ಹರಿಕಥಾ ಪರಿಷತ್ ಮಂಗಳೂರು, ರಾಮಕೃಷ್ಣ ಮಿಷನ್ ಸಹಯೋಗದೊಂದಿಗೆ ಮಠದ ಸಭಾಂಗಣದಲ್ಲಿ ಆಯೋಜಿಸಿದ್ದ ಹರಿಕಥಾಸ್ಪರ್ಧೆ ಸಮಾರೋಪ ಸಮಾರಂಭದಲ್ಲಿ ಸ್ವಾಮಿ ಅನುಪಮಾನಂದಜಿ ಆಶೀರ್ವಚನ ನೀಡಿದರು. 
ಉಡುಪಿ

ಶಿಕ್ಷಣ ಸಂಸ್ಥೆಗಳಲ್ಲಿ ಸಂಸ್ಕೃತಿ ಬೋಧನೆ: ಸ್ವಾಮಿ ಅನುಪಮಾನಂದಜಿ ಪ್ರತಿಪಾದನೆ

ಇಂದಿರಾ ಎನ್ ಕೆ
ಮಂಗಳೂರು: ಆಧುನಿಕ ವಾತಾವರಣದಲ್ಲಿ ವಿದ್ಯಾರ್ಥಿಗಳು ಪಾಶ್ಚಾತ್ಯ ಸಂಗತಿಗಳ ಆಕರ್ಷಣೆಗೆ ಒಳಗಾಗದಂತೆ ಶಿಕ್ಷಣ ಸಂಸ್ಥೆಗಳಲ್ಲಿ ನಮ್ಮ ಸಂಸ್ಕೃತಿ ಕಲೆಗಳ ಬೋಧನೆ ಅಳವಡಿಸಲು ಹೆತ್ತವರು ಒತ್ತಾಯಪಡಿಸುವ ಅಗತ್ಯವಿದೆ ಎಂದು ಆಂಧ್ರಪ್ರದೇಶ ಕಡಪ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಅನುಪಮಾನಂದಜೀ ಮಹಾರಾಜ್ ಅಭಿಪ್ರಾಯಪಟ್ಟರು.
ಹರಿಕಥಾ ಪರಿಷತ್ ಮಂಗಳೂರು, ರಾಮಕೃಷ್ಣ ಮಿಷನ್ ಸಹಯೋಗದೊಂದಿಗೆ ಮಠದ ಸಭಾಂಗಣದಲ್ಲಿ ಆಯೋಜಿಸಿದ್ದ ಹರಿಕಥಾಸ್ಪರ್ಧೆ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಮಾತನಾಡಿ, ಶಿಷ್ಟ ಕಲಾ ಪ್ರದರ್ಶನಗಳಿಗೆ ತಮ್ಮ ಮಠದಲ್ಲಿ ಮುಕ್ತ ಅವಕಾಶವಿದೆ, ಹರಿಕಥಾ ಪರಿಷತ್ತಿನಿಂದ ಈ ಅವಕಾಶದ ಸದ್ವಿನಿಯೋಗವಾಗಿದೆ ಎಂದರು. 
 ಹರಿಕಥಾ ಪರಿಷತ್ ಅಧ್ಯಕ್ಷ ಕೆ ಮಹಾಬಲ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ಎಸ್.ಕೆ.ಜಿ.ಇಂಡಸ್ಟ್ರಿಯಲ್ ಕೋ ಆಪರೇಟಿವ್ ನಿರ್ದೇಶಕ ವೈ.ವಿ.ವಿಶ್ವಜ್ಞಮೂರ್ತಿ, ಹೊಸಬೆಟ್ಟು ಗ್ರಾಮ ಸಂಘದ ಅಧ್ಯಕ್ಷ ಜಯಚಂದ್ರ ಹತ್ವಾರ್, ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಯಕ್ಷಗಾನ ಪ್ರತಿಷ್ಠಾನ ಅಧ್ಯಕ್ಷ ಸುಂದರ ಶೆಟ್ಟಿ ಬೆಟ್ಟಂಪಾಡಿ, ಸ್ವರ್ಣೋದ್ಯಮಿ ಎಂ. ರವೀಂದ್ರ ಶೇಟ್ ಶುಭ ಕೋರಿದರು. 
ಹರಿಕಥಾ ಪರಿಷತ್ ಉಪಾಧ್ಯಕ್ಷ ಕೆ.ನಾರಾಯಣ ರಾವ್, ಸುಧಾಕರ ರಾವ್ ಪೇಜಾವರ ಉಪಸ್ಥಿತರಿದ್ದರು. ಮಹೇಶ್ ಕುಮಾರ್, ಶ್ರದ್ಧಾ, ವೈಭವಿ, ಜಯಶ್ರೀ ಸಹಕರಿಸಿದರು. ಕೋಶಾಧಿಕಾರಿ ಡಾ.ಎಸ್.ಪಿ.ಗುರುದಾಸ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಶಂ.ನಾಡಿಗ ಕುಂಬ್ಳೆ ವಂದಿಸಿದರು.

ಹರಿಕಥಾಸ್ಪರ್ಧೆ ಫಲಿತಾಂಶ 

ಕಿರಿಯರ ವಿಭಾಗದ ವಿಜೇತರಲ್ಲಿ ಪ್ರಥಮ- ದೇವಿಕಾ ಕೆ.10ನೇ ತರಗತಿ, ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಮಾಣಿ. ದ್ವಿತೀಯ- ಪ್ರಣಮ್ಯ ಕೆ.ಎಸ್. 6ನೇ ತರಗತಿ ಸರಕಾರಿ ಹಿ.ಪ್ರಾ.ಶಾಲೆ ಮೊಗ್ರಾಲ್ ಪುತ್ತೂರು. ತೃತೀಯ-ಅಪೂರ್ವ ರಾವ್ ಕರಿಂಗಾಣ, 9ನೇ ತರಗತಿ ಎಸ್‌ವಿಎಎಸ್ ಟೆಂಪಲ್ ಆಂಗ್ಲ ಮಾಧ್ಯಮ ಶಾಲೆ ಬಂಟ್ವಾಳ. ಹಿರಿಯರ ವಿಭಾಗ: ಪ್ರಥಮ-ಭಾವನಾ ನಾಯಕ್ ದ್ವಿತೀಯ ಪಿಯುಸಿ, ಈಶ್ವರಾನಂದ ಭಾರತಿ ಸ್ವಾಮಿ ಹೈಯರ್ ಸೆಕೆಂಡರಿ ಶಾಲೆ ಎಡನೀರು. ದ್ವಿತೀಯ- ಮಾನಸ ನಾಡಿಗ್, ಬಿಎ ಮೂರನೇ ವರ್ಷ (ಸಂಸ್ಕೃತ), ಭಾರತೀ ತೀರ್ಥ ಶಾಸ್ತ್ರ ಸಮುತ್ಕರ್ಷ ಕೇಂದ್ರ, ಶೃಂಗೇರಿ, ತೃತೀಯ- ಪೂಜಾ ವಾಸುದೇವ ಐಲ ವಿಶ್ವವಿದ್ಯಾನಿಲಯ ಕಾಲೇಜ್ ಮಂಗಳೂರು. ಹಿರಿಯ ಕಿರಿಯ ವಿಭಾಗದ ಒಟ್ಟು ಐದು ಮಂದಿ ವಿಜೇತರು ಕುಂಬ್ಳೆ ಕೀರ್ತನ ಕುಟೀರದ ಹರಿಕಥಾ  ಶಿಕ್ಷಣಾರ್ಥಿಗಳಾಗಿದ್ದಾರೆ. ತೀರ್ಪುಗಾರರಾಗಿ ಮಂಗಳಾ ಟಿ.ಎಸ್, ಮನೋಹರ ರಾವ್, ಶೇಣಿ ಮುರಳಿ, ಮಂಗಲದಾಸ್ ಗುಲ್ವಾಡಿ, ಮಂಜುಳಾ ರಾವ್ ಇರಾ, ಚಂದ್ರಕಾಂತ ಭಟ್ ಇದ್ದರು.