ಬೆಳ್ವೆ ಶ್ರೀ ಸಂದೇಶ ಕಿಣಿ ಮೆಮೋರಿಯಲ್ ಸಭಾಂಗಣದಲ್ಲಿ ನಮ್ಮ ನಾಡ ಒಕ್ಕೂಟ ಹೆಬ್ರಿ ಘಟಕದ ವತಿಯಿಂದ ಮುಖ್ಯಶಿಕ್ಷಕಿ ಸರಸ್ವತಿ ಅವರನ್ನು ಸನ್ಮಾನಿಸಲಾಯಿತು.
ವಿಜಯವಾಣಿ ಸುದ್ದಿಜಾಲ ಬೆಳ್ವೆ
ಸಂಘ ಸಂಸ್ಥೆಗಳು ಸಮಾಜ ಸೇವೆಯೊಂದಿಗೆ ಗುರುತಿಸಿಕೊಳ್ಳಬೇಕು. ನಿಷ್ಠೆ, ಪ್ರಮಾಣಿಕ ಸೇವೆಗೆ ಸಮಾಜದಲ್ಲಿ ಉನ್ನತ ಸ್ಥಾನಮಾನ ಗೌರವವಿದೆ. ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕ ವೃತ್ತಿ ಶ್ರೇಷ್ಠವಾದದ್ದು ಎಂದು ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ವೈ ಪಟ್ಟಾಭಿರಾಮ್ ಭಟ್ ಮರೂರು ಹೇಳಿದರು.
ಬೆಳ್ವೆ ಶ್ರೀ ಸಂದೇಶ ಕಿಣಿ ಮೆಮೋರಿಯಲ್ ಸಭಾಂಗಣದಲ್ಲಿ ನಮ್ಮ ನಾಡ ಒಕ್ಕೂಟ ಹೆಬ್ರಿ ಘಟಕದ ವತಿಯಿಂದ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ನಾಡ ಒಕ್ಕೂಟ ಹೆಬ್ರಿ ಘಟಕ ಅಧ್ಯಕ್ಷ ಮೊಹಮ್ಮದ್ ರಫೀಕ್ ಅಜೆಕಾರು ಅಧ್ಯಕ್ಷತೆ ವಹಿಸಿದರು. ಸಾಹಿತಿ ಮುಸ್ತಾಕ್ ಹೆನ್ನಾಬೈಲ್, ನಮ್ಮ ನಾಡ ಒಕ್ಕೂಟ ಸೆಂಟ್ರಲ್ ಕಮಿಟಿ ಕೋಶಾಧಿಕಾರಿ ಫೀರ್ ಸಾಹೇಬ್ ಉಡುಪಿ, ಜಿಲ್ಲಾ ವೇದಿಕೆ ಉಪಾಧ್ಯಕ್ಷ ಮುನಾವರ್ ಅಜೆಕಾರು, ಮಾಜಿ ಅಧ್ಯಕ್ಷ ಮುಸ್ತಾಕ್ ಅಹಮ್ಮದ್ ಬೆಳ್ವೆ, ಹೆಬ್ರಿ ಘಟಕದ ಉಪಾಧ್ಯಕ್ಷ ಸಮದ್ ಹೈಕಾಡಿ, ಅನ್ಸಾರ್ ಹೊಸಂಗಡಿ, ಜಿಲ್ಲಾ ಸಮಿತಿ ಸದಸ್ಯ ಹರೂನ್ ರಶೀದ್ ಸಾಸ್ತಾನ, ಶಾಕಿರ್ ಹಾವಂಜೆ, ಕುಂದಾಪುರ ತಾಲೂಕು ಅಧ್ಯಕ್ಷ ಜಮಾಲ್ ಗುಲ್ವಾಡಿ, ಬೆಳ್ವೆ ಜುಮ್ಮಾ ಮಸೀದಿ ಅಧ್ಯಕ್ಷ ಅಹಮದ್ ಬ್ಯಾರಿ, ಶರೀಫ್ ಸಾಹೇಬ್ ಬೆಳ್ವೆ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಅರಾಫತ್ ಸ್ವಾಗತಿಸಿದರು. ಮೊಹಮ್ಮದ್ ರಬಿ ಕಿರಾತ್ ಪಠಿಸಿದರು. ರಯಾನ್ ಬೆಳ್ವೆ ನಿರೂಪಿಸಿದರು. ಬೆಳ್ವೆ ಮಸೀದಿಯ ಖತೀಬರಾದ ಮೌಲಾನಾ ಮೊಹಮ್ಮದ್ ರಫೀಕ್ ಬೆಳ್ವೆ ದುವಾ ನೆರವೇರಿಸಿದರು. ಹೆಬ್ರಿ ಘಟಕದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಶುಕುರ್ ಬೆಳ್ವೆ ಸಹಕರಿಸಿದರು.
ಉಡುಪಿ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಬೆಳ್ವೆ ಸಮೀಪದ ಮರೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಸರಸ್ವತಿ, ದಕ್ಷಿಣ ಭಾರತ ಕರಾಟೆ ಚಾಂಪಿಯನ್ ವಿಜೇತ ವಿದ್ಯಾರ್ಥಿ ಅಬ್ದುಲ್ ಮಲಿಕ್, 2024-25ನೇ ಸಾಲಿನ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ಶೇಖ್ ಅಬ್ದುಲ್ ಝಾಹಿದ್ ಹಾಗೂ ಶಾಹುಲ್ ಹಮೀದ್ ಅಜೆಕಾರು ಅವರನ್ನು ಸನ್ಮಾನಿಸಲಾಯಿತು.