ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಎಂಸಿಎ ವಿಭಾಗದ ಎಂಸಿಎ ಎಕ್ಸ್‌ಪ್ರೊ-2025 ಕಾರ್ಯಕ್ರಮದಲ್ಲಿ ಚೈತ್ರಾ ಸಾಲಿಯನ್, ಡಾ.ಸುಬ್ರಮಣ್ಯ ಭಟ್, ಡಾ.ವೀಣಾ ಬಿ.ಕೆ. ಮತ್ತಿತರರು ಉಪಸ್ಥಿತರಿದ್ದರು. 
ಉಡುಪಿ

ಸರ್ವತೋಮುಖ ಬೆಳವಣಿಗೆಗೆ ತಾಂತ್ರಿಕ ಜ್ಞಾನ

ಇಂದಿರಾ ಎನ್ ಕೆ
ಕಾರ್ಕಳ: ಎಂಸಿಎ ವಿದ್ಯಾರ್ಥಿಗಳು ತಮ್ಮ ಸರ್ವತೋಮುಖ ಬೆಳವಣಿಗೆಗಾಗಿ ತಾಂತ್ರಿಕ ಹಾಗೂ ಅತಾಂತ್ರಿಕ ಜ್ಞಾನಕ್ಕೆ ಸಮಾನ ಮಹತ್ವ ನೀಡಬೇಕು. ಎಂಸಿಎ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನ ವೃದ್ಧಿಗಾಗಿ ಇಂಥ ಪ್ರಾಜೆಕ್ಟ್ ಪ್ರದರ್ಶನಗಳು ಬಹುಮುಖ್ಯವಾಗಿದೆ ಎಂದು ಶಿರಾಂಶ್ ವೆಂಚರ್ಸ್ ಪ್ರೈ.ಲಿ. ನಿರ್ದೇಶಕಿ ಶಿಲ್ಪಾ ರಂಜಿತ್ ಶೆಟ್ಟಿ ಹೇಳಿದರು.
ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಎಂಸಿಎ ವಿಭಾಗ ಸೋಮವಾರ ಆಯೋಜಿಸಿದ್ದ ಎಂಸಿಎ ಎಕ್ಸ್‌ಪ್ರೊ -2025 ಉದ್ಘಾಟಿಸಿ ಮಾತನಾಡಿದರು.
ನಿಟ್ಟೆ ತಾಂತ್ರಿಕ ಕಾಲೇಜು ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಪ್ಲೂಣ್ಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಉತ್ಸಾಹ ಹೆಚ್ಚುತ್ತಿರುವುದರಿಂದ ಪ್ರಾಜೆಕ್ಟ್‌ಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚುತ್ತಿದೆ ಎಂದರು.
ನಿಟ್ಟೆ ವಿ.ವಿ.ತಾಂತ್ರಿಕ ಶಿಕ್ಷಣ ವಿಭಾಗ ಉಪಾಧ್ಯಕ್ಷ ಡಾ.ಗೋಪಾಲ್ ಮುಗೆರಾಯ ಮಾತನಾಡಿದರು.
ಸ್ಕ್ಲೆರಾ ಕಂಪನಿಯ ಐಒಎಸ್ ಡೆವಲಪರ್ ಚೈತ್ರಾ ಸಾಲಿಯಾನ್, ಅಕಮೈ ಟೆಕ್ನಾಲಜೀಸ್‌ನ ಎಸ್‌ಆರ್‌ಇ ವೇಲನಾ ಸಲೀಸ್, ನಿಟ್ಟೆ ಆಫ್ ಕ್ಯಾಂಪಸ್ ಸೆಂಟರ್‌ನ ಪರೀಕ್ಷಾ ನಿಯಂತ್ರಕ ಡಾ.ಸುಬ್ರಹ್ಮಣ್ಯ ಭಟ್, ಡಾ.ಎನ್‌ಎಸ್‌ಎಎಂ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಡಾ.ವೀಣಾ ಬಿ.ಕೆ., ಹಳೇ ವಿದ್ಯಾರ್ಥಿ ಸಂಘದ ಖಜಾಂಚಿ ಡಾ.ಹರ್ಷಿತಾ, ಡಾ.ಸಾರಿಕಾ ಹೆಗ್ಡೆ, ಡಾ.ಮಂಜುಳಾ ಗುರುರಾಜ್ ಮತ್ತು ಡಾ.ಶಬರಿ ಶೆಟ್ಟಿ ಉಪಸ್ಥಿತರಿದ್ದರು.
ಎಂಸಿಎ ವಿಭಾಗದ ಮುಖ್ಯಸ್ಥೆ ಡಾ.ಮಮತಾ ಬಲಿಪ ಸ್ವಾಗತಿಸಿ. ಪ್ರಾಜೆಕ್ಟ್ ಸಂಯೋಜಕಿ ಡಾ.ಸ್ಫೂರ್ತಿ ಶೆಟ್ಟಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಕೀರ್ತಿ ಶೆಟ್ಟಿ ವಂದಿಸಿದರು. ಸೋಹನ್ ನಿರೂಪಿಸಿದರು. 170ಕ್ಕೂ ಹೆಚ್ಚು ಪ್ರಾಜೆಕ್ಟ್‌ಗಳನ್ನು ಪ್ರದರ್ಶಿಸಲಾಯಿತು.