ಹರಿದ್ವಾರ ಪತಂಜಲಿ ಯೋಗ ಪೀಠದಲ್ಲಿ ಪರಿಣತಿ ಪಡೆದು ಮುಖ್ಯ ಯೋಗ ಶಿಕ್ಷಕರಾಗಿರುವ 10 ಯೋಗ ಸಾಧಕರನ್ನು ಗೌರವಿಸಲಾಯಿತು.
ಉಡುಪಿ: ಯೋಗ ಶಿಕ್ಷಕನಿಗೆ ತನ್ನ ಜೀವನದಲ್ಲಿ ನಿತ್ಯ ಯೋಗಾಭ್ಯಾಸ ಮತ್ತು ಧ್ಯಾನ ಅತೀ ಅಗತ್ಯವಾಗಿದೆ ಎಂದು ಪತಂಜಲಿ ಯೋಗ ವಿಸ್ತಾರಕ ರಾಘವೇಂದ್ರ ರಾವ್ ತಿಳಿಸಿದರು.
ಭಾನುವಾರ ಕಡಿಯಾಳಿಯ ಶ್ರೀ ಶರ್ವಾಣಿ ಮಂಟಪದಲ್ಲಿ ಪತಂಜಲಿ ಯೋಗ ಸಮಿತಿ ನೇತೃತ್ವದಲ್ಲಿ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಜಯರಾಘವ ರಾವ್ ಮುಖ್ಯ ಅತಿಥಿಗಳಾಗಿದ್ದರು. ಮುಖ್ಯ ಅತಿಥಿಗಳಾದ ದಾಸವಾಣಿ ಗಾಯನದಲ್ಲಿ ಗೋಲ್ಡನ್ ಬುಕ್ ಅವಾರ್ಡ್ ವಿಜೇತೆ ವಿದುಷಿ ಸಂಗೀತಾ ಬಾಲಚಂದ್ರ ಅವರನ್ನು ಗೌರವಿಸಲಾಯಿತು.
ಹರಿದ್ವಾರ ಪತಂಜಲಿ ಯೋಗ ಪೀಠ ದಲ್ಲಿ ಪರಿಣತಿ ಪಡೆದು ಮುಖ್ಯ ಯೋಗ ಶಿಕ್ಷಕರಾಗಿರುವ 10 ಯೋಗ ಸಾಧಕರಿಗೆ ಜಿಲ್ಲಾ ಸಮಿತಿಯಿಂದ ಗೌರವಾರ್ಪಣೆ ಮಾಡಲಾಯಿತು. ವೇದಿಕೆಯಲ್ಲಿ ಜಗದೀಶ್ ಕುಮಾರ್, ಹರಿಪ್ರಸಾದ್ ಕೆ, ಶ್ಯಾಮಲಾ ಕೆ, ರೋಹಿತ್ ಬಲ್ಲಾಳ್, ನಾಗರಾಜ್ ಶೇಟ್, ಶ್ರೀಪತಿ ಭಟ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪ್ರಭಾರಿ ವೆಂಕಟೇಶ್ ಮೆಹಂದಳೆ ಹಾಗೂ ಸುಮಂಗಲಾ ಆರ್. ಭಟ್ ಸನಾತನ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ವಿವಿಧ ಕಕ್ಷೆಯ ಯೋಗಾರ್ಥಿಗಳಿಂದ ಸಾಂಸ್ಕತಿಕ ಕಾರ್ಯಕ್ರಮಗಳು ಜರುಗಿದವು. ಪತಂಜಲಿ ರಾಜ್ಯ ಸಮಿತಿ ಸದಸ್ಯ ಹಾಗೂ ಜಿಲ್ಲಾ ಪ್ರಭಾರಿ ಕೆ. ರಾಘವೇಂದ್ರ ಭಟ್ ಸ್ವಾಗತಿಸಿದರು. ಯೋಗ ಶಿಕ್ಷಕ
ಲಕ್ಷಣ ಕಾಮತ್ ಕಾರ್ಯಕ್ರಮ ನಿರ್ವಹಿಸಿ, ವಂದನಾರ್ಪಣೆಗೈದರು.