Theft 
ಉಡುಪಿ

ದೇವಸ್ಥಾನದ ಗಂಟೆ ಕಳವು

ಇಂದಿರಾ ಎನ್ ಕೆ

ಕುಂದಾಪುರ: ಬೀಜಾಡಿ ಗ್ರಾಮದ ಶ್ರೀ ನಂದೀಕೇಶ್ವರ ದೇವಸ್ಥಾನದ ಗಂಟೆ ಕಳವು ಮಾಡಲಾಗಿದೆ. ರಾತ್ರಿ ದೇವಸ್ಥಾನದ ಗಂಟೆ ಶಬ್ದ ಕೇಳಿದಾಗ ದೇವಳ ಸಮೀಪದ ಮನೆಯವರಾದ ಶ್ರೇಯಸ್ ಮತ್ತು ಧೀರಜ್ ಹೊರಗೆ ಬಂದು ನೋಡಿದಾಗ ದೇವಸ್ಥಾನದ ಬಳಿ ಕಾರು ನಿಂತಿತ್ತು.

ಅನುಮಾನಗೊಂಡು ಕಾರು ಬಳಿ ಹೋದಾಗ ಸಫಾದ್ ಎಂಬಾತ ಗಂಟೆ ಕಳವು ಮಾಡಿ ಓಡಿದ್ದಾನೆ. ಕಾರಿನಲ್ಲಿದ್ದ ಮುಜಾಯಿದ್ ಎಂಬಾತ ಶ್ರೇಯಸ್ ಹಾಗೂ ಧೀರಜ್ ಮೇಲೆ ಕಾರು ಹತ್ತಿಸಲು ಮುಂದಾಗಿದ್ದಾನೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾವಿಗೆ ಹಾರಿ ಆತ್ಮಹತ್ಯೆ

ಕುಂದಾಪುರ: ವಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಕಾವ್ರಾಡಿ ಗ್ರಾಮದ ನಾರಾಯಣ ಕುವಾರ ಶೆಟ್ಟಿ(40) ಎಂಬುವರು ಬಾವಿಗೆ ಹಾರಿ ಆತ್ಮಹತ್ಯೆ ವಾಡಿಕೊಂಡಿದ್ದಾರೆ. ಅವರಿಗೆ ಕುಂದಾಪುರದಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರೂ ಯಾವುದೇ ಚೇತರಿಕೆ ಇರಲಿಲ್ಲ. ಹಿಂದೆ 2-3 ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಕುಂದಾಪುರ ಗ್ರಾವಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.