ಸ್ವಉದ್ಯೋಗ ತರಬೇತಿ ಪಡೆದವರಿಗೆ ಸ್ಪೀಕರ್ ಯು.ಟಿ.ಖಾದರ್ ಪ್ರಮಾಣಪತ್ರ ವಿತರಿಸಿದರು. ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್, ಜಮೀಯತುಲ್ ಲಾಹ್, ತಾಲೂಕು ಕೋಶಾಧಿಕಾರಿ ಅಬ್ದುಲ್ ನಾಸೀರ್ ಕೆ.ಕೆ.ಮತ್ತಿತರರು ಉಪಸ್ಥಿತರಿದ್ದರು. 
ಉಡುಪಿ

ತಂಡವಾಗಿ ಕಾರ್ಯನಿರ್ವಹಣೆ ಉದ್ಯಮಕ್ಕೆ ದಾರಿ

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಅವಕಾಶದ ಸದುಪಯೋಗ ಜಾಣತನ, ಎಂಬ್ರಾಯ್ಡರಿ ತರಬೇತಿ ಪಡೆದವರು ತಂಡವಾಗಿ ಕಾರ್ಯನಿರ್ವಹಿಸಿದರೆ ಉದ್ಯಮದ ರೂಪ ನೀಡಲು ಸಾಧ್ಯ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ಮಂಗಳೂರು ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ, ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್ ಸಹಕಾರದಲ್ಲಿ ಕೊಣಾಜೆ ಮಂಗಳ ಗ್ರಾಮೀಣ ಯುವಕ ಸಂಘದ ಆಶ್ರಯದಲ್ಲಿ ನಡೆದ ಸ್ವಉದ್ಯೋಗ ತರಬೇತಿ ಶಿಬಿರ ಸಮಾರೋಪ ಸಮಾರಂಭದಲ್ಲಿ ತರಬೇತಿ ಪಡೆದವರಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.
ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್, ಜಮೀಯತುಲ್ ಲಾಹ್, ತಾಲೂಕು ಕೋಶಾಧಿಕಾರಿ ಅಬ್ದುಲ್ ನಾಸೀರ್ ಕೆ.ಕೆ., ಮಾಜಿ ಅಧ್ಯಕ್ಷ ಅಚ್ಚುತ ಗಟ್ಟಿ, ಕೊಣಾಜೆ ಗ್ರಾಪಂ ಸದಸ್ಯರಾದ ಇಕ್ಬಾಲ್ ಕೊಣಾಜೆ, ವಕ್ಫ್ ರಾಜ್ಯ ಸಮಿತಿ ಸದಸ್ಯ ಅಬ್ದುಲ್ ರಹ್ಮಾನ್ ಕೋಡಿಜಾಲ್, ಅಮೀರ್ ಕೋಡಿಜಾಲ್, ಶರ್ೀ ಕೋಡಿಜಾಲ್, ಸಿದ್ದೀಕ್, ಶಿಕ್ಷಕಿ ಖೈರುನ್ನಿಸಾ ಮೊದಲಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸಹ್ಲಾ ಸ್ವಾಗತಿಸಿದರು.
ವಿಜಯ ಗ್ರಾಮೀಣ ಪ್ರತಿಷ್ಠಾನದ ಕಾರ್ಯದರ್ಶಿ ಅಚ್ಚುತ ಗಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಗಳಾ ಗ್ರಾಮೀಣ ಯುವಕ ಸಂಘ ಅಧ್ಯಕ್ಷ ಎ.ಕೆ.ಅಬ್ದುಲ್ ರಹ್ಮಾನ್ ಕೊಣಾಜೆ ವಂದಿಸಿದರು. ಅಲೀಮಾ ರ್ಹಾನ ನಿರೂಪಿಸಿದರು.

ಮಹಿಳೆಯರ ಸ್ವಉದ್ಯೋಗಕ್ಕಾಗಿ 40 ವರ್ಷಗಳಿಂದ ಸಂಘ-ಸಂಸ್ಥೆಗಳ ಸಹಕಾರದಲ್ಲಿ ನಿರಂತರ ಕಾರ್ಯಕ್ರಮ ನಡೆಸುತ್ತಾ ಬರಲಾಗಿದೆ. ಈ ಮೂಲಕ ಮಹಿಳೆಯರು ಸಮಾಜದಲ್ಲಿ ಸ್ವಾವಲಂಬಿಗಳಾಗಿ ಬದುಕುವುದಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.