ಶಿಕ್ಷಕರ ವರ್ಗಾವಣೆ ಖಂಡಿಸಿ ಕೆಎಸ್‌ಟಿಎ ವತಿಯಿಂದ ಡಿಇಓ ಕಚೇರಿ ಎದುರು ಪ್ರತಿಭಟಿಸಲಾಯಿತು. ಪ್ರಮುಖರಾದ ರಾವನ್, ಕೆ.ಹರಿದಾಸ್, ಟಿ.ಪ್ರಕಾಶನ್ ಇತರರಿದ್ದರು. 
ಉಡುಪಿ

ಶಿಕ್ಷಕರಿಂದ ಡಿಇಒ ಕಚೇರಿ ಮುಂದೆ ಪ್ರತಿಭಟನೆ

ಕಾಸರಗೋಡು: ಕೇರಳ ಶಾಲಾ ಶಿಕ್ಷಕರ ಸಂದ ರಾಜ್ಯ ಕಾರ್ಯದರ್ಶಿ ಪಿ.ಜೆ.ಬಿನೇಶ್ ಮತ್ತು ವಯನಾಡ್ ಜಿಲ್ಲಾ ಜಂಟಿ ಕಾರ್ಯದರ್ಶಿ ವಿಲ್ಸನ್ ಥಾಮಸ್ ಅವರನ್ನು ರಾಜಕೀಯ ಪ್ರೇರಿತವಾಗಿ ಕಾಸರಗೋಡಿಗೆ ವರ್ಗಾಯಿಸಿರುವುದನ್ನು ವಿರೋಧಿಸಿ ಕೆಎಸ್‌ಟಿಎ ವತಿಯಿಂದ ಜಿಲ್ಲಾ ಶಿಕ್ಷಣಾಧಿಕಾರಿ ಕಚೇರಿ ಎದುರು ಪ್ರತಿಭಟಿಸಲಾಯಿತು.
ಶಿಕ್ಷಕರ ವರ್ಗಾವಣೆ ಆದೇಶ ಸುಟ್ಟುಹಾಕುವ ಮೂಲಕ ಪ್ರತಿಭಟನೆ ನಡೆಸಲಾಯಿತು. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನೆ ಆಯೋಜಿಸಲಾಗಿತ್ತು.
ಕಾಸರಗೋಡು ಪ್ರಧಾನ ಅಂಚೆ ಕಚೇರಿ ವಠಾರದಿಂದ ಆರಂಭಗೊಂಡ ಮೆರವಣಿಗೆ ಕಾಸರಗೋಡು ಕಂದಾಯ ಜಿಲ್ಲಾ ಶಿಕ್ಷಣಾಧಿಕಾರಿ ಕಚೇರಿ ತನಕ ನಡೆಯಿತು. ಕೆಎಸ್‌ಟಿಎ ರಾಜ್ಯ ಕೋಶಾಧಿಕಾರಿ ಕೆ. ರಾವನ್ ಧರಣಿ, ಕೆ.ಹರಿದಾಸ್, ಟಿ.ಪ್ರಕಾಶನ್, ಕೆ.ವಿ.ರಾಜೇಶ್, ಪಿ.ಶ್ರೀಕಲಾ, ಎಂ.ಸುನೀಲ್ ಕುವಾರ್, ಕೆ.ಜಿ.ಪ್ರತೀಶ್, ಕೆ.ಲಲಿತಾ, ಎಂ.ರಮೇಶ್, ಇ.ವಿನೋದ್ ಕುವಾರ್ ಉಪಸ್ಥಿತರಿದ್ದರು.