ಮಣಿಯಬೇಕಿದೆ. ಗ್ರಾಮದ ಶಾಲೆ ಮತ್ತು ದೇವಸ್ಥಾನಗಳು ಕೇವಲ ಅಧಿಕಾರಿ ವರ್ಗದವರಿಂದ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಇವರ ಜತೆ ಭಕ್ತರ ಸಹಕಾರ ಅಗತ್ಯ ಎಂದು ಮಾರಾಳಿ ಶ್ರೀ ಮಹಾಗಣಪತಿ ದೇವಸ್ಥಾನ ಅರ್ಚಕ ಬಾಲಕೃಷ್ಣ ಕರಬ ಹೇಳಿದರು.
ಮಾರಾಳಿ ಶ್ರೀ ಮಹಾಗಣಪತಿ ದೇವಸ್ಥಾನ ವರ್ಧಂತ್ಯುತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ವಾತನಾಡಿದರು.
ದೇವಸ್ಥಾನದ ಅಭಿವೃದ್ಧಿಗೆ ಸಹಕರಿಸಿದ ದಾನಿಗಳಾದ ಕಾಶೀನಾಥ್ ಶೆಣೈ ಕಜ್ಕೆ, ಉಮೇಶ್ ಪೈ ದಂಪತಿ, ರಶ್ಮಿ ಸಂತೋಷ್ ಹೆಗ್ಡೆ ವಾರಾಳಿ, ಸಿಎ ರುರಾಮ್ ಮರಕಾಲ ಎಂ.ಎಚ್., ಬಾಬು ಮರಕಾಲ, ಪ್ರಸಾದ ಹೆಗ್ಡೆ ವಾರಾಳಿ, ಉದಯ್ ಶೆಟ್ಟಿ ಗೊರಟಿ ಅವರನ್ನು ಗೌರವಿಸಲಾಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿವೇಕಾನಂದ ಶೆಟ್ಟಿ, ಜಿಪಂ ನಿಕಟಪೂರ್ವ ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ ಮತ್ತಿತರರು ಉಪಸ್ಥಿತರಿದ್ದರು. ಪ್ರಭಾಕರ ಆಚಾರ್ಯ ನಿರೂಪಿಸಿದರು.
ಶ್ರೀ ಕ್ಷೇತ್ರದಲ್ಲಿ ಗುರುವಾರ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ನವಗ್ರಹಯಾಗ, ಮಹಾಪೂಜೆ, ನಾಗ ಸನ್ನಿಧಿಯಲ್ಲಿ ನವಕ ಪ್ರಧಾನ, ಅಧಿವಾಸ ಹೋಮ, ಆಶ್ಲೇಷಾ ಬಲಿದಾನ ಕಲಶಾಭಿಷೇಕ, ಮಹಾಪೂಜೆ, ರಂಗಪೂಜೆ, ಬೊಬ್ಬರ್ಯನ ಸನ್ನಿಧಿಯಲ್ಲಿ ನವಕ ಪ್ರಧಾನ, ಅಧಿವಾಸ ಹೋಮ, ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಶ್ರೀ ದೇವರ ಸನ್ನಿಧಿಯಲ್ಲಿ ವಾಸ್ತು ರಾಕ್ಷ್ನೋ ಹೋಮಗಳು, ವಾಸ್ತು ಪೂಜೆ, ಅಗ್ನಿ ಜನನ ಹೋಮ, 108 ಕಲಶ ಸ್ಥಾಪನೆ ನೆರವೇರಿತು. ಶುಕ್ರವಾರ ಬೆಳಗ್ಗೆ ದೇವತಾ ಪ್ರಾರ್ಥನೆ, ಅಷ್ಟೋತ್ತರ ಶತ ಕುಂಭ ಸ್ನಪನ ಅಧಿವಾಸ ಹೋಮ, ನಾಗ ಸನ್ನಿಧಿಯಲ್ಲಿ ಸಹಸ್ರನಾರಿಕೇಳ ಗಣಪತಿ ಯಾಗ, ಕಲಶಾಭಿಷೇಕ, ಮಹಾಪೂಜೆ, ನಾಗ ಸಂದರ್ಶನ, ಪಲ್ಲಪೂಜೆ, ತುಲಾಭಾರ, ಭಜನಾ ಕಾರ್ಯಕ್ರಮ, ಭರತನಾಟ್ಯ, ಅನ್ನಸಂತರ್ಪಣೆ, ಮಹಾರಂಗಪೂಜೆ, ಪ್ರಸಾದ ವಿತರಣೆ, ಸಭಾ ಕಾರ್ಯಕ್ರಮ, ಜಾಂಬವತಿ ಕಲ್ಯಾಣ ಹಾಗೂ ಭೀಷ್ಮ ವಿಜಯ ಯಕ್ಷಗಾನ ಜರುಗಿತು.